Advertisement

ಮುನ್ನೆಚ್ಚರಿಕೆ ಕ್ರಮಕ್ಕೆ ಒತ್ತು

05:56 AM Jun 17, 2020 | Lakshmi GovindaRaj |

ಬೆಂಗಳೂರು: ಆಗಸ್ಟ್‌ನಲ್ಲಿ ಕೋವಿಡ್‌-19 ವೈರಸ್‌ ಸೋಂಕಿತರು ಹೆಚ್ಚಾಗುವ ಸಾಧ್ಯತೆ ಇದೆ ಎಂದು ತಜ್ಞರ ಸಮಿತಿ ವರದಿ ನೀಡಿದ್ದು, ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗುವು ದು. ಸರ್ಕಾರಿ, ಖಾಸಗಿ ಆಸ್ಪತ್ರೆಗಳು ಭರ್ತಿಯಾದರೆ  ಫೀಲ್ಡ್‌ ಆಸ್ಪತ್ರೆ ಕಾರ್ಯಾರಂಭಕ್ಕೂ ಸಿದ್ಧತೆ ನಡೆಸಲಾಗಿದೆ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಹೇಳಿದರು.

Advertisement

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಈಗಾಗಲೇ ಸರ್ಕಾರಿ ಆಸ್ಪತ್ರೆ ಹಾಗೂ ವೈದ್ಯಕೀಯ ಕಾಲೇಜುಗಳ  ಆಸ್ಪತ್ರೆಗಳಲ್ಲಿ 10,000 ಹಾಸಿಗೆಗಳನ್ನು ಐಸೋಲೇಟ್‌ ಮಾಡಿ ಕಾಯ್ದಿರಿಸುವ ಕೆಲಸ ನಡೆದಿದೆ. ಖಾಸಗಿ ಆಸ್ಪತ್ರೆಗಳೊಂದಿಗೂ ಮಾತುಕತೆ ನಡೆಸಲಾಗಿದ್ದು, ಸರ್ಕಾ ರಕ್ಕೆ ಸಮಸ್ಯೆ ಉಂಟಾದಾಗ ಕೈ ಜೋಡಿಸುವುದಾಗಿ ಭರವಸೆ ನೀಡಿವೆ  ಎಂದರು.ಜಿಲ್ಲೆ, ತಾಲೂಕುಗ ಳಲ್ಲಿ ಫೀಲ್ಡ್‌ ಆಸ್ಪತ್ರೆ ಬಗ್ಗೆಯೂ ಟಾಸ್ಕ್ ಫೋ ರ್ಸ್‌ ಸಭೆಯಲ್ಲಿ ಚರ್ಚಿ ಸಲಾಗಿದ್ದು, ತಜ್ಞರೊಂ ದಿಗೆ ಸಮಾಲೋಚನೆ ನಡೆದಿದೆ. ಸೋಂಕು ಹೆಚ್ಚಾಗಿ ಕಾಣಿಸಿಕೊಳ್ಳಲಾರಂಭಿಸಿದರೆ ತಜ್ಞರ ಸಮಿತಿ ಸಲಹೆ  ಪಡೆದು ಜಿಲ್ಲೆಗೊಂದು ಫೀಲ್ಡ್‌ ಆಸ್ಪತ್ರೆ ರೂಪಿಸಲಾಗುವುದು ಎಂದರು.

ಹಿಂದೆ ಕಳಪೆ ಕಿಟ್‌ ಬಂದಿದ್ದವು: ಈಗಲೂ ಕಳಪೆ ಕಿಟ್‌ ಪೂರೈಕೆಯಾಗಿದ್ದರೆ ಸಂಬಂಧ ಪಟ್ಟ ವರ ವಿರುದ ಎಫ್ಐಆರ್‌ ದಾಖಲಿಸಬೇಕು. ನಿ ರಂತರ ಪರಿಶೀಲನೆ, ತನಿಖೆ  ನಡೆಯುತ್ತಿದೆ ಎಂದರು. ಮುಚ್ಚಿಟ್ಟಿಲ್ಲ: ಸೋಂಕಿನಿಂದ ಮೃತ ಪಟ್ಟರೆ ಅದನ್ನು ಕೋವಿಡ್‌ ಸಾವು ಪ್ರಕರಣ ಎಂದು ದಾಖಲಿಸಲಾಗುತ್ತಿದೆ. ಬುಧವಾರ ನಡೆಯುವ ಟಾಸ್ಕ್ಫೋರ್ಸ್‌ ಸಭೆಯಲ್ಲಿ ಈ ಬಗ್ಗೆಯೂ ಚರ್ಚಿಸಲಾಗುವುದು ಎಂದು  ಹೇಳಿದರು.

ನಗರದಲ್ಲಿ ಕೋವಿಡ್‌ 19 ಸಾವಿನ ಸಂಖ್ಯೆ ಹೆಚ್ಚಾಗಿರು ವುದು ಆತಂಕ ಮೂಡಿಸಿದೆ. ಈ ಸಂಬಂಧ ಬುಧವಾರ ಹಿರಿಯ ಅಧಿಕಾರಿಗ ಳೊಂದಿಗೆ ಸಭೆ ನಡೆಸಲಾಗುವುದು. ಸೋಂಕು ಹಾಗೂ ಸಾವು ನಿಯಂತ್ರಣಕ್ಕೆ ಅಗತ್ಯವಿರುವ ಕ್ರಮಗಳ ಬಗ್ಗೆ  ಚರ್ಚಿಸಲಾಗುವುದು.
-ಬಿ. ಶ್ರೀರಾಮುಲು, ಸಚಿವ

Advertisement

Udayavani is now on Telegram. Click here to join our channel and stay updated with the latest news.

Next