Advertisement

ಸಾಂಪ್ರದಾಯಿಕ ಕೃಷಿಗೆ ತಂತ್ರಜ್ಞಾನದ ಅಳವಡಿಸಿಕೊಳ್ಳಿ

02:40 PM Jun 23, 2019 | Team Udayavani |

ಕನಕಪುರ: ರೈತರು ತಮ್ಮ ಸಾಂಪ್ರದಾಯಿಕ ಕೃಷಿಗೆ ತಂತ್ರಜ್ಞಾನದ ಅಳವಡಿಸಿಕೊಂಡು ಕೃಷಿಯಲ್ಲಿ ಯಶಸ್ಸು ಕಾಣಬೇಕು ಎಂದು ತಾಲೂಕು ಪಂಚಾಯ್ತಿ ಅಧ್ಯಕ್ಷ ಧನಂಜಯ ಹೇಳಿದರು.

Advertisement

ತಾಲೂಕಿನ ಕಸಬಾ ಹೋಬಳಿಯ ಚಿಕ್ಕಮುದುವಾಡಿ ಗ್ರಾಮದಲ್ಲಿ ಕೃಷಿ ಇಲಾಖೆಯಿಂದ ಸಮಗ್ರ ಕೃಷಿ ಅಭಿಯಾನ ಕಾರ್ಯಕ್ರಮದ ಅಂಗವಾಗಿ ನಡೆದ ರೈತ ಸಂವಾದ ಮತ್ತು ಕೃಷಿ ವಸ್ತು ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರೈತರ ಸಬಲೀಕರಣಕ್ಕಾಗಿ ಈವರೆಗಿನ ಅನೇಕ ಸರ್ಕಾರಗಳು ಕೃಷಿ ವಿಜ್ಞಾನಿಗಳಿಂದ ಅನೇಕ ತಂತ್ರಜ್ಞಾನದ ಅವಿಷ್ಕಾರ ಮಾಡಿದೆ. ಅದನ್ನು ರೈತರು ಬಳಸಿಕೊಂಡು ಲಾಭದಾಯಕ ಬೇಸಾಯ ಪದ್ಧತಿಗಳನ್ನು ಅಳವಡಿಸಿಕೊಂಡು ಸದೃಢರಾಗಬೇಕು. ದೇಶದ ಆಹಾರ ಸಮಸ್ಯೆಯನ್ನು ನೀಗಬೇಕು. ಈ ನಿಟ್ಟಿನಲ್ಲಿ ಅನ್ನದಾತ ತನ್ನ ಕಾಯಕ ಮುಂದುವರಿಸಬೇಕು ಎಂದರು.

ಹೈನುಗಾರಿಕೆ ರೈತರ ಬದುಕಿನ ಒಡನಾಡಿ: ಪಶುಸಂಗೋಪನೆ ಇಲಾಖೆಯ ಡಾ.ನಿಂಗರಾಜು ಮಾತನಾಡಿ, ಇಂದು ಹೈನುಗಾರಿಕೆ ಜಿಲ್ಲೆಯ ಅನೇಕ ರೈತರ ಬದುಕಿನ ಒಡನಾಡಿಯಾಗಿದ್ದು, ಅದರಿಂದ ನಿರ್ದಿಷ್ಟ ಲಾಭದತ್ತ ಮುನ್ನಡೆಯುತ್ತಿದ್ದಾರೆ. ಇದಕ್ಕೆ ಸರ್ಕಾರವೂ ಸಹ ಸಹಾಯಧನದ ರೂಪದಲ್ಲಿ ಹೈನುಗಾರಿಕೆ ಮಾಡುವ ರೈತರಿಗೆ ಅನೇಕ ಸೌಲಭ್ಯಗಳನ್ನು ನೀಡುತ್ತಿದೆ. ಜಿಲ್ಲೆ ಮತ್ತು ತಾಲೂಕು ಹೈನುಗಾರಿಕೆಯಲ್ಲಿ ಮಹತ್ವ ಹೆಜ್ಜೆಗಳನ್ನು ಇಟ್ಟಿದ್ದು, ಅದನ್ನು ಮತ್ತಷ್ಟು ವೃದ್ಧಿಸಿಕೊಂಡು ಆರ್ಥಿಕವಾಗಿ ಮುನ್ನಡೆಯಬೇಕು ಎಂದರು.

ಉತ್ತಮ ಕೃಷಿಕರಾಗಿ: ಮಾಗಡಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಪ್ರೀತು ಮಾತನಾಡಿ, ರೈತರು ಆರೋಗ್ಯವಾಗಿದ್ದರೆ ಅವರು ಮಾಡುವ ಕೃಷಿ ಆರೋಗ್ಯಕರವಾಗಿರುತ್ತದೆ. ಮಣ್ಣಿನಲ್ಲಿ ಸಮಗ್ರ ಪೋಷಕಾಂಶದ ನಿರ್ವಹಣೆ ಅಗತ್ಯವಾಗಿರ ಬೇಕು. ಅದಕ್ಕಾಗಿ ರೈತರು ಪ್ರಥಮವಾಗಿ ಮಣ್ಣು ಪರೀಕ್ಷೆ ಮಾಡಿಸಿ, ನಂತರ ಮಣ್ಣಿಲ್ಲಿ ಇರುವ ಪೋಷಕಾಂಶದ ಕೊರತೆಯನ್ನು ನೀಗಿ, ನಂತರ ಅವರ ಜಮೀನಿನಲ್ಲಿ ಯಾವ ಬೆಳೆ ಉತ್ತಮ ಎಂದು ದೃಢಪಡಿಸಿಕೊಂಡು ಅಂತಹ ಬೆಳೆಯನ್ನು ಬೆಳೆಯುವ ಮೂಲಕ ಉತ್ತಮ ಕೃಷಿಕರಾಗಬೇಕು ಎಂದರು. ರಾಮನಗರ ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕ ಅಶೋಕ್‌, ರೇಷ್ಮೆ ಇಲಾಖೆಯ ವಿಸ್ತರಣಾಧಿಕಾರಿ ಸುರೇಶ್‌, ತೋಟಗಾರಿಕೆ ಇಲಾಖೆಯ ಸುರೇಶ್‌ಕುಮಾರ್‌, ತಿಗಳರಹೊಸಹಳ್ಳಿ ಗ್ರಾಮದ ಸಾವಯವ ಕೃಷಿಕರಾದ ಲಕ್ಷ್ಮೀನಾರಾಯಣ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next