ಚಿಂಚೋಳಿ: ರಾಜ್ಯದಲ್ಲಿ 2018ರಲ್ಲಿ ನಡೆಯುವ ವಿಧಾನಸಭೆ ಚುನಾವಣೆ ವಿಶೇಷ ಪ್ರಾಮುಖ್ಯತೆ ಇರುವುದರಿಂದ ಕಾಂಗ್ರೆಸ್ ಕಾರ್ಯಕರ್ತರು ಬೂತ್‌ಮಟ್ಟದಲ್ಲಿ ಪಕ್ಷವನ್ನು ಸಂಘಟನೆ ಹಾಗೂ ಬಲಪಡಿಸಿ ಮತ್ತೂಮ್ಮೆ ಬಿಜೆಪಿಯನ್ನು ಸೋಲಿಸುವ ಮೂಲಕ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸಬೇಕೆಂದು ಕಲಬುರಗಿ ವಿಭಾಗದ ಉಸ್ತುವಾರಿ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಡಾ| ಶೈಲಜಾನಾಥ ಕರೆ ನೀಡಿದರು.
ಪಟ್ಟಣದ ಗಂಗಮ್ಮ ಭೀಮಶೆಟ್ಟಿ ಪಾಟೀಲ ಕಲ್ಯಾಣಮಂಟಪದಲ್ಲಿ ಶುಕ್ರವಾರ ಚಿಂಚೋಳಿ-ಕೋಡ್ಲಿ-ಕಾಳಗಿ ಬ್ಲಾಕ ಕಾಂಗ್ರೆಸ ಕಾರ್ಯಕರ್ತರು ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ದೇಶದಲ್ಲಿ ದಲಿತರ ಮತ್ತು ಮಹಿಳೆಯರ ಮೇಲೆ ದೌರ್ಜನ್ಯ ನಡೆಯುತ್ತಿವೆ ಕೇಂದ್ರ ಬಿಜೆಪಿ ಆಡಳಿತ ವಿಫಲವಾಗಿದೆ ಎಂದು ಹೇಳಿದರು. ಜಿಲ್ಲಾಉಸ್ತುವಾರಿ ಸಚಿವ ಡಾ| ಶರಣಪ್ರಕಾಶ ಪಾಟೀಲ ಮಾತನಾಡಿ, ರಾಜ್ಯ ಇಂಧನ ಸಚಿವರ ಮೇಲೆ ಐಟಿ ದಾಳಿ ಹಿಂದೆ ಬಿಜೆಪಿ ಕುತಂತ್ರ ಅಡಗಿದೆ ಇದೊಂದು ದ್ವೇಷ ರಾಜಕಾರಣವಾಗಿದೆ. ಬಿಜೆಪಿ ಅಧಿಕಾರದಲ್ಲಿದ್ದಾಗ ಆಗಿನ ಮುಖ್ಯಮಂತ್ರಿ ಬಿ.ಎಸ್
.ಯಡಿಯೂರಪ್ಪ ಜೈಲಿಗೆ ಹೋಗಿರುವುದನ್ನು ರಾಜ್ಯದ ಜನತೆ ಇನ್ನು ಮರೆತಿಲ್ಲ ಎಂದು ಟೀಕಿಸಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಸದೀಯ ಕಾರ್ಯದರ್ಶಿ ಡಾ|ಉಮೇಶ ಜಾಧವ್ ಮಾತನಾಡಿ, ಕಾರ್ಯಕರ್ತರು ಪಕ್ಷವನ್ನು ಬಲಪಡಿಸಬೇಕೆಂದು ನುಡಿದರು. ಮಾಜಿ ಸಚಿವ ವೈಜನಾಥ ಪಾಟೀಲ ಮಾತನಾಡಿ, ಬಿಜೆಪಿ ರಾಜಕೀಯ ಕುತಂತ್ರದಿಂದಾಗಿ ರಾಜ್ಯದಲ್ಲಿ ಅಲ್ಲೋಲ ಕಲ್ಲೋಲ ಪರಸ್ಥಿತಿ ನಿರ್ಮಾಣವಾಗಿದೆ ಎಂದರು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವಸಂತಕುಮಾರ, ತಿಪ್ಪಣ್ಣಪ್ಪ ಕಮಕನೂರ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭಾಗಣ್ಣಗೌಡ ಸಂಕನೂರ ಮಾತನಾಡಿದರು. ಜಿಪಂ ಸದಸ್ಯ ಗೌತಮ್ ಪಾಟೀಲ, ಜಿಪಂ ಮಾಜಿ ಅಧ್ಯಕ್ಷ ದೀಪಕನಾಗ ಪುಣ್ಯಶೆಟ್ಟಿ, ಎಂ.ಎಸ್.ಐ.ಎಲ್ ಮಾಜಿ ಅಧ್ಯಕ್ಷ ಡಾ| ವಿಕ್ರಮ ಪಾಟೀಲ, ತಾಪಂ ಅಧ್ಯಕ್ಷೆ ರೇಣುಕಾ ಚವ್ಹಾಣ, ಪುರಸಭೆ ಅಧ್ಯಕ್ಷೆ ಇಂದುಮತಿ ದೇಗಲಮಡಿ, ಕಾಡಾ ಅಧ್ಯಕ್ಷ ಮಹಾಂತಪ್ಪ ಸಂಗಾವಿ, ಗೋಪಾಲರಾವ್ ಕಟ್ಟಿಮನಿ, ಜಗದೀಶಸಿಂಗ್ ಠಾಕೂರ, ಬಸವಣ್ಣ ಪಾಟೀಲ, ಅಜೀತ ಪಾಟೀಲ,
ರವೂಫ ಮಿರಿಯಾಣ ಇದ್ದರು.
ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅನೀಲಕುಮಾರ ಜಮಾದಾರ ಸ್ವಾಗತಿಸಿದರು. ಆರ್. ಗಣಪತರಾವ್ ನಿರೂಪಿಸಿದರು. ಕೆ.ಎಂ.ಬಾರಿ ವಂದಿಸಿದರು.