Advertisement

ಅಂಗಡಿ ಬದಿಗಳ ಶುಚಿತ್ವಕ್ಕೆ ಮಹತ್ವ ನೀಡಲಿ

10:16 PM Mar 07, 2020 | Team Udayavani |

ನಗರದ ಮಂದಿ ಶುಚಿತ್ವಕ್ಕೆ ಮತ್ತಷ್ಟು ಮಹತ್ವ ನೀಡಬೇಕಾಗಿದೆ. ನಗರವು ಈ ಹಿಂದೆ ಶುಚಿತ್ವಕ್ಕೆ ಪ್ರಶಸ್ತಿಯನ್ನು ಪಡೆದುಕೊಂಡಿತ್ತು. ಆದರೆ, ನಗರದ ಒಳಹೊಕ್ಕು ನೋಡಿದರೆ, ಅಲ್ಲಲ್ಲಿ ಕಸದ ರಾಶಿ ಇನ್ನೂ ಗೋಚರಿಸುವುದು ಸ್ಪಷ್ಟ. ಪ್ರಮುಖವಾಗಿ ಸಣ್ಣ ಪುಟ್ಟ ಅಂಗಡಿಗಳ ಎದುರು ಅನಗತ್ಯವಾಗಿರುವ ಕಸಗಳನ್ನು ಅಲ್ಲಲ್ಲಿ ರಸ್ತೆ ಬದಿಗಳಲ್ಲಿ ಎಸೆಯುವುದನ್ನು ಕಾಣಬಹುದು.

Advertisement

ಪ್ಲಾಸ್ಟಿಕ್‌ನಲ್ಲಿ ಪ್ಯಾಕ್‌ ಮಾಡಲಾಗಿರುವ ವಸ್ತುಗಳನ್ನು ತಿಂದು ಅಲ್ಲಲ್ಲಿಯೇ ಬಿಸಾಡುವುದರಿಂದ ಮಣ್ಣಿನಲ್ಲಿ ಕೊಳೆತು ಹೋಗದೆ, ಹಾಗೇ ಉಳಿದು ಬಿಡುತ್ತದೆ. ಇದರಿಂದ ನಗರದ ಸೌಂದರ್ಯಕ್ಕೂ ಧಕ್ಕೆಯಾಗುತ್ತದೆ. ಮುಖ್ಯರಸ್ತೆಗಳ ಬದಿಯಲ್ಲೇ ಇರುವ ಹಲವಾರು ಅಂಗಡಿಗಳ ಎದುರಿನ ರಸ್ತೆ ಬದಿಗಳಲ್ಲಿ ಈ ರೀತಿ ಕಸ ಎಸೆಯುವುದನ್ನು ಕಾಣಬಹುದು.

ಅದರಲ್ಲೂ ನಗರದ ಕೆಲವೊಂದು ಸಣ್ಣ ಪುಟ್ಟ ಅಂಗಡಿಗಳ ಎದುರೇ ಬೀಡಿ, ಸಿಗರೇಟ್‌, ಪಾನ್‌ಪರಾಗ್‌ ಪ್ಯಾಕೆಟ್‌ಗಳು ಬಿದ್ದುಕೊಂಡಿವೆ. ಪ್ರಮುಖವಾಗಿ ಆಯಾ ಅಂಗಡಿಯವರು ತಮ್ಮ ಅಂಗಡಿಗಳಲ್ಲಿ ಗ್ರಾಹಕರು ಕಸ ಹಾಕಲು ಪೂರಕವಾಗುವಂತೆ ಡಸ್ಟ್‌ಬಿನ್‌ಗಳನ್ನು ಇಡಬೇಕು. ಪಾಲಿಕೆಯೂ ಹೀಗೆ ಕಸ ಎಸೆಯುವುದನ್ನು ಗಂಭೀರವಾಗಿ ಪರಿಗಣಿಸಿದ್ದು, ಡಸ್ಟ್‌ಬಿನ್‌ ಇಟ್ಟು ಕಸವನ್ನು ಅದಕ್ಕೆ ಹಾಕುವಂತೆ ಎಲ್ಲ ಅಂಗಡಿ ಮಾಲಕರಿಗೆ ಸೂಚಿಸಿದೆ. ಇಲ್ಲವಾದಲ್ಲಿ ಸೂಕ್ತ ಕ್ರಮ ಕೈಗೊಳ್ಳುವುದಾಗಿಯೂ ಹೇಳಿದೆ. ಆದರೆ, ಈ ಹೇಳಿಕೆ ಕೇವಲ ಹೇಳಿಕೆಯಾಗಿ ಉಳಿಯದೆ, ಕಸ ಎಸೆಯುವವರ ಮೇಲೆ ಕಠಿನ ಕ್ರಮ ಕೈಗೊಳ್ಳಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next