Advertisement

ಬೇಲೂರು ದೇಗುಲ ಪರಿಸರ ಅಭಿವೃದ್ಧಿಗೆ ಒತ್ತು

03:09 PM Feb 10, 2022 | Team Udayavani |

ಹಾಸನ: ಬೇಲೂರು ಚನ್ನಕೇಶವ ದೇವಾಲಯದ ಹಿಂಭಾಗದಲ್ಲಿರುವ ಪ್ರದೇಶವನ್ನು ಭೂಮಾಪನಮಾಡಿಸಿ ಸರಹದ್ದು ನಿಗದಿಪಡಿಸಬೇಕು ಎಂದುಜಿಲ್ಲಾಧಿಕಾರಿ ಆರ್‌.ಗಿರೀಶ್‌ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

Advertisement

ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಬೇಲೂರು ಚನ್ನಕೇಶವದೇವಾಲಯದ ಪರಿಸರದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿಮಾತನಾಡಿದ ಅವರು, ದೇಗುಲದ ಹಿಂಭಾಗದಜಾಗದ ವಿವಾದ ನ್ಯಾಯಾಲಯದಲ್ಲಿ ವಿಚಾರಣೆನಡೆಯುತ್ತಿದೆ. ಹಾಗಾಗಿ ಅಲ್ಲಿ ಕುಡಿಯುವ ನೀರಿನ ಟ್ಯಾಂಕ್‌, ಶೌಚಾಲಯಗಳ ನಿರ್ಮಾಣ ಸ್ಥಗಿತಗೊಳಿಸುವಂತೆ ಸೂಚನೆ ನೀಡಿದರು.

ಬೇಲೂರು ಮತ್ತು ಹಳೆಬೀಡು ಯುನೆಸ್ಕೋದವಿಶ್ವ ಪರಂಪರಾ ತಾಣಗಳೆಂದು ಗುರುತಿಸಲಾಗುತ್ತಿದ್ದು, ದೇವಾಲಯದ ಸುತ್ತ ಮುತ್ತಲಿನ ಆವರಣದಲ್ಲಿಇನ್ನಷ್ಟು ಸ್ವತ್ಛತೆಯನ್ನು ಕಾಪಾಡಬೇಕು ಎಂದು ಸಲಹೆ ನೀಡಿದರು.

ಪ್ರವಾಸೋದ್ಯಮ ಇಲಾಖೆಯ ಹಾಸನ ಕಚೇರಿ ಉಪ ನಿರ್ದೇಶಕ ಸಂಜಯ್‌, ಬೇಲೂರು ಪುರಸಭೆಮುಖ್ಯಾಧಿಕಾರಿ ಸುಜಯ್‌, ಬೇಲೂರುದೇವಾಲಯದ ಆಡಳಿತಾಧಿಕಾರಿ ವಿದ್ಯುಲ್ಲತಾ, ರಾಜ್ಯ ಪುರಾತತ್ವ ಇಲಾಖೆಯ ಕುಮಾರ್‌, ಮತ್ತಿತರರು ಹಾಜರಿದ್ದರು.

ಕೈಗಾರಿಕೆಗಳ ನಿವೇಶನ ವಾಪಸ್‌: ಜಿಲ್ಲಾಧಿಕಾರಿ ಸೂಚನೆ :

Advertisement

ಹಾಸನ: ಜಿಲ್ಲೆಯ ಕೈಗಾರಿಕಾ ಪ್ರದೇಶಗಳಲ್ಲಿ ಕೈಗಾರಿಕೆಗಳ ಪ್ರಾರಂಭದ ಉದ್ದೇಶದಿಂದ ನಿವೇಶನಪಡೆದು 20ರಿಂದ 25 ವರ್ಷಗಳಾದರೂಕೈಗಾರಿಕೆಗಳನ್ನು ಸ್ಥಾಪನೆ ಮಾಡದ ನಿವೇಶನಗಳನ್ನು ವಾಪಸ್‌ ಪಡೆಯುವ ಬಗ್ಗೆ ಸಂಬಂಧಪಟ್ಟವರಿಗೆ ನೋಟಿಸ್‌ ಜಾರಿ ಮಾಡುವಂತೆ ಜಿಲ್ಲಾಧಿಕಾರಿ ಆರ್‌ ಗಿರೀಶ್‌ ಸೂಚನೆ ನೀಡಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಮಟ್ಟದ ಏಕ ಗವಾಕ್ಷಿ ಸಮಿತಿ ಸಭೆ ನಡೆಸಿದಅವರು ಕೈಗಾರಿಕೆಗಳ ಅಭಿವೃದ್ಧಿ ಹಾಗೂಹೂಡಿಕೆದಾರರ ಹೊಸ ಕೈಗಾರಿಕಾ ಉದ್ಯಮಗಳಿಗೆಭೂಮಿ ಮಂಜೂರಾತಿ ದೃಷ್ಟಿಯಿಂದ ಈ ಹಿಂದೆಭೂಮಿ ಪಡೆದು ಕೈಗಾರಿಕೆ ಸ್ಥಾಪಿಸಿದೆ ಇರುವವರೆಗೆ ನೋಟಿಸ್‌ ಜಾರಿಮಾಡಿ ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಜಿಲ್ಲೆಯ ಕೈಗಾರಿಕಾ ಪ್ರದೇಶದಲ್ಲಿ ಮೂಲ ಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಗಮನ ಹರಿಸಬೇಕು. ಸಣ್ಣ ಕೈಗಾರಿಕಾ ಪ್ರದೇಶದಲ್ಲಿ ಪ್ರತಿನಿತ್ಯ 70 ಲಕ್ಷ ಲೀಟರ್‌ ನೀರಿನ ಬೇಡಿಕೆ ಇದ್ದು ಕೇವಲ 30 ಲಕ್ಷಲೀಟರ್‌ ಪೂರೈಕೆ ಆಗುತ್ತಿರುವುದರಿಂದ ಕೊರತೆನೀಗಿಸಲು ಅಗತ್ಯ ಕ್ರಮ ಕೈಗೊಳ್ಳಲು ಕೈಗಾರಿಕಾಇಲಾಖೆ ಅಧಿಕಾರಿಗಳು ಹಾಗೂ ಕೆಐಎಡಿಬಿಅಧಿಕಾರಿಗಳು ಹಾಗೂ ಸಣ್ಣ ಕೈಗಾರಿಕೆಗೆ ಸಂಬಂಧಪಟ್ಟಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಆರ್‌. ಗಿರೀಶ್‌ ಅವರು ಸೂಚಿಸಿದರು.

ಕೆಎಸ್‌ಐಡಿಸಿ ಇಂಡಸ್ಟಿ›ಯಲ್‌ ಎಸ್ಟೇಟ್‌ ಹಾಗೂ ಕೆಎಐಡಿಬಿ. ಇಂಡಸ್ಟಿ›ಯಲ್‌ ಏರಿಯಾದ ಕುಂದು ಕೊರತೆಗಳನ್ನು ಬಗೆಹರಿಸಬೇಕು. ಐಟಿ ಪಾರ್ಕ್‌ ಸ್ಥಾಪನೆಗೆ ಅನುಮತಿ ನೀಡಬೇಕು ಹಾಗೂ ಹಾಸನದಲ್ಲಿ ರಾಷ್ಟ್ರಮಟ್ಟದ ಬೃಹತ್‌ ಕೈಗಾರಿಕೆ ಸಮಾವೇಶ ನಡೆಸಬೇಕು ಜಿಲ್ಲೆಯ ಸಣ್ಣ ಕೈಗಾರಿಕಾ ಸಂಘದ ಅಧ್ಯಕ್ಷ ಮಹಾಂತಪ್ಪ ಹಾಗೂ ಸಣ್ಣ ಕೈಗಾರಿಕಾ ಸಂಘದ ಉಪಾಧ್ಯಕ್ಷ ಎಚ್‌.ಎ. ಕಿರಣ್‌ ಮನವಿ ಸಲ್ಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next