Advertisement

ಪ್ರಕೃತಿಯ ಮಡಿಲಲ್ಲಿ ಸಾಕಾರಗೊಂಡ ಸಮ್ಮೇಳನ

12:41 AM Mar 02, 2020 | Sriram |

ಮಹಾನಗರ: ಆಧುನಿಕ ಕಾಲಘಟ್ಟದಲ್ಲಿ ಪರಿಸರದ ಮೇಲೆ ನಡೆಯುತ್ತಿರುವ ದಾಳಿಗೆ ಮಟ್ಟ ಹಾಕುವ ಹಾಗೂ ಪರಿಸರ ಪೂರಕ ಯೋಜನೆ-ಯೋಚನೆಗಳು ಎಲ್ಲೆಡೆ ಸಾಕಾರವಾಗಲಿ ಎಂಬ ಸದುದ್ದೇಶದಿಂದ ನಗರದ ತಣ್ಣೀರುಬಾವಿ ಟ್ರೀ ಪಾರ್ಕ್‌ನ ಪ್ರಕೃತಿಯ ಮಡಿಲಲ್ಲಿ ರವಿವಾರ ನಡೆದ ಎರಡನೇ ವರ್ಷದ ರಾಜ್ಯಮಟ್ಟದ ಪರಿಸರ ಸಮ್ಮೇಳನವು ಹತ್ತಾರು ವಿಶೇಷತೆಗಳೊಂದಿಗೆ ಗಮನಸೆಳೆಯಿತು.

Advertisement

ರಾಷ್ಟ್ರೀಯ ಪರಿಸರ ಸಂರಕ್ಷಣೆ ಒಕ್ಕೂಟ (ಎನ್‌ಇ ಸಿಎಫ್‌) ವತಿಯಿಂದ ಪರಿಸರಾ ಸಕ್ತರು ಸೇರಿಕೊಂಡು ಆಯೋಜಿಸಿದ್ದ ಪರಿಸರ ಸಮ್ಮೇಳನದಲ್ಲಿ ದ.ಕ.-ಉಡುಪಿ ಸಹಿತ ಶಿವಮೊಗ್ಗ, ಹಾಸನ,ತುಮಕೂರು,ಬೆಂಗಳೂರು,ಉತ್ತರ ಕನ್ನಡ ವಿವಿಧ ಜಿಲ್ಲೆಗ ಳಿಂದ ಪರಿ ಸರಾಸಕ್ತರು ಆಗಮಿಸಿದ್ದರು.

ಬೆಳಗ್ಗೆ 8ರಿಂದ ಆರಂಭಗೊಂಡ ಸಮ್ಮೇಳನ ಸಂಜೆಯವರೆಗೂ ವಿನೂತನ ಪರಿಕಲ್ಪನೆಯೊಂದಿಗೆ ಸಾಕಾರಗೊಂಡಿತು. ಸಮ್ಮೇಳನ ವೇದಿಕೆಯಿಂದ ಮಾವಿನ ಗಿಡ ವನ್ನು ಪಲ್ಲಕ್ಕಿಯಲ್ಲಿ ಹೊತ್ತು ಸಾಗಿ ಟ್ರೀಪಾರ್ಕ್‌ನ ಒಂದು ಭಾಗದಲ್ಲಿ ನೆಡುವ ಮೂಲಕ ಸಮ್ಮೇಳನಕ್ಕೆ ಚಾಲನೆ ನೀಡಲಾಯಿತು.

ಸಮ್ಮೇಳನವೆಂಬ ನಿಗದಿತ ಚೌಕಟ್ಟನ್ನು ಬದಿಗಿರಿಸಿ ಪ್ರಕೃತಿಯ ಮಡಿಲಲ್ಲಿ ಪ್ರಕೃ ತಿಯ ವಿಚಾರವನ್ನು ಸುಲಭ ಹಾಗೂ ಸಂವಹನ ಶೈಲಿಯಲ್ಲಿ ನಡೆಸಬೇಕು ಎಂಬ ಕಾರಣ ದಿಂದ ವಿಭಿನ್ನವಾಗಿ ಆಚರಿಸಿದ್ದು ವಿಶೇಷ. ಬೆಳೆದುನಿಂತ ಮರಗಿಡಗಳ ನೆರಳೇ ಇಲ್ಲಿ ಚಪ್ಪರವಾಗಿತ್ತು. ಹೀಗಾಗಿ ಪ್ರತ್ಯೇಕ ಶ್ಯಾಮಿಯಾನ ಇಲ್ಲಿ ಇರಲಿಲ್ಲ. ತೆರೆದ ವೇದಿಕೆಯಲ್ಲಿ ನಡೆದ ನ್ಯಾಯಾಲಯ ಪ್ರಕ್ರಿಯೆ, ಸಾಂಸ್ಕೃತಿಕ ಕಾರ್ಯಕ್ರಮ ವಿನೂತನವಾಗಿತ್ತು.
ಅಲೋಶಿಯಸ್‌ ಕಾಲೇಜು, ಆಳ್ವಾಸ್‌ ಕಾಲೇಜು, ಹಳೆಯಂಗಡಿ ನಾರಾಯಣ ಸನಿಲ್‌ ಕಾಲೇಜು, ಶ್ರೀನಿವಾಸ ಕಾಲೇಜು, ಎನ್‌ಎಸ್‌ಎಸ್‌, ಎನ್‌ಸಿಸಿ ವಿದ್ಯಾರ್ಥಿಗಳು ಸಹಿತ ನಗರದ ವಿವಿಧ ಕಾಲೇಜುಗಳ ವಿದ್ಯಾ ರ್ಥಿ ಗಳು ಸ್ವಯಂಸೇವಕರಾಗಿ ದಿನಪೂರ್ತಿ ಕಾರ್ಯನಡೆಸಿದರು. ಸ್ವತ್ಛತೆ, ಕುಡಿಯುವ ನೀರು ಪೂರೈಕೆ, ಆಹಾರ ಪೂರೈಕೆ ಸಹಿತ ವಿವಿಧ ಕಾರ್ಯದಲ್ಲಿ ತೊಡಗಿಸಿಕೊಂಡರು. ಜತೆಗೆ, ಹಸಿರು ಟೀಶರ್ಟ್‌ ಉಟ್ಟ ಎನ್‌ಇಸಿಎಫ್‌ ಕಾರ್ಯಕರ್ತರು-ಸದಸ್ಯರು ಗಮನಸೆಳೆದರು.

ಬಿಇಎಂ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ವೈವಿಧ್ಯದಲ್ಲಿ ಗ್ರಾಮೀಣ ಆಟಗಳ ಕುರಿತು ನೃತ್ಯ ಪ್ರದರ್ಶಿಸಿದರು. ಸಿದ್ಧಿ ಸಮು ದಾಯ ದವರಿಂದ ಡಾಮಾಮಿ ನೃತ್ಯ, ಹಾಲಕ್ಕಿ ಜನರಿಂದ ಕುಗುಡಿ ನೃತ್ಯ, ಚೇತನಾ ಕಪಪ್ಪ ತಂಡದಿಂದ ಮಕ್ಕಳ ಕಾಡೇ ಕೂಗು ನಾಟಕ ಪ್ರದರ್ಶನಗೊಂಡಿತು. ಸಮ್ಮೇಳಕ್ಕೆ ಮೊದಲು ಹಾಲಕ್ಕಿ ಸಮುದಾಯದವರಿಂದ ಪದ್ಮಶ್ರೀ ಸುಕ್ರೀ ಬೊಮ್ಮಗೌಡ ಅವರ ನೇತೃತ್ವದಲ್ಲಿ ನೃತ್ಯ ಪ್ರದರ್ಶನಗೊಂಡಿತು.

Advertisement

ಗಮನಸೆಳೆದ ಕಲಾಕೃತಿಗಳು
ಸಮ್ಮೇಳನದಲ್ಲಿ ಚಿತ್ರಕಲಾವಿದರ ಕೈಚಳಕ ಗಮನ ಸೆಳೆಯಿತು. ಚಾವಡಿ ಕಲಾವಿದರು ತಂಡ ಸ್ಥಳದಲ್ಲೇ ಚಿತ್ರರಚಿಸಿ, ಪ್ರದರ್ಶನ ನೀಡಿದರು. ಚಿತ್ರ ಕಲಾಶಿಕ್ಷಕರಾದ ಜಾನ್‌ಚಂದ್ರನ್‌, ಪೂರ್ಣೇಶ್‌, ತಾರಾನಾಥ್‌ ಕೈರಂಗಳ ಅವರು ಚಿತ್ರಕಲಾ ತಂಡದಲ್ಲಿದ್ದರು. ಟ್ರೀ ಪಾರ್ಕ್‌ನ ಪ್ರಕೃತಿಯ ಸೊಬಗಿನಲ್ಲಿ ನೆರಳಾಶ್ರಯ ಪಡೆದು ಕಿನಾರೆಯಲ್ಲಿ ಪರಿಸರ ವೈವಿಧ್ಯ ಮತ್ತು ಪರಿಸರದ ಮೇಲಿನ ದೌರ್ಜನ್ಯಗಳನ್ನು ಬಿಂಬಿಸುವ ಚಿತ್ರಗಳನ್ನು ಬರೆದು ಮೆಚ್ಚುಗೆ ಗಳಿಸಿದರು.

ಸಮ್ಮೇಳನವೇ
ಇಲ್ಲಿ “ಪರಿಸರ’!
ಸ್ವರೂಪ್‌ ಅಧ್ಯಯನ ಕೇಂದ್ರದ ಗೋಪಾಡ್ಕರ್‌ ನೇತೃತ್ವದಲ್ಲಿ ವಿದ್ಯಾರ್ಥಿಗಳಿಂದ ಪರಿಸರ ಪೂರಕ ವಿಭಿನ್ನ ಸಂದೇಶ ಸಾರುವ ಚಿತ್ರಕಲಾ ಪ್ರದರ್ಶನ, ಉಮಾ ಟೈಲ್‌ ಕಂಪೆನಿಯ ಮಣ್ಣಿನ ಹೂದಾನಿಗಳು, ನೇತು ಹಾಕುವ ಹೂಜಿಗಳು, ಆರ್ಕಿಡ್‌ ಮಡಿಕೆಗಳು, ಪ್ಲಾಸ್ಟಿಕ್‌ ಬಳಕೆ ಯಿಂದ ಮೀನಿಗಾಗುವ ತೊಂದರೆ ಬಿಂಬಿಸುವ ಚಿತ್ರಾಕೃತಿ, ಹಕ್ಕಿಗಳ ರೋದನ, ಎತ್ತಿನಹೊಳೆ ಯೋಜನೆ ಅಣಕಿಸುವ ಚಿತ್ರಣ ಗಳು ಸಮ್ಮೇಳನದಲ್ಲಿ ಎದ್ದು ಕಾಣುತ್ತಿತ್ತು. ಪದ್ಮಶ್ರೀ ಪುರಸ್ಕೃತರ ಭಾವ ಚಿತ್ರಗಳನ್ನು ಹಾಳೆತಟ್ಟೆಯಲ್ಲಿ ತೂಗಿ ಹಾಕಲಾಗಿತ್ತು. ನರ್ಸರಿ ಗಿಡಗಳ ತಳಿಗಳು, ಮೇಘಾ ಮೆಂಡನ್‌ ಅವರು ರಚಿ ಸಿದ “ಬಾಟಲಿ ಆರ್ಟ್‌’ ಗಮನಸೆಳೆಯಿತು.

Advertisement

Udayavani is now on Telegram. Click here to join our channel and stay updated with the latest news.

Next