Advertisement

ಮಾ.16ರಿಂದ ನೌಕರರ ಸಂಘದ ಚುನಾವಣೆ

01:36 AM Feb 23, 2019 | Team Udayavani |

ಬೆಂಗಳೂರು: ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ 2018-23ನೇ ಸಾಲಿನ ಎಲ್ಲಾ ಹಂತದ ಸಾರ್ವತ್ರಿಕ ಚುನಾವಣೆಗಳನ್ನು ಮಾ.16 ರಿಂದ ಮೇ 21ರ ತನಕ ನಡೆಸಲು ತೀರ್ಮಾನಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಎಚ್‌.ಕೆ. ರಾಮು ಹೇಳಿದರು.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಂಘದ ಕೇಂದ್ರ ಕಾರ್ಯಕಾರಿ ಸಮಿತಿ ಹಾಗೂ ರಾಜ್ಯ ಪರಿಷತ್‌ ಮಹಾಸಭೆಗಳಲ್ಲಿ ಕೈಗೊಂಡ ನಿರ್ಣಯದಂತೆ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದರು. ಮಾ.16 ರಿಂದ 26ರ ತನಕ ಜಿಲ್ಲಾ, ತಾಲೂಕು ಶಾಖೆ ಹಾಗೂ ಯೋಜನಾ ಘಟಕಗಳ ಕಾರ್ಯಕಾರಿ ಸಮಿತಿ ಚುನಾವಣೆಗಳು, ಮಾ.28 ರಿಂದ ಏ.8 ರ ತನಕ ತಾಲೂಕು ಶಾಖೆ, ಯೋಜನಾ ಘಟಕಗಳ ಅಧ್ಯಕ್ಷರು, ಕೋಶಾಧಿಕಾರಿ ಹಾಗೂ ರಾಜ್ಯ ಪರಿಷತ್‌ ಸದಸ್ಯರ ಚುನಾವಣೆಗಳು, ಏ.9 ರಿಂದ 22ರ ತನಕ ಜಿಲ್ಲಾ ಶಾಖೆ ಅಧ್ಯಕ್ಷರು, ಕೋಶಾಧಿಕಾರಿ ಮತ್ತು ರಾಜ್ಯ ಪರಿಷತ್‌ ಸದಸ್ಯರ ಚುನಾವಣೆಗಳು, ಮಾ. 21 ರಿಂದ ಏ.16 ರ ತನಕ ಬೆಂಗಳೂರು ನಗರ ರಾಜ್ಯ ಪರಿಷತ್‌ ಸದಸ್ಯರ ಇಲಾಖಾವಾರು ಚುನಾವಣೆಗಳು, ಏ.23 ರಿಂದ ಮೇ 21ರ ತನಕ ಕೇಂದ್ರ ಸಂಘದ ಅಧ್ಯಕ್ಷರು ಮತ್ತು ಕೋಶಾಧಿಕಾರಿ ಸ್ಥಾನದ ಚುನಾವಣೆಗಳು ನಡೆಯಲಿವೆ ಎಂದು ತಿಳಿಸಿದರು. ಅಪರ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ರಾಜ್ಯ ಸರಕಾರ ರಚಿಸಿರುವ ಅಧಿಕಾರಿಗಳ ಸಮಿತಿಯು ಎನ್‌ಪಿಎಸ್‌ ಯೋಜನೆ ರದ್ಧತಿ ಸಂಬಂಧ ಸಾಧಕ -ಬಾಧಕಗಳ ಕುರಿತು ಅಧ್ಯಯನ ನಡೆಸುತ್ತಿದ್ದು, ಫೆ.25 ರಂದು ರಾಜ್ಯಾದ್ಯಂತ ಎಲ್ಲಾ ಜಿಲ್ಲೆ, ತಾಲೂಕು ಶಾಖೆಗಳಲ್ಲಿ ಸಭೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಎಚ್‌.ಕೆ. ರಾಮು ತಿಳಿಸಿದರು

Advertisement

Udayavani is now on Telegram. Click here to join our channel and stay updated with the latest news.

Next