Advertisement
ಈ ಬಗ್ಗೆ ಮಾಧ್ಯಮವೊಂದರ ಜತೆ ಅನಿಸಿಕೆ ತೋಡಿಕೊಂಡಿರುವ ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ, “ನನಗೆ ಇನ್ಫೋಸಿಸ್ ಆಡಳಿತ ಮಂಡಳಿಯ ನಿರ್ಧಾರಗಳನ್ನು ಕೇಳಿ ಸಂಕಟವಾಗುತ್ತಿದೆ. ಇದು ಕೇವಲ ಸಿಕ್ಕಾ ವಿಚಾರ ಮಾತ್ರವಲ್ಲ. ಆಡಳಿತ ಮಂಡಳಿಯ ಗುಣಮಟ್ಟದ ವಿಚಾರವೂ ಹೌದು. ಮಂಡಳಿ ಈ ವಿಚಾರದಲ್ಲಿ ತಪ್ಪು ಹೆಜ್ಜೆ ಇಟ್ಟಿದೆ. ಇವೆಲ್ಲ ಬೆಳವಣಿಗೆ ಕುರಿತು ನನಗೆ 1800 ಇಮೇಲ್‌ಗಳು ಬಂದಿವೆ’ ಎಂದು ಹೇಳಿದ್ದಾರೆ.
Related Articles
Advertisement
ಶೇಷಸಾಯಿ ರಾಜೀನಾಮೆಗೆ ಹೆಚ್ಚಿದ ಬಾಹ್ಯ ಒತ್ತಡಇನ್ಫೋಸಿಸ್ನ ಮಾಜಿ ಹಣಕಾಸು ಅಧಿಕಾರಿ ವಿ. ಬಾಲಕೃಷ್ಣನ್ ಸಂಸ್ಥೆಯಲ್ಲಿನ ಭಿನ್ನಮತಕ್ಕೆ ಧ್ವನಿ ಸೇರಿಸಿದ್ದು, ಕಾರ್ಯದರ್ಶಿ ಸ್ಥಾನಕ್ಕೆ ಶೇಷಸಾಯಿ ರಾಜೀನಾಮೆಗೆ ಆಗ್ರಹಿಸಿದ್ದಾರೆ. “ಮುಖ್ಯ ಷೇರುದಾರರು- ಆಡಳಿತ ಮಂಡಳಿ ನಡುವಿನ ಸಂಪರ್ಕ ಮುರಿದು ಬಿದ್ದಿದೆ. ಆಡಳಿತ ಮಂಡಳಿ ಪುನರ್‌ರಚನೆಗೊಳ್ಳಬೇಕು. ಒಳ್ಳೆಯ ಮಾರ್ಗದರ್ಶನ ಸಿಗುವಂತಾಗಬೇಕು’ ಎಂದಿದ್ದಾರೆ. ಇನ್ಫೋಸಿಸ್‌ನಿಂದ ಸಿಕ್ಕಾಗೆ ಸಿಗ್ತಿರೋದು 117 ಕೋಟಿ ರೂ.!
2016ರಲ್ಲಿ ಸಿಇಒ ವಿಶಾಲ್ ಸಿಕ್ಕಾ ಪಡೆಯುತ್ತಿದ್ದ ಸಂಭಾವನೆ 47.35 ಕೋಟಿ ರೂಪಾಯಿ. ವೇತನ ಹೆಚ್ಚಳದಿಂದ ವಿಶಾಲ್ ಸಿಕ್ಕಾ ಈಗ ವಾರ್ಷಿಕವಾಗಿ 73.56 ಕೋಟಿ ರೂ. ಪಡೆಯುತ್ತಿದ್ದಾರೆ. ಹೀಗೆ 26 ಕೋಟಿ ಏರಿಕೆ ಕಂಡಿರುವುದು ಮೂಲ ಸಂಭಾವನೆ ಹೆಚ್ಚಳ (6.68 ಕೋಟಿ ರೂ.), ಮಾರ್ಪಾಡಾದ ಮೊತ್ತದಿಂದ (20 ಕೋಟಿ ರೂ.) ಮಾತ್ರ. ಆದರೆ, ಸಿಕ್ಕಾ ಅವರು ಇನ್ಫೋಸಿಸ್‌ನಿಂದ ಪಡೆಯುತ್ತಿರುವ ಒಟ್ಟು ಮೊತ್ತ 73 ಕೋಟಿ ರೂಪಾಯಿಗೂ ಅಧಿಕ! ನಿರ್ಬಂಧಿತ ಸ್ಟಾಕ್ ಘಟಕದಿಂದ (ಆರ್‌ಎಸ್‌ಯು) ಅವರಿಗೆ 13.37 ಕೋಟಿ ರೂ., ಇತರೆ ಸ್ಟಾಕ್ ಘಟಕಗಳಿಂದ 33.34 ಕೋಟಿ ರೂ. ಆದಾಯವಿದೆ. ಹಾಗೆ ನೋಡಿದರೆ ಇವೆಲ್ಲ ಸೇರಿ 117 ಕೋಟಿ ರೂ. ಪ್ಯಾಕೇಜ್ ಅನ್ನು ಸಿಕ್ಕಾ ಪಡೆಯುತ್ತಿದ್ದಾರೆ! ಸಿಕ್ಕಾಗೆ “ಒಪನ್’ ಬೆಂಬಲ
ಇನ್ಫೋಸಿಸ್‌ನ ಮೂರನೇ ಅತಿದೊಡ್ಡ ಸಾಂಸ್ಥಿಕ ಹೂಡಿಕೆದಾರ ಒಪನ್‌ಹೀಮರ್ ಫಂಡ್ಸ್ ಈಗ ಸಿಇಒ ವಿಶಾಲ್ ಸಿಕ್ಕಾ ಪರ ಬ್ಯಾಟಿಂಗ್ ಮಾಡಿದೆ. “ಇನ್ಫೋಸಿಸ್‌ನಲ್ಲಿ ಬಹಳ ಕಾಲದಿಂದ ನಾವು ಹೂಡಿಕೆ ಮಾಡಿದ್ದೇವೆ. ನಮ್ಮೆಲ್ಲ ಬೆಂಬಲ ಡಾ. ವಿಶಾಲ್ ಸಿಕ್ಕಾ ಅವರ ವ್ಯವಸ್ಥಾಪಕ ತಂಡಕ್ಕಿದೆ. ಸಿಕ್ಕಾ ದೂರದೃಷ್ಟಿ ಇಟ್ಟುಕೊಂಡು ಕಾರ್ಯತಂತ್ರ ರೂಪಿಸುವವರು. ಈ ಕಿರು ಅವಧಿಯಲ್ಲೇ ಕಂಪನಿಯ ಅಭ್ಯುದಯಕ್ಕೆ ಅವರ ಕೊಡುಗೆ ಅಪಾರ’ ಎಂದು ಫಂಡ್ಸ್‌ನ ಪೋರ್ಟ್‌ಫೋಲಿಯೋ ಮ್ಯಾನೇಜರ್ ಜಸ್ಟೀನ್ ಲೆವರೆನ್l ಅವರು ಇನ್ಫೋಸಿಸ್‌ಗೆ ಬಹಿರಂಗ ಪತ್ರ ಬರೆದಿದ್ದಾರೆ. ಇನ್ಫೋಸಿಸ್‌ನಲ್ಲಿ ಒಪನ್‌ಹೀಮರ್ ಫಂಡ್ಸ್ ಶೇ.2.7ರಷ್ಟು ಹೂಡಿಕೆ ಮಾಡಿದೆ. ಇದರ ಮೌಲ್ಯ 6 ಸಾವಿರ ಕೋಟಿ ರೂಪಾಯಿ! ಮೂರ್ತಿ ಹೇಳಿಕೆ…
1.ಆಡಳಿತ ಮಂಡಳಿಯ ಈ ನೀತಿಯನ್ನು ಖಂಡಿಸಿ ಹಲವು ಹೂಡಿಕೆದಾರರು ನನಗೆ ಪತ್ರ ಬರೆದಿದ್ದಾರೆ. ಸಂಸ್ಥೆ ತೊರೆದ ಮತ್ತು ಹಾಲಿ ಸಹೋದ್ಯೋಗಿಗಳು ಇದರಿಂದ ಅಸಮಾಧಾನಗೊಂಡಿದ್ದಾರೆ. 2. 1995ರಲ್ಲಿ ನಾವು ದ್ವಿತೀಯ ದರ್ಜೆ ಮಾರುಕಟ್ಟೆಯಲ್ಲಿ ಹೂಡಿ, ನಷ್ಟ ಅನುಭವಿಸಿದ್ದೆವು. ಇದರ ತಪ್ಪನ್ನು ಅರಿತು ಎಜಿಎಂ ಮೂಲಕ ನಮ್ಮ ಷೇರುದಾರರ ಬಳಿ ಕ್ಷಮೆ ಕೋರಿದೆವು. ಇನ್ನೊಮ್ಮೆ ಇಂಥ ಪ್ರಮಾದ ಆಗುವುದಿಲ್ಲ ಎಂದಿದ್ದೆವು. ಅದು ಇನ್ಫೋಸಿಸ್‌ನ ಬದ್ಧತೆ. ಆ ಬದ್ಧತೆ ಮುಂದುವರಿಯಬೇಕು. 3. ಸಂಸ್ಥೆ ತೊರೆದವರಿಗೆ ಪರಿಹಾರ ನೀಡಲು ವಿಶೇಷ ಕಮಿಟಿಯೇ ಇದೆ. ಕಮಿಟಿ ಸದಸ್ಯರು ಮಂಡಳಿಯ ಎದುರು ಚರ್ಚಿಸಿದ ನಂತರವೇ ಪರಿಹಾರ ಧನ ನೀಡಲು ಮುಂದಾಗಬೇಕು. ಸಂಭಾವನೆ ಮತ್ತು ನಾಮನಿರ್ದೇಶಕ ಕಮಿಟಿಯೇ ಮತ್ತು ಆಡಳಿತ ಮಂಡಳಿ ಇವೆಲ್ಲ ಬೆಳವಣಿಗೆಗೆ ಹೊಣೆ. ಅವರಿಗೆ ಇದರ ಪ್ರಾಯಶ್ಚಿತ್ತವಾಗಬೇಕು. 4. ಈಗಷ್ಟೇ ಕೆಲಸಕ್ಕೆ ಸೇರಿದ ಇನ್ಫೋಸಿಸ್ ಉದ್ಯೋಗಿಗಿಂತ 2000 ಪಟ್ಟು ಸಿಇಒ ಸಂಭಾವನೆ ಪಡೆಯುತ್ತಿದ್ದಾರೆ. ಈ ಅಂತರವನ್ನೂ ಆಡಳಿತ ಮಂಡಳಿ ಗಮನಿಸುವುದು ಉತ್ತಮ.