ಕಲಬುರಗಿ: ಫೆ. 11ರಂದು ಆಳಂದ ಪಟ್ಟಣದ ಜ್ಯೂನಿಯರ್ ಕಾಲೇಜು ಆವರಣದಲ್ಲಿ ಶಾಸಕ ಬಿ.ಆರ್. ಪಾಟೀಲರು ಆಯೋಜಿಸಿರುವ ಸ್ತ್ರೀಶಕ್ತಿ ಸಮಾವೇಶಕ್ಕೆ ಪ್ರಾಥಮಿಕ- ಪ್ರೌಢ ಶಾಲಾ ಶಿಕ್ಷಕಿಯರು, ಕಾಲೇಜು ವಿದ್ಯಾರ್ಥಿನಿಯರು, ಅಂಗನವಾಡಿ ಕಾರ್ಯಕರ್ತೆಯರು,
ಆಶಾ ಕಾರ್ಯಕರ್ತೆಯರು, ಅಕ್ಷರ ದಾಸೋಹ ಸಹಾಯಕಿಯರನ್ನು ಒಂದು ಅವರ ಕೆಲಸದಿಂದ ಮೊಟಕುಗೊಳಿಸಿ ಒತ್ತಾಯಪೂರ್ವಕವಾಗಿ ಕರೆ ತರುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಮಾಜಿ ಶಾಸಕ ಸುಭಾಷ ಆರ್. ಗುತ್ತೇದಾರ ಪ್ರಶ್ನಿಸಿದ್ದಾರೆ. ಮಹಿಳಾ ಕಾರ್ಯಕರ್ತೆಯರಿಗೆ ಅತ್ಯಮೂಲವಾಗಿದೆ.
ಏಕೆಂದರೆ ಪ್ರಸಕ್ತವಾಗಿ ದಡಾರ ರುಬೆಲ್ಲಾ ಲಸಿಕೆ ಅಭಿಯಾನ ಸಂದರ್ಭದಲ್ಲಿ ಎಲ್ಲ ಕೆಲಸ ಬಿಟ್ಟು ಕಾರ್ಯಕ್ರಮಕ್ಕೆ ಹಾಜರಾಗುರುವುದು ತಪ್ಪಾಗಿದೆಯಲ್ಲದೇ ಖಾಸಗಿ ಕಾಲೇಜು ವಿದ್ಯಾರ್ಥಿನಿಯರಿಗೆ ಕಡ್ಡಾಯವಾಗಿ ಕಾರ್ಯಕ್ರಮಕ್ಕೆ ಕಳುಹಿಸುವಂತೆ ಸಂಬಂಧಪಟ್ಟ ಪ್ರಾಚಾರ್ಯರಿಗೆ ಆದೇಶ ಪತ್ರ ಹೊರಡಿಸಿರುವುದು ಸ್ವಾರ್ಥ ರಾಜಕಾರಣಕ್ಕೆ ಬಳಕೆ ಮಾಡಿಕೊಂಡಿರುವುದು ನಿಜಕ್ಕೂ ಖಂಡನಾರ್ಹವಾಗಿದೆ.
ಕ್ಷೇತ್ರದಲ್ಲಿ ಇತ್ತೀಚೆಗೆ ಶಾಸಕರ ಮಾತು ಕ್ಷೇತ್ರದಲ್ಲಿ ಯಾರೂ ನಂಬುತ್ತಿಲ್ಲ. ಅವರು ನೀಡಿರುವ ಎಲ್ಲ ಭರವಸೆ ಹಾಗೂ ಆಶಾಶ್ವನೆಗಳು ಸಂಪೂರ್ಣ ಹುಸಿಯಾಗಿವೆ. ಹೀಗಾಗಿ ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಒಬ್ಬ ಆಡಳಿತ ಶಾಹಿ ಹಾಗೆ ವರ್ತಿಸಲಾಗುತ್ತಿದೆ.
ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿರುವುದರಿಂದ ಸೇವೆಯಿಂದ ವಜಾ ಮಾಡಿರುವ ಘಟನೆಯೇ ಕಣ್ಣೆದುರಿಗಿದೆ. ಶಾಸಕರ ಗಮನ ಕೇವಲ ಜನರ ಜಮಾವಣೆ ಮೇಲಿದೆ ಹೊರತು ಜನಪರ ಕೆಲಸ ಮಾಡುವಂತಹ ಮಹಿಳಾ ಕಾರ್ಯಕರ್ತರ ಕೆಲಸದ ಮೇಲಿಲ್ಲ ಎಂದು ಮಾಜಿ ಶಾಸಕರು ಟೀಕಿಸಿದ್ದಾರೆ.