Advertisement

ರಕ್ಷಕ or ಸರ್ವಾಧಿಕಾರಿ?: ಕಂಗನಾ ʼಎಮರ್ಜೆನ್ಸಿʼ ರಿಲೀಸ್‌ಗೆ ಡೇಟ್‌ ಫಿಕ್ಸ್

01:01 PM Jun 24, 2023 | Team Udayavani |

ಮುಂಬಯಿ: ಕಂಗನಾ ರಣಾವುತ್ ನಿರ್ದೇಶನ ಮಾಡಿರುವ ಬಾಲಿವುಡ್‌ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿರುವ ‘ಎಮರ್ಜೆನ್ಸಿʼ ಚಿತ್ರ ತಂಡ ರಿಲೀಸ್‌ ಡೇಟ್‌ ಅನೌನ್ಸ್‌  ಮಾಡಿದೆ.

Advertisement

ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ಹೇರಿದ್ದ ತುರ್ತು ಪರಿಸ್ಥಿತಿ ಕುರಿತು ತಯಾರಾದ ʼಎಮರ್ಜೆನ್ಸಿʼ ಸಿನಿಮಾದಲ್ಲಿ ಕಂಗನಾ ಇಂದಿರಾ ಗಾಂಧಿ ಅವರ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾದ ಟೀಸರ್‌ ಗೆ ರಾಜಕೀಯವಾಗಿ ಒಂದಷ್ಟು ವಿರೋಧ ವ್ಯಕ್ತವಾಗಿತ್ತು. ಸಿನಿಮಾದ ಚಿತ್ರೀಕರಣ ಮುಗಿಸಲು ಆಸ್ತಿಯನ್ನು ಅಡ್ಡವಿಟ್ಟಿದ್ದೇನೆ ಎಂದು ನಟಿ ಈ ಹಿಂದೆ ಹೇಳಿದ್ದರು.

ಒಂದಷ್ಟು  ವಿಚಾರಗಳಿಗೆ ಸುದ್ದಿಯಾಗಿರುವ ʼಎಮರ್ಜೆನ್ಸಿʼ ಸಿನಿಮಾ ಇದೀಗ ರಿಲೀಸ್‌ ಡೇಟನ್ನು ಅನೌನ್ಸ್‌ ಮಾಡಿದೆ.

ಪುಟ್ಟ ಟೀಸರ್‌ ಮೂಲಕ ಡೇಟ್‌ ರಿವೀಲ್‌ ಮಾಡಿದೆ. ಅಂದು ನಡೆದಿದ್ದ ಹಿಂಸೆ, ಹೋರಾಟ, ವಿರೋಧ ಪಕ್ಷದ ನಾಯಕರ ಬಂಧನದ ಬಗ್ಗೆ ಟೀಸರ್‌ ನಲ್ಲಿ ತೋರಿಸಲಾಗಿದೆ. ಪ್ರಧಾನಿ ರಕ್ಷಕ ಅಥವಾ ಸರ್ವಾಧಿಕಾರಿಯೋ? ಎಂದು ಪ್ರಶ್ನೆಯನ್ನು ಮಾಡಲಾಗಿದೆ. ನವೆಂಬರ್‌ 24 ರಂದು ಸಿನಿಮಾ ತೆರೆಗೆ ಬರಲಿದೆ ಎಂದು ಸಿನಿಮಾ ತಂಡ ಅನೌನ್ಸ್‌ ಮಾಡಿದೆ.

“ನಮ್ಮ ರಾಷ್ಟ್ರದ ನಾಯಕ ತನ್ನ ಜನರ ಮೇಲೆ ಯುದ್ಧವನ್ನು ಘೋಷಿಸಿದ್ದು ನಮ್ಮ ಇತಿಹಾಸದ ಕರಾಳ ಘಟ್ಟಕ್ಕೆ ಸಾಕ್ಷಿ” ಕಂಗನಾ ಬರೆದುಕೊಂಡಿದ್ದಾರೆ.

Advertisement

ಸಿನಿಮಾದಲ್ಲಿ ನಟ ಅನುಪಮ್ ಖೇರ್ ಜಯಪ್ರಕಾಶ್‌ ನಾರಾಯಣ್‌ ಅವರ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಮಿಲಿಂದ್ ಸೋಮನ್ ,ಮಹಿಮಾ ಚೌಧರಿ, ವಿಶಾಕ್ ನಾಯರ್, ಸತೀಶ್ ಕೌಶಿಕ್ ಶ್ರೇಯಸ್ ತಲ್ಪಡೆ ಮುಂತಾದ ಕಲಾವಿದರು ವಿವಿಧ ರಾಜಕೀಯ ಮುಖಂಡರ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next