Advertisement

ಮತ್ತೆ ಮೂರು ತಿಂಗಳು ಇಎಂಐ ಪಾವತಿ ಮುಂದೂಡಿಕೆ: ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್

10:46 AM May 22, 2020 | keerthan |

ಹೊಸದಿಲ್ಲಿ: ಲಾಕ್ ಡೌನ್ ಘೋಷಣೆಯಾ್ದ ಬಳಿಕ ಮೂರು ತಿಂಗಳ ಇಎಂಐ ಪಾವತಿಯನ್ನು ಮುಂದೂಡಿದ್ದ ಆರ್ ಬಿಐ ಈಗ ಮತ್ತೆ ಮೂರು ತಿಂಗಳ ಇಎಂಐ ಪಾವತಿಯನ್ನು ಮುಂದೂಡಿಕೆ ಮಾಡಿದೆ.

Advertisement

ಇಂದು ಸುದ್ದಿಗೋಷ್ಠಿ ನಡೆಸಿದ ನಡೆಸಿದ ಭಾರತೀಯ ರಿಸರ್ವ್ ಬ್ಯಾಂಕ್ ನ ಗವರ್ನರ್ ಶಕ್ತಿಕಾಂತ್ ದಾಸ್ ಅವರು ಆರ್ಥಿಕತೆಗೆ ಚೇತರಿಕೆ ನೀಡುವಂತಹ ಕೆಲವು ಕ್ರಮಗಳನ್ನು ಘೋಷಿಸಿದ್ದಾರೆ.

ಈ ವೇಳೆ ಕೋವಿಡ್-19 ಲಾಕ್ ಡೌನ್ ದೇಶದಲ್ಲಿ ಮತ್ತಷ್ಟು ಮುಂದುವರಿದ ಹಿನ್ನಲೆಯಲ್ಲಿ ಇಎಂಐ ಪಾವತಿಯನ್ನು ಮತ್ತೆ ಮೂರು ತಿಂಗಳ ಕಾಲ ಮುಂದೂಡಿಕೆ ಮಾಡುವುದಾಗಿ ಹೇಳಿದರು. ಜೂನ್ ಒಂದರಿಂದ ಆಗಸ್ಟ್ 31ರ ವರೆಗೆ ಜನರು ಇಎಂಐ ಪಾವತಿ ಮಾಡುವಂತಿಲ್ಲ ಎಂದರು.

ಪ್ರಧಾನಿ ನರೇಂದ್ರ ಮೋದಿಯವರು 20 ಲಕ್ಷ ಕೋಟಿ ರೂ. ಆರ್ಥಿಕ ಪ್ಯಾಕೇಜ್ ಘೋಷಿಸಿದ ಬಳಿಕ ಮೊದಲ ಬಾರಿಗೆ ಸುದ್ದಿಗೋಷ್ಠಿ ನಡೆಸಿದ ಆರ್ ಬಿಐ ಗವರ್ನರ್,  ರೆಪೋ ಮತ್ತು ರಿವರ್ಸ್ ರೆಪೋ ದರ ಇಳಿಕೆ ಮಾಡಿದ್ದಾರೆ. ರೆಪೋ ದರದಲ್ಲಿ 40 ಬೇಸಿಸ್ ಪಾಯಿಂಟ್ ಕಡಿತ ಮಾಡಲಾಗಿದೆ. ಶೇ. 4.4ರಷ್ಟಿದ್ದ ರೆಪೋ ದರ ಶೇ. 4ಕ್ಕೆ ಇಳಿಕೆಯಾಗಿದೆ. ರಿವರ್ಸ್ ರಿಪೋ ದರವನ್ನೂ ಕೂಡ ಶೇ. 3.35ಕ್ಕೆ ಇಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next