ಬೆಂಗಳೂರು: ಲಾಕ್‌ಡೌನ್ ಹಿನ್ನೆಲೆಯಲ್ಲಿ ಸರಕಾರಿ ನೌಕರರ ವರ್ಗಾ ವಣೆಯನ್ನು ಮುಂದೂಡಿದ್ದ ಮುಖ್ಯ ಮಂತ್ರಿ ಬಿ.ಎಸ್. ಯಡಿಯೂರಪ್ಪ ಕೊನೆಗೂ ಸಚಿವರ ಒತ್ತಡಕ್ಕೆ ಮಣಿದಿದ್ದಾರೆ. ಸಚಿವರಿಗೇ ನೌಕರರ ವರ್ಗಾ ವಣೆಗೆ ಅವಕಾಶ ಕಲ್ಪಿಸಿದ್ದು, ಜುಲೈ 22ರೊಳಗೆ ಆಯಾ ಇಲಾಖೆಯ ಸಚಿ ವರು ಶೇ. 6ರಷ್ಟು ಮೀರದಂತೆ ವರ್ಗಾ ವಣೆ ಮಾಡುವಂತೆ ಸೂಚಿಸಿದ್ದಾರೆ.
ಪ್ರತೀ ಮೇ, ಜೂನ್‌ನಲ್ಲಿ ಸಾಮಾನ್ಯ ವರ್ಗ ನಡೆ ಯುತ್ತದೆ. 15 ದಿನಗಳಿಂದ 1 ತಿಂಗಳ ಅವಧಿಯಲ್ಲಿ ಸಚಿವರು ತಮ್ಮ ಇಲಾಖೆ ವ್ಯಾಪ್ತಿಯಲ್ಲಿ ಗರಿಷ್ಠ ಶೇ. 5ರಿಂದ 6ರಷ್ಟು ಸಿಬಂದಿಯನ್ನು ವರ್ಗಾವಣೆ ಮಾಡಲು ಅವಕಾಶ ಕಲ್ಪಿಸಲಾಗುತ್ತದೆ. ಆದರೆ 2 ವರ್ಷ ಗಳಿಂದ ಕೊರೊನಾ ಹಾವಳಿಯ ಕಾರಣ ಪ್ರತಿಯೊಂದು ವರ್ಗಾವಣೆಗೂ ಸಿಎಂ ಅನುಮತಿ ಕಡ್ಡಾಯವಾಗಿತ್ತು.
ಸಂಪುಟದಲ್ಲಿಯೇ ಸಚಿವರ ಆಗ್ರಹ:
2021-22ನೇ ಸಾಲಿಗೆ ಅನ್ವಯ ವಾಗು ವಂತೆ ಇಲಾಖಾವಾರು ಸಾರ್ವ ತ್ರಿಕ ವರ್ಗಾವಣೆ ಮಾಡಲು ಸಚಿವರಿಗೆ ಅವಕಾಶ ಕಲ್ಪಿಸುವಂತೆ ಕಳೆದ ತಿಂಗಳು ನಡೆದ ಸಂಪುಟ ಸಭೆಯಲ್ಲಿ ಅರಣ್ಯ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಅರವಿಂದ ಲಿಂಬಾವಳಿ ಸೇರಿದಂತೆ ಅನೇಕ ಸಚಿವರು ಮುಖ್ಯಮಂತ್ರಿ ಯವರನ್ನು ಆಗ್ರಹಿಸಿದ್ದರು. ಆದರೆ ಆಗ ಯಡಿಯೂರಪ್ಪ ಅವರು “ಯಾರದೇ ವರ್ಗಾ ವಣೆ ಬೇಕಿದ್ದರೂ ನನ್ನ ಬಳಿ ಬನ್ನಿ, 24 ಗಂಟೆಯಲ್ಲಿ ವರ್ಗಾವಣೆ ಮಾಡಿಕೊಡುತ್ತೇನೆ’ ಎಂದು ಸಚಿವರ ಬೇಡಿಕೆಯನ್ನು ತಿರಸ್ಕರಿಸಿದ್ದರು ಎಂದು ತಿಳಿದು ಬಂದಿತ್ತು.
ಆದರೆ ಮುಖ್ಯಮಂತ್ರಿಗಳ ನಿರ್ಧಾರದ ಬಗ್ಗೆ ಸಂಪುಟ ಸಹೋ ದ್ಯೋಗಿ ಗಳು ಬೇಸರಗೊಂಡಿದ್ದರು ಎಂದು ಹೇಳಲಾಗುತ್ತಿದ್ದು, ಇಲಾಖೆಯ ಕಾರ್ಯಾಂಗದ ಮುಖ್ಯಸ್ಥರು ಹಾಗೂ ಎ ದರ್ಜೆಯ ಅಧಿಕಾರಿಗಳ ವರ್ಗಾ ವಣೆ ಯನ್ನು ಸಚಿವರ ಗಮನಕ್ಕೆ ತಾರದೇ ಮಾಡಲಾಗುತ್ತಿದೆ. ಇದ ರಿಂದ ಅಧಿಕಾರಿಗಳು ಸಚಿವರ ಮಾತು ಕೇಳ ದಂತಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಬಿ ಮತ್ತು ಸಿ ದರ್ಜೆಯ ಅಧಿಕಾರಿಗಳ ವರ್ಗಾವಣೆ ಮಾಡಿಸಲೂ ಮುಖ್ಯ ಮಂತ್ರಿ ಗಳ ಅನುಮತಿಗಾಗಿ ಕಾಯುವುದು ಎಷ್ಟು ಸಮಂಜಸ ಎಂದು ಕೆಲವು ಹಿರಿಯ ಸಚಿವರೇ ಬೇಸರ ವ್ಯಕ್ತ ಪಡಿಸಿದ್ದರು ಎಂದು ಹೇಳಲಾಗುತ್ತಿದೆ.
ಯಾರಿಗೆ ಅನುಕೂಲ? :
- ಎರಡು ವರ್ಷದಿಂದ ವರ್ಗಾವಣೆ ನಿರೀಕ್ಷೆಯಲ್ಲಿದ್ದವರಿಗೆ
- ಮಕ್ಕಳ ಶಿಕ್ಷಣಕ್ಕಾಗಿ ಸ್ವಂತ ಊರಿಗೆ ಹೋಗ ಬೇಕೆನ್ನು ವವರಿಗೆ
- ಗ್ರಾಮೀಣ ಪ್ರದೇಶಗಳಿಂದ ನಗರಕ್ಕೆ ಬರಲು ಬಯಸುವವರಿಗೆ
ಯಾರಿಗೆ ಅನನುಕೂಲ? :
- ಅನೇಕ ವರ್ಷಗಳಿಂದ ಒಂದೇ ಕಡೆ ಇರುವವರಿಗೆ
- ಸಚಿವರ ಹಾಗೂ ಶಾಸಕರ ಕೆಂಗಣ್ಣಿಗೆ ಗುರಿ ಯಾಗಿರುವವರಿಗೆ
ವರ್ಗಾವಣೆ ಉದ್ದೇಶ ಇರುವುದು ನೌಕರರಿಗೆ ಅನು ಕೂಲವಾಗಲಿ ಎಂದು. ವರ್ಗಾ ವಣೆಗೆ ಅವಕಾಶ ನೀಡಿರುವು ದನ್ನು ಸ್ವಾಗತಿಸುತ್ತೇವೆ. ಆದರೆ ಅನಗತ್ಯವಾಗಿ ಲಾಬಿಗಳಿಗೆ ಮಣಿದು ವರ್ಗಾವಣೆ ಮಾಡಿ ಅಧಿಕಾರಿಗಳಿಗೆ ತೊಂದರೆ ಕೊಡಬಾರದು.
– ಸಿ.ಎಸ್. ಷಡಕ್ಷರಿ, ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ