Advertisement

AFGvsBAN: ಪಂದ್ಯದ ವೇಳೆ ಕುಸಿದು ಬಿದ್ದ ಗುಲ್ಬದಿನ್; ಆಸ್ಕರ್‌ ಕೊಡಿ ಎಂದ ನೆಟ್ಟಿಗರು.!

12:52 PM Jun 25, 2024 | Team Udayavani |

ಕಿಂಗ್‌ ಸ್ಟನ್:‌ ಟಿ20 ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಅಫ್ಘಾನಿಸ್ಥಾನ ಬಾಂಗ್ಲಾದೇಶವನ್ನು ಸೋಲಿಸಿ ಚೊಚ್ಚಲ ಬಾರಿಗೆ ಸೆಮಿಫೈನಲ್‌ ಪ್ರವೇಶಿಸಿದೆ. ಆ ಮೂಲಕ ಕ್ರಿಕೆಟ್‌ ಲೋಕದಲ್ಲಿ ಇತಿಹಾಸ ಬರೆದಿದೆ.

Advertisement

ಎರಡು ತಂಡಗಳಿಗೂ ಇದು ಮಾಡು ಇಲ್ಲವೆ ಮಡಿ ಪಂದ್ಯ ಇದಾಗಿತ್ತು. ಬಾಂಗ್ಲಾಕ್ಕೆ 12.1 ಓವರ್‌ ನಲ್ಲಿ ಪಂದ್ಯ ಗೆಲ್ಲುವ ಅನಿವಾರ್ಯತೆಯಿತ್ತು. ಇತ್ತ ಅಘ್ಘಾನ್‌ ಗೆದ್ದರೆ ಸೆಮಿಫೈನಲ್‌ ಗೇರುವ ಅವಕಾಶವಿತ್ತು.

ಅಘ್ಘಾನ್‌ ತನ್ನ ಬ್ಯಾಟಿಂಗ್‌ ಇನ್ನಿಂಗ್ಸ್‌ ನಲ್ಲಿ115 ರನ್‌ ಗಳಿಸಿ 5 ವಿಕೆಟ್‌ ಕಳೆದುಕೊಂಡಿತು. ಮಳೆಯಿಂದ ಎರಡು ಮೂರು ಬಾರಿ ಪಂದ್ಯ ನಿಂತಿದ್ದರಿಂದ ಕೊನೆಯದಾಗಿ ಡಿಎಲ್‌ ಎಸ್‌ ನಿಯಮದ ಪ್ರಕಾರ ಒಂದು ಓವರ್‌ ಕಡಿತಗೊಳಿಸಿ, 114 ರ ಗುರಿಯನ್ನು ನೀಡಲಾಗಿತ್ತು.

ಡಿಎಲ್‌ ಎಸ್‌ ಪ್ರಕಾರ ಬ್ಲಾಂಗಾ ಎರಡು ರನ್‌ ಗಳಿಂದ ಹಿನ್ನಡೆಯಲ್ಲಿತ್ತು. ಆ ಸಮಯದಲ್ಲಿ ಪಂದ್ಯ ರದ್ದಾಗಿದ್ದರೆ ಅಘ್ಘಾನ್‌ ಸೆಮೀಸ್‌ ಲಗ್ಗೆಯಿಡುತ್ತಿತ್ತು.

ಇದೇ ವೇಳೆ ಅಘ್ಘಾನ್‌ ಕೋಚ್‌ ಜೊನಾಥನ್ ಟ್ರಾಟ್ ಮಳೆ ಬರುತ್ತಿದೆ. ಸ್ಲೋ ಡೌನ್‌ ಎಂದು ಕೈ ಬೀಸುತ್ತಾ ತಂಡದ ಆಟಗಾರರಿಗೆ ಸನ್ನೆ ಮಾಡಿದ್ದರು. ಈ ವೇಳೆ ಆಲ್‌ ರೌಂಡರ್‌ ಗುಲ್ಬದಿನ್ ನೈಬ್‌ ಸ್ಲಿಪ್‌ ಭಾಗದಲ್ಲಿ ನಿಂತಿದ್ದರು. ಇನ್ನೇನು ಬೌಲಿಂಗ್‌ ಮಾಡಬೇಕು ಎನ್ನುವಷ್ಟರಲ್ಲೇ ಗುಲ್ಬದಿನ್ ಇದ್ದಕ್ಕಿದ್ದಂತೆ ಮಂಡಿ ನೋವಿನಿಂದ ಬಿದ್ದಿದ್ದಾರೆ. ಇದಾದ ನಂತರ ಅವರನ್ನು ಸಹ ಆಟಗಾರರು ಡೆಸ್ರಿಂಗ್‌ ರೂಮ್‌ ನತ್ತ ಕರೆದುಕೊಂಡು ಹೋಗಿದ್ದಾರೆ.

Advertisement

11.4 ಓವರ್‌ ಗಳಲ್ಲಿ 81-7 ವಿಕೆಟ್‌ ಕಳೆದುಕೊಂಡಿತ್ತು. ಇದಾದ ಬಳಿಕ ಪಂದ್ಯ ಮಳೆಯಿಂದ ಮತ್ತೆ ನಿಂತು ಆರಂಭಗೊಂಡಾಗ ಗುಲ್ಬದಿನ್ ಫೀಲ್ಡ್‌ ಗೆ ಬಂದಿಲಿಲ್ಲ. 15ನೇ ಓವರ್‌ ಗಾಗಿ ಗುಲ್ಬದಿನ್ ಮೈದಾನಕ್ಕೆ ಬಂದಿದ್ದರು.

ಗುಲ್ಬದಿನ್ ಫೀಲ್ಡ್‌ ಮಾಡುವಾಗ, ಕೋಚ್‌ ಸಿಗ್ನಲ್‌ ಕೊಟ್ಟ ಬಳಿಕವೇ ಗುಲ್ಬದಿನ್ ಮಂಡಿನೋವಿನಿಂದ ಕುಸಿದು ಬಿದ್ದಿರುವುದಕ್ಕೆ ಹಲವರು ಇದನ್ನು ವ್ಯಂಗ್ಯವಾಡಿದ್ದಾರೆ. ಲಿಟನ್‌ ದಾಸ್‌ ಗುಲ್ಬದಿನ್ ಬಿದ್ದ ದೃಶ್ಯವನ್ನು ವ್ಯಂಗ್ಯವಾಗಿಸಿದ್ದಾರೆ.

ಕಾಮೆಂಟ್ರಿ ಮಾಡುತ್ತಿದ್ದವರು ಕೂಡ ಗುಲ್ಬದಿನ್‌ ಬಗ್ಗೆ ತಮಾಷೆಯಾಗಿ ಮಾತನಾಡಿದ್ದಾರೆ. ಇವರ ನಾಟಕಕ್ಕೆ ಆಸ್ಕರ್‌ ಅಥವಾ ಎಮ್ಮಿ ಆವಾರ್ಡ್‌ ಸಿಹಬಹುದು. ಮ್ಯಾಚ್‌ ನ ಸಂಭಾವನೆ ಹೋಯಿತೆಂದು ಪೊಮ್ಮಿ ಎಂಬೆಂಗ್ವಾ ತಮಾಷೆ ಮಾಡಿದ್ದಾರೆ.

ಪಂದ್ಯ ಗೆದ್ದ ಕೂಡಲೇ ಗುಲ್ಬದಿನ್‌ ಓಡೋಡಿ ಬಂದು ಸಂಭ್ರಮಿಸಿದ್ದಾರೆ. ಗಾಯಗೊಂಡು ವಿಶ್ರಾಂತಿಯಲ್ಲಿದ್ದವರು ಇಷ್ಟು ವೇಗವಾಗಿ ಹೇಗೆ ಸಾಧ್ಯ. ಇದೊಂದು ಸುಳ್ಳು ಗಾಯದ ಡ್ರಾಮಾ ಎಂದು ನೆಟ್ಟಿಗರು ಗರಂ ಆಗಿದ್ದಾರೆ. ಇಂಟರ್‌ ನೆಟ್‌ ಈ ವಿಡಿಯೋ ವೈರಲ್‌ ಆಗಿದ್ದು, ಗುಲ್ಬದಿನ್‌ ಅವರ ಪ್ರದರ್ಶನಕ್ಕೆ ʼಆಸ್ಕರ್‌ʼ ಕೊಡಿ ಎಂದು ಟ್ರೋಲ್‌ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next