ಕಳೆದ 4 ತಿಂಗಳಿಂದ ವೇತನ ಇಲ್ಲದೆ ಬದುಕಿನ ಬಂಡಿ ನೂಕಲು ಪರದಾಡುವಂತಾಗಿದೆ.
Advertisement
ಜಿಲ್ಲೆಯ ಶಿಡ್ಲಘಟ್ಟ,ಬಾಗೇಪಲ್ಲಿ,ಚಿಕ್ಕಬಳ್ಳಾಪುರ,ಚಿಂತಾಮಣಿ, ಗೌರಿಬಿದನೂರು, ಗುಡಿಬಂಡೆ ತಾಲೂಕುಗಳಲ್ಲಿ 2735 ಅಡುಗೆ ಮಾಡುವಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ, ಕಳೆದ ಏಪ್ರಿಲ್ ತಿಂಗಳಿಂದ ಅವರಿಗೆ ವೇತನ ಭಾಗ್ಯವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ.
Related Articles
ನೌಕರರು ತಮ್ಮ ವಿವಿಧ ಬೇಡಿಕೆ ಈಡೇರಿಸಲು ಈ ಹಿಂದೆ ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿ, ಸೇವಾ ಭದ್ರತೆ, ವೇತನವನ್ನು ನಿಗ ದಿತ ಅವಧಿಯಲ್ಲಿ ಪಾವತಿಸಲು ಮನವಿ ಸಹ ಸಲ್ಲಿಸಿದ್ದಾರೆ. ಆದರೆ, ಸರ್ಕಾರ ತನ್ನ ಯೋಜನೆಗಳನ್ನು ಪರಿಣಾಮಕಾರಿಯಾಗಿ
ಅನುಷ್ಠಾನಗೊಳಿಸಲು ಬಿಸಿಯೂಟ ನೌಕರರನ್ನು ಬಳಸಿಕೊಂಡಿದೆಯೇ ವಿನಃ, ಅವರಿಗೆ ಸಕಾಲದಲ್ಲಿ ವೇತನ ಪಾವತಿಸಲು ವಿಳಂಬ ನೀತಿ ಅನುಸರಿಸುತ್ತಿದೆ ಎಂಬ ಅಸಮಾಧಾನ ಕೇಳಿ ಬಂದಿದೆ.
Advertisement
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 2735 ಬಿಸಿಯೂಟ ನೌಕರರು ಇದ್ದಾರೆ. ಮಾರ್ಚ್‌ವರೆಗೆ ವೇತನ ಪಾವತಿಯಾಗಿಲ್ಲ. ಸರ್ಕಾರದಿಂದ ಮಂಜೂರಾದ ತಕ್ಷಣ ವಿತರಣೆಗೆ ಕ್ರಮಕೈಗೊಳ್ಳುತ್ತೇವೆ.-ಶೈಲಾ, ಶಿಕ್ಷಣಾಧಿಕಾರಿ, ಅಕ್ಷರ ದಾಸೋಹ
ಬಿಸಿಯೂಟ ಯೋಜನೆ ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಬಿಸಿಯೂಟ ನೌಕರರಿಗೆ ಕಳೆದ ನಾಲ್ಕು ತಿಂಗಳಿಂದ ವೇತನವಿಲ್ಲ. ಕುಟುಂಬ ನಿರ್ವಹಣೆಕಷ್ಟ ವಾಗಿದೆ.ಕಳೆದ ಸಾಲಿನಲ್ಲಿ ಶಾಲೆಗಳು ಸ್ಥಗಿತಗೊಂಡರೂ ಮಾರ್ಚ್‌ವರೆಗೆ ವೇತನ ಪಾವತಿಸಲಾಗಿದೆ. ನಂತರ ವೇತನ ಪಾವತಿಯಾಗಿಲ್ಲ, ಸರ್ಕಾರ ಕೂಡಲೇ ವೇತನ ಪಾವತಿಸಲು ಕ್ರಮಕೈಗೊಳ್ಳಬೇಕು.
-ಕೆ.ಎಸ್.ಮಂಜುಳಾ, ಕಾರ್ಯದರ್ಶಿ,
ಬಿಸಿಯೂಟ ನೌಕರರ ಸಂಘ -ಎಂ.ಎ.ತಮೀಮ್ ಪಾಷ