Advertisement

ಶುದ್ಧ ನೀರು ಸೇವನೆಗೆ ಒತ್ತು ಕೊಡಿ: ನಾಗರಾಜ್‌

12:10 PM Nov 02, 2021 | Team Udayavani |

ದಾವಣಗೆರೆ: ಪ್ರತಿಯೊಬ್ಬರೂ ಕಡ್ಡಾಯವಾಗಿ ಕುಡಿಯಲು ಶುದ್ಧ ನೀರು ಬಳಕೆ ಮಾಡಬೇಕು. ತನ್ಮೂಲಕ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕ ಎ. ನಾಗರಾಜ್‌ ಹೇಳಿದರು.

Advertisement

ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಶುದ್ಧ ಗಂಗಾ, ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಹಾಗೂ ಜ್ಞಾನವಿಕಾಸ ಕೇಂದ್ರದ ಸಹಭಾಗಿತ್ವದಲ್ಲಿ ಸೋಮವಾರ ನಡೆದ ಶುದ್ಧಜಲ ಅಭಿಯಾನ ಕಾರ್ಯಕ್ರಮದಲ್ಲಿ ಮುಖ್ಯಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ 19ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನಿರ್ವಹಣೆ ಮಾಡುತ್ತಿದೆ. ಸ್ವಚ್ಛತೆಗೆ ಆದ್ಯತೆ ನೀಡಿ ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಸೇವೆ ನೀಡುತ್ತಿದೆ. ಪ್ರತಿಯೊಬ್ಬರೂ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಮಹಾನಗರ ಪಾಲಿಕೆಯ ಮಾಜಿ ಮಹಾಪೌರಗುರುನಾಥ ಮಾತನಾಡಿ, ಜನಸಾಮಾನ್ಯರಿಗೂಕೈಗೆಟುಕುವ ದರದಲ್ಲಿ ಶುದ್ಧ ನೀರು ಪೂರೈಸುವ ದೃಷ್ಟಿಯಿಂದ ನಗರ ಸೇರಿದಂತೆ ಪ್ರತಿ ಗ್ರಾಮದಲ್ಲಿಯೂಶುದ್ಧನೀರಿನ ಘಟಕ ಪ್ರಾರಂಭ ಮಾಡಲಾಗಿದೆ ಎಂದರು.

ಪಾಲಿಕೆ ಸದಸ್ಯ ಎಲ್‌.ಡಿ. ಗೋಣೆಪ್ಪ ಮಾತನಾಡಿ, ಒಂದು ಲಕ್ಷ ಗ್ರಾಹಕರಿಗೆ ಶುದ್ಧ ನೀರು ಒದಗಿಸುವ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆಯವರ ಕನಸನ್ನು ನಾವೆಲ್ಲರೂ ಸಾಕಾರಗೊಳಿಸೋಣ ಎಂದು ತಿಳಿಸಿದರು.

Advertisement

ಮಹಾನಗರ ಪಾಲಿಕೆಯ ವ್ಯಾಪ್ತಿಯ ಎಲ್ಲ 19ಶುದ್ಧನೀರಿನ ಘಟಕಗಳಲ್ಲಿ ಶುದ್ಧಜಲ ಅಭಿಯಾನಹಾಗೂ ಕರಪತ್ರ ಬಿಡುಗಡೆಯ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಮಹಾನಗರ ಪಾಲಿಕೆ ಸದಸ್ಯರಾದ ಮಂಜುಳಾ ಇಟ್ಟಿಗುಂಡಿ, ಗೀತಾ ನಾಗರಾಜ್‌, ವಲಯ ಮೇಲ್ವೀಚಾರಕರಾದ ಭಾಸ್ಕರ್‌, ಪ್ರೇಮಪ್ರಸಾದ, ಮಾರುತಿ ಪಾಟೀಲ್‌, ದೇವಮ್ಮ, ಮಹೇಶ್‌, ಪ್ರದೀಪ್‌, ವಿಜಯಕುಮಾರ್‌ ಹಾಗೂ ಮುರಳೀಧರ ಕೆ., ಶುದ್ಧಗಂಗಾ ಮೇಲ್ವಿಚಾರಕರು ಮಾಹಿತಿ ನೀಡಿದರು.

ಶುದ್ಧಗಂಗಾ ವಿಭಾಗದ ಎಲ್ಲ ಪ್ರೇರಕರು, ಸೇವಾಪ್ರನಿಧಿಗಳು, ಒಕ್ಕೂಟದ ಅಧ್ಯಕ್ಷರು, ಪದಾಧಿಕಾರಿಗಳು, ಸ್ವಸಹಾಯ ಸಂಘಗಳ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

324 ನೀರಿನ ಘಟಕ ಆರಂಭ:

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ 324 ಶುದ್ಧ ನೀರಿನ ಘಟಕಗಳನ್ನು ಪ್ರಾರಂಭಿಸಲಾಗಿದೆ. ಪ್ರತಿ ದಿನ ಗ್ರಾಹಕರಿಗೆ ಶುದ್ಧನೀರನ್ನು ಪೂರೈಸುತ್ತಿದ್ದೇವೆ. ಈತಿಂಗಳು ಶುದ್ಧ ಜಲ ಅಭಿಯಾನ ಕಾರ್ಯಕ್ರಮಮಾಡುವ ಮೂಲಕ ಒಂದು ಲಕ್ಷ ಗ್ರಾಹಕರಿಗೆ ಶುದ್ಧನೀರನ್ನು ಒದಗಿಸುವ ಆಶಯವನ್ನುಇಟ್ಟುಕೊಂಡಿದ್ದೇವೆ. ಈ ಕಾರ್ಯಕ್ರಮದ ಮೂಲಕ ಮನೆ ಮನೆಗೆ ಕರಪತ್ರ ಹಂಚುವ ಮೂಲಕ ಶುದ್ಧ ನೀರಿನ ಬಗ್ಗೆ ಮಾಹಿತಿ ನೀಡುತ್ತೇವೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ಶ್ರೀನಿವಾಸ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next