Advertisement

‘ನಾಗರಿಕ ವರದಿಗಾರಿಕೆಗೆ ಪ್ರಾಧಾನ್ಯತೆ’

11:40 AM Nov 06, 2017 | Team Udayavani |

ಮಹಾನಗರ: ನವಮಾಧ್ಯಮಗಳಿಂದ ಸಾಂಪ್ರದಾಯಿಕ ಮಾಧ್ಯಮಗಳು ಸದಾ ಎಚ್ಚರಿಕೆಯಿಂದ ಇರುವಂತಾಗಿದೆ. ಯಾವುದೇ ತಪ್ಪುಗಳಾದರೂ ನಾಗರಿಕರು ಗಮನಿಸಿ ತತ್‌ಕ್ಷಣ ಸಾಮಾಜಿಕ ಜಾಲ ತಾಣಗಳಲ್ಲಿ ಪ್ರತಿಕ್ರಿಯೆ ನೀಡುತ್ತಾರೆ. ಹೀಗಾಗಿ ನಾಗರಿಕ ವರದಿಗಾರಿಕೆ ಪ್ರಾಧಾನ್ಯತೆ ಪಡೆಯುತ್ತಿದೆ ಎಂದು ಪತ್ರಕರ್ತ ವೇಣುವಿನೋದ್‌ ಕೆ.ಎಸ್‌. ಹೇಳಿದರು.

Advertisement

ನಗರದ ಎಸ್‌ಡಿಎಂ ಕಾನೂನು ಕಾಲೇಜಿನ ಸಭಾಂಗಣದಲ್ಲಿ ಶನಿವಾರ ರೇಡಿಯೊ ಕೇಳುಗರ ಸಂಘದ ವತಿಯಿಂದ ನಡೆದ ಕೆಎಸ್‌ಎನ್‌ ಅಡಿಗ ಸಂಸ್ಮರಣೆ ಕಾರ್ಯಕ್ರಮದಲ್ಲಿ ‘ಮಾಧ್ಯಮ-ಇಂದು ಮತ್ತು ನಾಳೆ’ ವಿಷಯದ ಬಗ್ಗೆ ಉಪನ್ಯಾಸ ನೀಡಿದರು.

ಪ್ರತಿಯೊಬ್ಬ ನಾಗರಿಕನೂ ಇಂದು ಮಾಧ್ಯಮ ಪ್ರತಿನಿಧಿಯೇ ಆಗಿದ್ದಾನೆ. ಹೆಚ್ಚಿದ ಸ್ಮಾರ್ಟ್‌ಫೋನ್‌ ಸಾಮಾಜಿಕ ಜಾಲತಾಣಗಳು ಹಾಗೂ ಡಾಟಾ ಕ್ರಾಂತಿಯಿಂದಾಗಿ ಮಾಧ್ಯಮಗಳಿಗೆ ಸಾಕಷ್ಟು ಪೈಪೋಟಿ ನೀಡುತ್ತಿವೆ ಎಂದರು.

ಕೇಳಿದ್ದು ಧೀರ್ಘ‌ ಕಾಲ ಉಳಿಯುತ್ತದೆ
ಕಾರ್ಯಕ್ರಮ ಉದ್ಘಾಟಿಸಿದ ಹಿರಿಯ ಲೇಖಕ ಕೆ.ಟಿ. ಗಟ್ಟಿ ಮಾತನಾಡಿ, ರೇಡಿಯೊದ ಮೂಲಕ ಕೇಳುವ ಮಾಹಿತಿ ಮನಸ್ಸಿಗೆ ಹೆಚ್ಚು ನಾಟುತ್ತದೆ. ಆದರೆ ಇಂದು ನಾವು ಟಿವಿ ನೋಡುವ ಗುಂಗಿಗೆ ಬಿದ್ದು, ಕಿವಿಗೆ ಆದ್ಯತೆ ಕೊಡುವುದನ್ನು ಕಡಿಮೆ ಮಾಡಿದ್ದೇವೆ. ಕಣ್ಣಿನ ದುರ್ಬಳಕೆ ಮಾಡುತ್ತಿರುವುದು ಬೇಸರದ ಸಂಗತಿ. ಮನುಷ್ಯನ ಪಂಚೇಂದ್ರಿಯಗಳಲ್ಲಿ ಕಿವಿಯೇ ಪ್ರಧಾನವಾದುದು. ಯಾಕೆಂದರೆ ಕಿವಿಯ ಮೂಲಕ ಗ್ರಹಿಸಿದ ವಿಚಾರಗಳು ದೀರ್ಘ‌ಕಾಲ ಮನಸ್ಸಿನಲ್ಲಿ ಉಳಿಯುತ್ತದೆ. ಆದರೆ ಕಣ್ಣಿನಿಂದ ನೋಡಿದ ವಿಚಾರಗಳು ಹೆಚ್ಚು ಕಾಲ ಮನಸ್ಸಿನಲ್ಲಿ ಉಳಿಯುವುದಿಲ್ಲ ಎಂದರು.

ಡಾ| ರಮಾ ಅಡಿಗ ಅವರು ಅಧ್ಯಕ್ಷತೆ ವಹಿಸಿದ್ದರು. ಯು.ರಾಮರಾವ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಾವಿತ್ರಿ ರಾಮ್‌ ರಾವ್‌ ಸ್ವಾಗತಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next