Advertisement

ಪಕ್ಷಕ್ಕೆ ಶ್ರಮಿಸಿದವರಿಗೆ ಒತ್ತು; ಸದ್ಯವೇ ಬಾಕಿ ನಿಗಮ, ಮಂಡಳಿಗೆ ನೇಮಕ

12:03 AM Aug 25, 2020 | mahesh |

ಬೆಂಗಳೂರು: ಬಾಕಿ ಇರುವ ನಿಗಮ, ಮಂಡಳಿಗಳಿಗೆ ಅಧ್ಯಕ್ಷರ ನೇಮಕ ಸದ್ಯವೇ ನಡೆಯಲಿದ್ದು, ಪಕ್ಷ ಮತ್ತು ಸಂಘಟನೆಗೆ ದುಡಿದವರಿಗೆ ಹೆಚ್ಚಿನ ಒತ್ತು ಸಿಗುವ ಸಾಧ್ಯತೆ ಇದೆ. ಸಿಎಂ ಬಿಎಸ್‌ವೈ ಈಗಾಗಲೇ 20 ನಿಗಮ, ಮಂಡಳಿಗಳಿಗೆ ಮಾಜಿ ಸಚಿವರು, ಶಾಸಕರನ್ನು ಅಧ್ಯಕ್ಷರನ್ನಾಗಿ ನೇಮಿಸಿ ಆಕಾಂಕ್ಷಿಗಳನ್ನು ಸಮಾಧಾನ ಪಡಿಸುವ ಪ್ರಯತ್ನದಲ್ಲಿ ಬಹುತೇಕ ಯಶಸ್ಸು ಕಂಡಿದ್ದಾರೆ. ಉಳಿದ ನಿಗಮ, ಮಂಡಳಿಗಳಿಗೆ ನೇಮಕ ವೇಳೆ ಸಂಘಟನೆಗಾಗಿ ದುಡಿದವರಿಗೆ ಆದ್ಯತೆ ನೀಡುವ ಬಗ್ಗೆ ಚರ್ಚೆಯಾಗಿದೆ ಎಂದು ಮೂಲಗಳು ಹೇಳಿವೆ.

Advertisement

ಬಿಜೆಪಿ ರಾಷ್ಟ್ರೀಯ ಸಂಘಟನ ಪ್ರಧಾನ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌ ಸರಣಿ ಸಭೆಗಳನ್ನು ನಡೆಸಿದ್ದು ತೀವ್ರ ಕುತೂಹಲ ಮೂಡಿಸಿತ್ತು. ಅವರು ಗೃಹ ಸಚಿವರು, ವೈದ್ಯಕೀಯ ಶಿಕ್ಷಣ ಸಚಿವರ ಬಳಿಕ ಸಿಎಂ ಯಡಿಯೂರಪ್ಪ ಅವರ ಜತೆಗೂ ಸಮಾಲೋಚನೆ ನಡೆಸಿದ್ದರು. ಅನಂತರ ರಾಜ್ಯ ಬಿಜೆಪಿ ನೂತನ ಪದಾಧಿಕಾರಿಗಳೊಂದಿಗೂ ಸಭೆ ನಡೆಸಿ ಸಂಘಟನೆ ಬಲಪಡಿಸುವ ನಿಟ್ಟಿನಲ್ಲಿ ಸಲಹೆ, ಸೂಚನೆ ನೀಡಿದ್ದಾರೆ.

ಸದ್ಯವೇ ಸುಮಾರು 20 ನಿಗಮ- ಮಂಡಳಿಗಳಿಗೆ ಅಧ್ಯಕ್ಷರ ನೇಮಕ ನಡೆಯಲಿದ್ದು, ಈ ಸಂದರ್ಭದಲ್ಲೂ ಪಕ್ಷ ಸಂಘಟನೆಗಾಗಿ ಶ್ರಮಿಸಿದವರನ್ನು ಗುರುತಿಸುವ ಬಗ್ಗೆ ಚರ್ಚೆಯಾಗಿದೆ. ಮೂಲ ಬಿಜೆಪಿಗರು- ವಲಸಿಗರು ಎಂಬ ವ್ಯತ್ಯಾಸ ಮೂಡದಂತೆ ಮುಂದುವರಿಯಬೇಕಿದೆ ಎಂದು ಮೂಲಗಳು ಹೇಳಿವೆ.

Advertisement

Udayavani is now on Telegram. Click here to join our channel and stay updated with the latest news.

Next