Advertisement

ಬಜೆಟಲ್ಲಿ ವಿದೇಶಿ, ಖಾಸಗಿ ಹೂಡಿಕೆಗೆ ಒತ್ತು

10:15 AM Dec 13, 2017 | Team Udayavani |

ಹೊಸದಿಲ್ಲಿ: ಮೂಲ ಸೌಕರ್ಯ ಕ್ಷೇತ್ರ ದಲ್ಲಿ ಖಾಸಗಿ ಮತ್ತು ವಿದೇಶಿ  ಬಂಡವಾಳ ಹೂಡುವುದಕ್ಕೆ ಒತ್ತು ನೀಡಲಾಗುತ್ತದೆ. ಈ ಬಗ್ಗೆ 2018-19ನೇ ಸಾಲಿನ ಮುಂಗಡ ಪತ್ರದಲ್ಲಿ ಕೆಲ ಘೋಷಣೆಗಳನ್ನು ಮಾಡುವ ಸಾಧ್ಯತೆ ಇದೆ. ಹೀಗೆಂದು ಕೇಂದ್ರ ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಸುಭಾಶ್‌ ಗರ್ಗ್‌ ಹೇಳಿದ್ದಾರೆ. ಈ ಮೂಲಕ ಮೂಲ ಸೌಕರ್ಯ ಕ್ಷೇತ್ರದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಗೆ ಪ್ರೋತ್ಸಾಹ ನೀಡುವ ಉದ್ದೇಶ ಹೊಂದಲಾಗಿದೆ ಎಂದಿದ್ದಾರೆ. ಕ್ರೆಡಿಟ್‌ ರೇಟಿಂಗ್‌ ಸಂಸ್ಥೆ ಕ್ರೈಸಿಲ್‌ ಸಲ್ಲಿಸಿದ್ದ ವರದಿ ಪ್ರಕಾರ 5 ವರ್ಷಗಳಲ್ಲಿ ಮೂಲಸೌಕರ್ಯ ಕ್ಷೇತ್ರವೇ ಹೆಚ್ಚಿನ ಪ್ರಮಾಣದಲ್ಲಿ ಹೂಡಿಕೆ ಕ್ಷೇತ್ರ ವಾಗಲಿದೆ ಎಂದಿದೆ. ಹೀಗಾಗಿ ಇಂಥ ಕ್ರಮ ಅನಿವಾರ್ಯ ಎಂದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next