Advertisement
ಬರೀ ಕರಾವಳಿಯಷ್ಟೇ ಅಲ್ಲ; ರಾಜ್ಯದ ಎಂಎಸ್‌ಎಂಇ ಪ್ರಸ್ತುತ ಎದುರಿಸು ತ್ತಿರುವ ಸಮಸ್ಯೆ ಯೆಂದರೆ ಉತ್ಪನ್ನಗಳ ಮಾರಾಟ ಮತ್ತು ಹಣ ಕಾಸು ಹರಿವಿನ ಸಮಸ್ಯೆ, ದುಡಿಮೆ ಬಂಡವಾಳದ ಕೊರತೆ ಮತ್ತು ಕಾರ್ಮಿಕರ ಕೊರತೆ. ಅವುಗಳ ನಿವಾ ರಣೆಗೆ ಗಮನ ಕೊಡಬೇಕಿದೆ.
Related Articles
Advertisement
ಎಂಎಸ್‌ಎಂಇಗಳಿಗಾಗಿ ಕಳೆದ ವರ್ಷ ಘೋಷಿಸಿದ ಪರಿಹಾರ ಪ್ಯಾಕೇಜ್ ಈ ಬಾರಿಯೂ ನೀಡುವುದು, ಎಪ್ರಿಲ್‌ನಿಂದ ಜುಲೈ ವರೆಗಿನ ಸಾಲಗಳು, ದುಡಿಮೆ ಬಂಡವಾಳ ಇತ್ಯಾದಿ ಮೇಲಿನ ಬಡ್ಡಿ ಮನ್ನಾ ಮತ್ತು ಮುಂದಿನ 6 ತಿಂಗಳ ವರೆಗೆ ಸಾಲ ಮರುಪಾವತಿಯನ್ನು ಮುಂದೂಡುವುದು, ಮುಂದಿನ ಎರಡು ವರ್ಷಗಳ ವರೆಗೆ ಎಂಎಸ್‌ಎಂಇ ಸಾಲಗಾರರಿಗೆ ಎಲ್ಲ ರೀತಿಯ ಸಾಲಗಳ ಮೇಲೆ ಶೇ. 6ರಷ್ಟು ಮೃದು ಸಾಲ, ಎಲ್ಲ ಸ್ಲ್ಯಾಬ್‌ಗಳಲ್ಲಿ ಟಿಡಿಎಸ್ ಅನ್ನು ಶೇ. 50ರಷ್ಟು ಕಡಿಮೆ ಮುಂತಾದ ಆರ್ಥಿಕ ಉತ್ತೇಜನಗಳನ್ನು ಕ್ಷೇತ್ರ ನಿರೀಕ್ಷಿಸುತ್ತಿದೆ.
ಕೈಗಾರಿಕೆಗಳು ವಿವಿಧ ಸಮಸ್ಯೆಗಳಿಂದ ಬಳಲುತ್ತಿರುವುದರಿಂದ ಜಿಎಸ್‌ಟಿ ರಿಟರ್ನ್ಸ್
ಸಲ್ಲಿಸಲು 5 ಕೋಟಿ ರೂ.ಗಳ ವರೆಗಿನ ವ್ಯವಹಾರ ನಡೆಸುವ ಎಂಎಸ್‌ಎಂಇಗಳಿಗೆ 6 ತಿಂಗಳು ಮತ್ತು 5 ಕೋಟಿ ರೂ.ಗಳಿಗಿಂತ ಹೆಚ್ಚಿನ ವ್ಯವಹಾರ ನಡೆಸುವ ಘಟಕಗಳಿಗೆ 3 ತಿಂಗಳು ಕಾಲಾವಕಾಶ ನೀಡಲು ಹಾಗೂ ಈ ಹಿಂದೆ ವ್ಯಾಟ್ ಅಡಿಯಲ್ಲಿ ಕೈಗಾರಿಕೆಗಳಿಗೆ ಇದ್ದಂತೆ ವಿಶೇಷವಾಗಿ ಮಾಸಿಕ ರಿಟರ್ನ್, ತ್ತೈಮಾಸಿಕ ಪಾವತಿ ವ್ಯವಸ್ಥೆ ಒದಗಿಸಲು ಸರಕಾರವನ್ನು ಎಂಎಸ್‌ಎಂಇ ಕ್ಷೇತ್ರ ಈಗಾಗಲೇ ಒತ್ತಾಯಿಸಿದೆ.
ವಿದ್ಯುತ್ ದರದಲ್ಲಿ ಸ್ವಲ್ಪ ಸಮಯದ ವರೆಗೆ ಒಂದಷ್ಟು ರಿಯಾಯಿತಿ, ವಿದ್ಯುತ್ ತೆರಿಗೆ ಕಡಿತಗೊಳಿಸುವುದು ಮುಂತಾದ ಕ್ರಮಗಳೂ ಕ್ಷೇತ್ರದ ಆರ್ಥಿಕ ಸಂಕಷ್ಟ ನಿವಾರಣೆಯಲ್ಲಿ ಸಹಕಾರಿಯಾಗಲಿವೆ ಎನ್ನುತ್ತವೆ ಉದ್ಯಮಗಳು.
ಎಂಎಸ್‌ಎಂಇಗಳು ಸಹಜ ಸ್ಥಿತಿಗೆ ಮರುಳುವಂತಾಗಲು ಅವುಗಳ ಮೇಲಿನ ಹೊರೆ ಕಡಿಮೆ ಮಾಡುವ ಮತ್ತು ಅವುಗಳ ಚೇತರಿಕೆಯ ನಿಟ್ಟಿನಲ್ಲಿ ಕೆಲವು ತುರ್ತು ಕ್ರಮಗಳನ್ನು ಕ್ಷೇತ್ರ ಎದುರು ನೋಡುತ್ತಿದೆ ಎನ್ನುತ್ತಾರೆ ಕೆನರಾ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ಅಜಿತ್ ಕಾಮತ್ ಮತ್ತು ಉಡುಪಿ ಜಿಲ್ಲಾ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ಐ.ಆರ್. ಫೆರ್ನಾಂಡಿಸ್.
ಶೇ. 50ರ ನಿರ್ಬಂಧ ತೆರವು :
ಸಾಮಾನ್ಯವಾಗಿ ಸಣ್ಣ ಕೈಗಾರಿಕೆ ಘಟಕ ಗಳು ಸೀಮಿತ ಸಂಖ್ಯೆಯ ಕೆಲಸಗಾರ ರೊಂದಿಗೆ ಕಾರ್ಯ ನಿರ್ವಹಿಸುತ್ತಿವೆ. ಪ್ರಸ್ತುತ ಶೇ. 50ರಷ್ಟು ಕಾರ್ಮಿಕರನ್ನು ಇಟ್ಟುಕೊಂಡು ಕಾರ್ಯನಿರ್ವಹಿಸಲು ಅನುಮತಿ ನೀಡಲಾಗಿದೆ. ಈ ನಿರ್ಬಂಧ ಕೈಗಾರಿಕೆಗಳನ್ನು ಸಂಕಷ್ಟಕ್ಕೀಡು ಮಾಡಿದ್ದು ಶೇ. 50ರ ನಿರ್ಬಂಧ ತೆರವು ಅವಶ್ಯ ಎಂದು ಉದ್ದಿಮೆದಾರರು ಬಯಸುತ್ತಿದ್ದಾರೆ.
ಸರಕಾರದ ನೆರವು ಹರಿಯಬೇಕು :
ದಕ್ಷಿಣ ಕನ್ನಡ, ಉಡುಪಿ ಜಿಲ್ಲೆ ಗಳಲ್ಲಿ ಸುಮಾರು 6 ಸಾವಿರ ಕೋ.ರೂ. ಹೂಡಿಕೆ ಯಾಗಿದ್ದು, 2.80 ಲಕ್ಷ ಉದ್ಯೋ ಗಾ ವ ಕಾಶಗಳನ್ನು ಸೃಷ್ಟಿಸಿದೆ. ಹಿಂದಿನ ಲಾಕ್‌ಡೌನ್ ವೇಳೆ ರಾಜ್ಯಾದ್ಯಂತ ಶೇ. 20ರಷ್ಟು$ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆ ಗಳು ಮುಚ್ಚಿ 12ರಿಂದ 15 ಲಕ್ಷ ಉದ್ಯೋಗ ನಷ್ಟ ಉಂಟಾಗಿದೆ. 2ನೇ ಲಾಕ್‌ಡೌನ್ ವೇಳೆ ಪರಿಸ್ಥಿತಿ ಇನ್ನಷ್ಟು ಬಿಗಡಾಯಿ ಸಿದೆ. ಇಂತಹ ಕಠಿನ ಪರಿಸ್ಥಿತಿಯಲ್ಲಿ ಸರಕಾರ ಸೂಕ್ತ ಪರಿಹಾರಗಳನ್ನು ಘೋಷಿಸದಿದ್ದರೆ ಶೇ. 25ರಿಂದ ಶೇ. 30ರಷ್ಟು ಕೈಗಾರಿಕೆಗಳು ಸಂಪೂರ್ಣ ಸ್ಥಗಿತಗೊಳ್ಳುವ ಸಾಧ್ಯತೆಗಳಿದ್ದು, ಸುಮಾರು 15ರಿಂದ 20 ಲಕ್ಷ ಉದ್ಯೋಗ ನಷ್ಟ ಉಂಟಾಗಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.
ಕೋವಿಡ್ ಸಂಕಷ್ಟದಿಂದಾಗಿ ರಾಜ್ಯದಲ್ಲಿ ಎಂಎಸ್‌ಎಂಇ ಬಿಕ್ಕಟ್ಟಿನ ಪರಿಸ್ಥಿತಿ ಎದುರಿಸುತ್ತಿದ್ದು, ಸರಕಾರ ಸೂಕ್ತ ಪರಿಹಾರಗಳನ್ನು ಘೋಷಿಸದಿದ್ದಲ್ಲಿ ಶೇ. 25ರಿಂದ ಶೇ. 30ರಷ್ಟು ಕೈಗಾರಿಕೆಗಳು ಸಂಪೂರ್ಣ ವಾಗಿ ಸ್ಥಗಿತಗೊಳ್ಳುವ ಸಾಧ್ಯತೆ ಗಳಿವೆ. ಎಂಎಸ್‌ಎಂಇಗಳು ಸಹಜ ಸ್ಥಿತಿಗೆ ಮರಳು ವಂತಾಗಲು ಅವುಗಳ ಹಿತಾ ಸಕ್ತಿ ಯನ್ನು ಕಾಪಾಡುವಲ್ಲಿ ತ್ವರಿತ ವಾಗಿ ಸೂಕ್ತ ಪ್ಯಾಕೇಜ್ ಘೋಷಿಸು ವಂತೆ ಕಾಸಿಯಾ ಕೇಂದ್ರ ಮತ್ತು ರಾಜ್ಯ ಸರಕಾರಗಳನ್ನು ಈಗಾಗಲೇ ಕೋರಿದೆ. – ಕೆ.ಬಿ. ಅರಸಪ್ಪ , ಅಧ್ಯಕ್ಷರು, ಕಾಸಿಯಾ
ಕೇಶವ ಕುಂದರ್