Advertisement
ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಶ್ರೀ ಮಹಾಯೋಗಿ ವೇಮನ ಜಯಂತ್ಯುತ್ಸವ ಸಮಿತಿ ಸಂಯುಕ್ತಾಶ್ರಯದಲ್ಲಿ ಕಲಾಮಂದಿರ ಆವರಣದ ಕಿರುರಂಗಮಂದಿರದಲ್ಲಿ ಆಯೋಜಿಸಿದ್ದ ಮಹಾ ಯೋಗಿ ವೇಮನ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು.
Related Articles
ಮೌಡ್ಯಯದಿಂದ ಹೊರಬಂದಿಲ್ಲ:
Advertisement
ಸಾಕಷ್ಟು ಮಹನೀಯರು ಸಮಾಜದಲ್ಲಿನ ಮೌಡ್ಯತೆ ವಿರುದ್ಧ ಹೋರಾಡಿದರು. ರಾಜ್ಯ ಸರ್ಕಾರ ಕೂಡ ಮೌಡ್ಯ ಪ್ರತಿಬಂಧಕ ಕಾಯ್ದೆ ತಂದಿದೆ. 21ನೇ ಶತಮಾನದಲ್ಲಿದ್ದರೂ ನಾವು ಇಂದಿಗೂ ಮೌಡ್ಯದಿಂದ ಹೊರಬರಲಾಗುತ್ತಿಲ್ಲ. ಭಕ್ತಿಯ ಹೆಸರಲ್ಲಿ ಇಂದಿಗೂ ಮೌಡ್ಯತೆ ಮುಂದುವರಿದಿದೆ.
ಅದರಿಂದ ಹೊರಬರಲು ಸಮಾಜ ಅವಕಾಶ ನೀಡುವುದೇ ಇಲ್ಲ. ಮೌಡ್ಯತೆ ವಿರೋಧಿಸಿ, ಜಾತ್ಯತೀತತೆ ಬಗ್ಗೆ ಹೇಳುವವರನ್ನು ಅಪಮಾನಿಸುವ ಕೆಲಸ ನಡೆಯುತ್ತಿದೆ. ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಅಂಥವರೇ ಜಾತ್ಯತೀತರಿಗೆ ಅಪ್ಪ-ಅಮ್ಮ ಯಾರು ಎಂದು ಪ್ರಶ್ನಿಸುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ವಿದ್ಯಾವಂತರಿಂದಲೂ ಮೌಡ್ಯತೆ: ವಾಹಿನಿಗಳಲ್ಲಿ ಜ್ಯೋತಿಷ್ಯವನ್ನು ಪ್ರಸಾರ ಮಾಡಲಾಗುತ್ತದೆ. ವಿದ್ಯಾವಂತರಾದವರೂ ಭವಿಷ್ಯ ಕೇಳುವ, ರಾಹುಕಾಲ, ಗುಳಿಕಕಾಲ ನಂಬುವ ಸ್ಥಿತಿಗೆ ಬಂದಿದ್ದಾರೆ. ರಾಹುಕಾಲ, ಗುಳಿಕ ಕಾಲ ಎಂಬುದಿಲ್ಲ.
ಎಲ್ಲ ಕಾಲವು ಒಳ್ಳೆಯದೇ, ಗ್ರಹಣದಿಂದ ಮನುಷ್ಯನ ಮೇಲೆ ಯಾವುದೇ ಪರಿಣಾಮ ಬೀರಲ್ಲ. ಅಮವಾಸ್ಯೆ, ಹುಣ್ಣಿಗೆ ಎಂಬುದು ಕೂಡ ಸುಳ್ಳು ಎಂದ ಅವರು, ದೇವಸ್ಥಾನಗಳು ಬೇಡದ ವಿಚಾರಗಳನ್ನು ತುಂಬುತ್ತಾ ಶೋಷಣಾಕೇಂದ್ರಗಳಾಗಿವೆ. ಹೀಗಾಗಿ ಸಮಾಜ ವೈಜ್ಞಾನಿಕ ವಿಚಾರಗಳಿಗೆ ಒತ್ತು ನೀಡಬೇಕು ಎಂದರು.
ಕಾವ್ಯಕ್ಕೆ ಭಾಷೆ ಹಂಗಿಲ್ಲ: ಮುಖ್ಯ ಭಾಷಣ ಮಾಡಿದ ಸಾಹಿತಿ ಉಷಾ ನರಸಿಂಹನ್, ಕವಿ ಮತ್ತು ಕಾವ್ಯಕ್ಕೆ ಭಾಷೆಯ ಹಂಗಿಲ್ಲ. ಇವೆರಡು ಭಾಷಾತೀತ, ಸೀಮಾತೀತ. ಎಲ್ಲ ಭಾಷೆಯ ಪುಸ್ತಕಗಳೂ ನಮ್ಮ ಕೈಯಲ್ಲಿ ಓದಿಸಿಕೊಳ್ಳುತ್ತವೆ ಎಂದು ಹೇಳಿದರು. ಅಪರ ಜಿಲ್ಲಾಧಿಕಾರಿ ಟಿ.ಯೋಗೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್.ಚನ್ನಪ್ಪ, ಕನ್ನಡ ಚಳವಳಿಗಾರರಾದ ತಾಯೂರು ವಿಠಲಮೂರ್ತಿ, ಎಂ.ಬಿ.ವಿಶ್ವನಾಥ್, ಪರಮೇಶ್ವರಪ್ಪ, ರವಿಶಂಕರ್ ಕಾರ್ಯಕ್ರಮದಲ್ಲಿ ಹಾಜರಿದ್ದರು.
ಗಣ್ಯರ ಗೈರು, ಸಭಿಕರ ಕೊರತೆ: ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಶ್ರೀ ಮಹಾಯೋಗಿ ವೇಮನ ಜಯಂತ್ಯುತ್ಸವ ಸಮಿತಿ ಸಂಯುಕ್ತಾಶ್ರಯದಲ್ಲಿ ಕಲಾಮಂದಿರ ಆವರಣದ ಕಿರುರಂಗಮಂದಿರದಲ್ಲಿ ಶುಕ್ರವಾರ ಆಯೋಜಿಸಿದ್ದ ಮಹಾ ಯೋಗಿ ವೇಮನ ಜಯಂತಿ ಕಾರ್ಯಕ್ರಮ ಗಣ್ಯರು ಗೈರು, ಸಭಿಕರ ಕೊರತೆಯ ನಡುವೆ ನಡೆಯಿತು.
ಸರ್ಕಾರಿ ಕಾರ್ಯಕ್ರಮವಾದ್ದರಿಂದ ಶಿಷ್ಠಾಚಾರ ಪಾಲನೆಗಾಗಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರಿಂದ ಕಾರ್ಯಕ್ರಮ ಉದ್ಘಾಟನೆ, ಸ್ಥಳೀಯ ಶಾಸಕ ವಾಸು ಅವರ ಅಧ್ಯಕ್ಷತೆಯಲ್ಲಿ 31 ಜನರ ಹೆಸರನ್ನು ಆಹ್ವಾನ ಪತ್ರಿಕೆಯಲ್ಲಿ ಮುದ್ರಿಸಲಾಗಿತ್ತು. ಆದರೆ, ಬಂದವರು ಶಾಸಕ ಎಂ.ಕೆ.ಸೋಮಶೇಖರ್ ಮತ್ತು ಮುಖ್ಯ ಭಾಷಣಕ್ಕೆ ಆಹ್ವಾನಿಸಿದ್ದ ಸಾಹಿತಿ ಉಷಾ ನರಸಿಂಹನ್ ಮಾತ್ರ. ಇನ್ನು 100 ಆಸನಗಳ ಸಾಮರ್ಥ್ಯದ ಕಿರು ರಂಗಮಂದಿರದಲ್ಲಿ ಬೆರಳೆಣಿಕೆಯ ಸಭಿಕರಿದ್ದರು.