Advertisement
ವಿದ್ಯಾರ್ಥಿಗಳು ಕೇವಲ ಚಿತ್ರ ಬಿಡಿಸುವುದರಲ್ಲಷ್ಟೇ ಅಲ್ಲದೆ ಸಿನಿಮಾ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ದೃಶ್ಯಕಲೆ ಸಂಬಂಧ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಲು ಅವಕಾಶ ಕಲ್ಪಿಸುವುದು ಇದರ ಉದ್ದೇಶವಾಗಿದೆ. ಆಧುನಿಕ ತಂತ್ರಜ್ಞಾನವನ್ನು ಒಳಗೊಂಡ ಕೌಶಲ್ಯ ತರಬೇತಿ ಇದರಲ್ಲಿದ್ದು, ದೃಶ್ಯಕಲಾ ವಿದ್ಯಾರ್ಥಿಗಳು ಹೊಸತನಕ್ಕೆ ತೆರೆದುಕೊಳ್ಳಲು ಲಲಿತಕಲಾ ಮತ್ತು ಶಿಲ್ಪಕಲಾ ಅಕಾಡೆಮಿಗಳು ಕ್ರಿಯಾಯೋಜನೆ ರೂಪಿಸಿವೆ.
Related Articles
Advertisement
ಸಿನಿಮಾ ಸೇರಿದಂತೆ ಇನ್ನಿತರ ಕ್ಷೇತ್ರಗಳಲ್ಲಿ ದೃಶ್ಯಕಲೆಗೆ ಅವಕಾಶಗಳಿವೆ. ಆದರೆ, ಆ ಅವಕಾಶಗಳನ್ನು ಗಿಟ್ಟಿಸಿ ಕೊಳ್ಳಲು ಕೌಶಲ್ಯ ತರಬೇತಿ ಜತೆಗೆ ಉದ್ಯೋಗ ವಕಾಶಗಳ ಬಗ್ಗೆ ಮಾಹಿತಿ ಕೂಡ ಬೇಕಾಗುತ್ತದೆ. ಅದನ್ನು ನೀಡುವ ನಿಟ್ಟಿನಲ್ಲಿ ಎರಡೂ ಅಕಾಡೆಮಿಗಳು ಈ ಯೋಜನೆ ರೂಪಿಸಿವೆ ಎಂದರು.
ಚಿತ್ರಕಲಾ ಕ್ಷೇತ್ರದ ಆಸಕ್ತಿ ಇದ್ದವರು ಸಿನಿಮಾ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ. ಅಂತಹ ಸಾಧಕ ರನ್ನು ಕೂಡ ಕಾರ್ಯಾಗಾರಕ್ಕೆ ಆಹ್ವಾನ ನೀಡುವ ಇರಾದೆಯಿದೆ ಎಂದು ಲಲಿತಕಲಾ ಅಕಾಡೆಮಿ ರಿಜಿಸ್ಟ್ರಾರ್ ಚಂದ್ರಶೇಖರ್ ಮಾಹಿತಿ ನೀಡಿದ್ದಾರೆ.
“ಹೊಸ ಸಾಧನೆಗಳು ಹೊಸ ಪರಿಕಲ್ಪನೆ ಗಳು’ಯೋಜನೆಯಡಿ ಕಲಬುರಗಿಯಲ್ಲಿ ಅಧ್ಯಾ ಪಕರ ಕಾರ್ಯಾಗಾರ ಹಮ್ಮಿಕೊಳ್ಳಲು ಈಗಾಗಲೇ ಅಕಾಡೆಮಿಗಳು ತೀರ್ಮಾನಿಸಿವೆ. ಅ.23ರಂದು ಅಳಂದ ರಸ್ತೆಯ ಅಜೀಂ ಪ್ರೇಮ್‌ಜೀ ಫೌಂಡೇಷನ್ ನಲ್ಲಿ ಕಾರ್ಯಾಗಾರ ನಡೆಸಲು ಈಗಾಗಲೇ ನಿರ್ಧಾರ ಕೈಗೊಳ್ಳಲಾಗಿದೆ.
ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಸಾಧಕ ಕಲಾವಿದರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ಚಿತ್ರಕಲಾ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಕರ್ನಾಟಕ ಲಲಿತಕಲಾ ಅಕಾಡೆಮಿ ಮತ್ತು ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಜತೆಗೂಡಿ “ಹೊಸ ಸಾಧನೆಗಳು ಹೊಸ ಪರಿಕಲ್ಪನೆಗಳು’ ಯೋಜನೆ ರೂಪಿಸಲಾಗಿದೆ. ಚಿತ್ರಕಲೆಗೆ ಸಂಬಂಧ ಉದ್ಯೋಗ ಹಲವು ಕ್ಷೇತ್ರಗಳಲ್ಲಿವೆ. ಅವುಗಳ ಬಗ್ಗೆ ಯುವ ಸಮೂಹಕ್ಕೆ ಮಾಹಿತಿ ನೀಡಬೇಕಾಗಿದೆ. – ವೀರಣ್ಣ ಮಾ.ಅರ್ಕಸಾಲಿ, ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಅಧ್ಯಕ್ಷ.