Advertisement
ಶಿಕ್ಷಣವನ್ನು ಪ್ರತ್ಯಕ್ಷವಾಗಿ ಅನು ಭವಿಸಿದಾಗ ಜ್ಞಾನ ಸಂಪಾದನೆ ಜತೆಗೆ ಅರಿವು ಮೂಡಿಸಲು ಸಾಧ್ಯ. ಗದ್ದೆ ಎಂದರೆ ಏನು, ಅಕ್ಕಿ ಹೇಗೆ ಸಿದ್ಧವಾಗುತ್ತದೆ ಎಂಬ ಅರಿವಿರದ ಸ್ಥಿತಿ ಮುಂದಿನ ಜನಾಂಗಕ್ಕೆ ಬರಬಾರ ದೆನ್ನುವ ನಿಟ್ಟಿನಲ್ಲಿ ಶಿಕ್ಷಕರು, ಶಾಲಾಭಿ ವೃದ್ಧಿ ಸಮಿತಿ, ಹಳೇ ವಿದ್ಯಾರ್ಥಿಗಳ ಸಲಹೆಯಂತೆ ಶಾಲೆಯಲ್ಲೇ ಗದ್ದೆ ನಿರ್ಮಾಣ ಮಾಡಲಾಗಿದೆ.
20 ಸೆಂಟ್ಸ್ ಸ್ಥಳಾವಕಾಶದಲ್ಲಿ 10 ದಿನ ಗಳಲ್ಲಿ ಗದ್ದೆ ಸಿದ್ಧವಾಗಿ ಉತ್ತು, ನೇಜಿ ನೆಡ ಲಾಗಿತ್ತು. ಸ್ಥಳೀಯ ರಾಜಕಮಲ್ ಕನ್‌ಸ್ಟ್ರಕ್ಷನ್ ಮಾಲಕರು ಜೆಸಿಬಿಯಿಂದ ಮಣ್ಣು ಹದಾಗೊಳಿಸಿ, ಅಬ್ದುಲ್ ಖಾದರ್ ಕೋಡಿ ಯೇಲು ಒದಗಿಸಿದ 100 ಬಟ್ಟಿ ಸೆಗಣಿ, ಚಂದ್ರಾಯ ಆಚಾರ್ ನೀಡಿದ 10 ಬ್ಯಾಗ್ ಬೂದಿ, ಕೊರಗಪ್ಪ ಪೂಜಾರಿ ನೀಡಿದ ನೇಜಿ ಗದ್ದೆ ಹಚ್ಚ ಹಸುರಾಗುವಲ್ಲಿ ಸಾಕ್ಷಿಯಾಗಿದೆ.
Related Articles
ಹಿಂದಿನ ಮಾದರಿಯಲ್ಲಿ ಮಹಿಳೆಯ ರಿಂದ ಪಾಡ್ದನ ಹಾಡಿಸಿ, ಗ್ರಾಮ ಪಂಚಾಯತ್ ಅಧ್ಯಕ್ಷ ಸುನಿಲ್ ಸಾಲ್ಯಾನ್ ಬೇಂಗಾಯಿ ನೇಜಿ ಗದ್ದೆಯಲ್ಲಿ ದೀಪ ಬೆಳಗಿಸಿ ಕೆಲಸಕ್ಕೆ ಚಾಲನೆ ನೀಡಲಾಗಿತ್ತು ಹಳೇ ವಿದ್ಯಾರ್ಥಿಗಳು, ಮಕ್ಕಳು, ಶಿಕ್ಷಕರು, ವಿದ್ಯಾಭಿಮಾನಿಗಳು ಜತೆಗೂಡಿ ನೇಜಿ ನೆಟ್ಟು ಖುಷಿ ಪಟ್ಟರು.
Advertisement
ಗದ್ದೆ ಕಲ್ಪನೆ ಸಾಕಾರಸರಕಾರಿ ಶಾಲೆಯಲ್ಲಿ ಅಧ್ಯಾಪಕರು ತಮ್ಮನ್ನು ತಾವು ತೊಡಗಿಸುವ ಜತೆಗೆ ಸ್ಥಳೀಯರು ಶಾಲೆ ಬೆಳವಣಿಗೆಗೆ ಸಹಕಾರ ನೀಡುತ್ತಾರೆ. ಇವುಗಳು ಶಾಲೆಯ ಕೀರ್ತಿಗೆ ಮಕ್ಕಳು ತಮ್ಮನ್ನು ತಾವು ತೊಡಗಿಸಿಕೊಳ್ಳಲು ಸಹಕಾರಿ. ಮಕ್ಕಳು ಗದ್ದೆ ಬೇಸಾಯ ಅನುಭವ ಸಿಗುವ ಸಲುವಾಗಿ, ಭತ್ತ ಹೇಗೆ ಬೆಳೆಯುತ್ತೇವೆ ಎಂಬ ಕಲ್ಪನೆ ಮಕ್ಕಳಿಗೆ ನೀಡುವ ದೃಷ್ಟಿಯಿಂದ ಗದ್ದೆ ಕಲ್ಪನೆ ಸಾಕಾರಗೊಂಡಿದೆ.
– ಲೀಲಾವತಿ ಕೆ., ಪ್ರಭಾರ ಮುಖ್ಯೋಪಾಧ್ಯಾಯಿನಿ
ಕೃಷಿಯೆಡೆಗೆ ಒಲವು
ಎಲ್ಲರ ಸಹಕಾರದಿಂದ ಶಾಲೆಯಲ್ಲಿ ಹೊಸ ಕಲ್ಪನೆ ಅಳವಡಿಸಿದ್ದೇವೆ. ಮಕ್ಕಳು ಇದರ ಪ್ರಯೋಜನ ಪಡೆಯುವುದರೊಂದಿಗೆ ಕೃಷಿಯೆಡೆಗೆ ಒಲವು ಬೆಳೆಸುವ ಸದುದ್ದೇಶ ನಮ್ಮದು. ವಿಮುಖವಾಗುತ್ತಿರುವ ಕೃಷಿ ಕೈಹಿಡಿಯುವ ಜವಾಬ್ದಾರಿ ಮಕ್ಕಳಲ್ಲಿ ಬೆಳೆಸುವುದು ಉದ್ದೇಶ.
– ಇಸ್ಮಾಯಿಲ್, ಅಧ್ಯಕ್ಷರು, ಎಸ್.ಡಿ.ಎಂ.ಸಿ.
ಊರಿನವರಿಂದ ಕೊಡುಗೆ
ಸುಮಾರು 15 ಸಾವಿರ ರೂ.ವರೆಗೆ ತಗಲುವ ಖರ್ಚಿನ ಕೆಲಸವನ್ನು ಊರವರು ಉಚಿತವಾಗಿ ಮಾಡಿದ್ದಾರೆ. ಸುಮಾರು 2 ಕ್ವಿಂ.ಅಕ್ಕಿ ನಿರೀಕ್ಷಿಸಲಾಗಿದೆ. ಮಕ್ಕಳು ತಾವೇ ಕೈ ಕೆಸರಾಗಿಸಿ ಬೆಳೆಸಿದ ಪೈರಿನಿಂದ ಬಂದ ಅಕ್ಕಿ ಅನ್ನವಾಗಿಸಿ ಸ್ವಾಧಿಸುವ ತವಕದಲ್ಲಿದ್ದಾರೆ. ಶಿಕ್ಷರ ಅಭಿಪ್ರಾಯದಂತೆ ಸುಮಾರು ಎರಡು ತಿಂಗಳು ಬಿಸಿಯೂಟಕ್ಕೆ ಪ್ರಯೋಜನ ಬರಲಿದೆ. ಹಿಂದಿನ ಸಂಪ್ರದಾಯದಂತೆ ಹೊಸ ಅಕ್ಕಿ ಊಟ ಮಾಡುವ ಅಂಬೋಣ ವ್ಯಕ್ತಪಡಿಸಿದ್ದಾರೆ.
•ಚೈತ್ರೇಶ್ ಇಳಂತಿಲ