ಮೈಸೂರು: ನಗರ ಪಾಲಿಕೆಯ ಹಳೆ ಕೌನ್ಸಿಲ್ ಸಭಾಂಗಣದಲ್ಲಿ ಗುರುವಾರ ಪಾಲಿಕೆಯ 2022-2023 ನೇ ಸಾಲಿನ ಬಜೆಟ್ ಮಂಡನೆ ಸಂಬಂಧ ನಡೆದ ಪೂರ್ವ ಭಾವಿ ಸಭೆ ನಡೆಯಿತು.
ಸಭೆಯಲ್ಲಿ ಭಾಗವಹಿಸಿದ್ದ ಪಾಲಿಕೆಯ ಮಾಜಿ ಮೇಯರ್‌ಗಳು ಮತ್ತು ಸಂಘ-ಸಂಸ್ಥೆಗಳ ಪ್ರತಿನಿಧಿಗಳು, ಬಜೆಟ್ ಮಂಡನೆ ಸಂಬಂಧ ತಮ್ಮ ಅಮೂಲ್ಯ ಸಲಹೆಗಳನ್ನು ಬಜೆಟ್ ಮಂಡನೆಗೆ ಸಿದ್ಧತೆ ನಡೆಸಿರುವ ಮೇಯರ್ ಸುನಂದ ಫಾಲನೇತ್ರ ಅವರಿಗೆ ನೀಡಿದರು.
ಈ ವೇಳೆ ಕಂದಾಯ ವಸೂಲಿಯಲ್ಲಿ ಶಿಸ್ತು- ಬದ್ಧತೆ ಇರಲಿ. ಆದಾಯ ವೆಚ್ಚಕ್ಕೆ ತಕ್ಕಂತೆ ಬಜೆಟ್ ಇರಲಿ, ಹಿಂದಿನ ವರ್ಷದ ಅನುಕರಣೆ ಬೇಡ, ಮೂಲ ಸೌಲಭ್ಯಗಳಿಗೆ ಆದ್ಯತೆ ನೀಡಿ ಎಂಬ ಸಲಹೆಗಳು ಸಭೆಯಲ್ಲಿ ಕೇಳಿಬಂದವು. ಪ್ರತಿಯೋಬ್ಬರ ಸಲಹೆ-ಸೂಚನೆಗಳನ್ನು ಸ್ವೀಕರಿಸಿದ ಮೇಯರ್ ಅವರು, ತಮ್ಮ ಬಜೆಟ್ ಮಂಡನೆ ವೇಳೆ ಮಂಡಿಸಲಾಗುವುದು ಎಂದು ಭರವಸೆ ನೀಡಿದರು. ಸಾರ್ವಜನಿಕರಿಗೆ ತೆರಿಗೆ ವಸೂಲಿಯಾಗುತ್ತಿಲ್ಲ ಎಂದು ದೂಷಣೆ ಮಾಡುವ ಬದಲು, ಅಧಿಕಾರಿಗಳಿಗೆ ತೆರಿಗೆದಾರರ ಮನೆ ಬಾಗಿಲಿಗೆ ತೆರಳಿ ತೆರಿಗೆ ವಸೂಲಿ ಮಾಡಬೇಕು.
ಆಗ ಪ್ರತಿಯೊಬ್ಬರೂ ತೆರಿಗೆ ಪಾವತಿಸಲಿದ್ದಾರೆ. ಜತೆಗೆ ತೆರಿಗೆ ಪಾವತಿಯ ನಿಯಮಗಳನ್ನು ಸರಳಗೊಳಿಸಬೇಕು. ಆಗ ನಿರೀಕ್ಷೆಗೂ ಮೀರಿಗೆ ತೆರಿಗೆ ಸಂಗ್ರಹವಾಗಲಿದೆ. ನೀರು ಬಾಕಿಯಲ್ಲಿ ಬಡ್ಡಿ ಮನ್ನಾ ಮಾಡಿದರೆ ಬಾಕಿ ಹಣ ಪಾವತಿಯಾಗಲಿದೆ ಎಂದು ಸಲಹೆಗಳು ವ್ಯಕ್ತವಾದವು. ಸಭೆಗೆ ಪಾಲಿಕೆ ಸದಸ್ಯರ ಗೈರು: ಸಭೆಗೆ ಮೂರು ಪಕ್ಷಗಳ ನಾಯಕರೊಂದಿಗೆ ಸ್ಥಾಯಿ ಸಮಿತಿಗಳ ಅಧ್ಯಕ್ಷರು ಸೇರಿ 10 ಮಂದಿ ಪಾಲಿಕೆ ಸದಸ್ಯರು ಗೈರಾಗಿದ್ದರು. ಈ ವೇಳೆ ಮಾಜಿ ಮೇಯರ್‌ಗಳು ಪಾಲಿಕೆ ಒಬ್ಬ ಸದಸ್ಯರು ಭಾಗವಹಿಸದೇ ಇರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ, ಪಾಲಿಕೆ ಸದಸ್ಯರೇ ಇಲ್ಲದೇ ಬಜೆಟ್ ಬಗ್ಗೆ ಚರ್ಚೆ ಹೇಗೆ ಎಂದು ಪ್ರಶ್ನಿಸಿದರು.
ಸಭೆಯಲ್ಲಿ ಮಾಜಿ ಮೇಯರ್‌ಗಳಾದ ಬಿ.ಎಲ….ಭೈರಪ್ಪ, ಆರ್. ಲಿಂಗಪ್ಪ, ಉಪ ಮೇಯರ್ ಅನ್ವರ್‌ಬೇಗ್, ಹೊಟೇಲ್ ಮಾಲಿಕರ ಸಂಘದ ಅಧ್ಯಕ್ಷ ಎಂ.ನಾರಾಯಣ ಗೌಡ, ಮೈಸೂರು ಗ್ರಾಹಕರ ಪರಿಷತ್ ಅಧ್ಯಕ್ಷ ಡಾ.ಶಿವಮೂರ್ತಿ, ಮೈಸೂರು ಕೈಗಾರಿಕೆಗಳ ಸಂಘದ ಪ್ರಧಾನ ಕಾರ್ಯದರ್ಶಿ ಸುರೇಶ್ ಕುಮಾರ್ ಜೈನ್, ಮಾಜಿ ಮೇಯರ್‌ಗಳಾದ ಪುಷ್ಪವಲ್ಲಿ, ಪಿ.ವಿಶ್ವನಾಥ್, ಎಂ.ಪುರುಷೋತ್ತಮ…, ದಕ್ಷಿಣ ಮೂರ್ತಿ ಇದ್ದÃ