Advertisement

ಬುರ್ಜ್‌ ಖಲೀಫಾದ ವೀಕ್ಷಣಾ ಜಗಲಿ ಮಾರಾಟ!

10:05 AM Dec 25, 2019 | Hari Prasad |

ದುಬಾೖ: ದುಬಾೖ ಎಮರ್‌ ಪ್ರಾಪರ್ಟೀಸ್‌ ತನ್ನ ವಿಶ್ವದಲ್ಲೇ ಅತಿ ಎತ್ತರ ಗಗನಚುಂಬಿ ಕಟ್ಟಡದ ವೀಕ್ಷಣಾ ಜಗಲಿಯನ್ನು 1 ಬಿಲಿಯನ್‌ ಡಾಲರ್‌ಗೆ (7,000 ಕೋಟಿ ರೂ.) ಮಾರಾಟ ಮಾಡಿದೆ ಎಂದು ಮೂಲಗಳು ತಿಳಿಸಿವೆ.

Advertisement

828 ಅಡಿ ಎತ್ತರದ ಬುರ್ಜ್‌ ಖಲೀಫಾ ವಿಶ್ವದ ಆಕರ್ಷಕ ಪ್ರವಾಸಿ ತಾಣವಾಗಿದೆ. 2018ರಲ್ಲಿ 15 ಕೋಟಿ ಮಂದಿ ಈ ವಿಶ್ವವಿಖ್ಯಾತ ಕಟ್ಟಡವನ್ನು ವೀಕ್ಷಿಸಿದ್ದರು. ಇದರ ತುತ್ತ ತುದಿಯಲ್ಲಿರುವ ವೀಕ್ಷಣಾ ಜಗಲಿಯಲ್ಲಿ ನಿಂತು ದುಬಾೖನ ಸೌಂದರ್ಯವನ್ನು ಸವಿಯಲು ಬರುವವರ ಸಂಖ್ಯೆ ಹೆಚ್ಚುತ್ತಲೇ ಇದೆ.

ಈ ವರ್ಷ ಟಿಕೆಟ್‌ ದರದಿಂದ ಸುಮಾರು ಸಾವಿರ ಕೋಟಿ ರೂ. ಸಂಗ್ರಹವಾಗಿದೆ. ಇದು ನ್ಯೂಯಾರ್ಕ್‌ನ ಎಂಪೈರ್‌ ಕಟ್ಟಡಕ್ಕಿಂತ ಎರಡು ಪಟ್ಟು, ಪ್ಯಾರಿಸ್‌ನ ಐಫೆಲ್‌ ಟವರ್‌ಗಿಂತ ಮೂರು ಪಟ್ಟು ಎತ್ತರ ಇದೆ. 300ಕ್ಕೂ ಅಧಿಕ ಬಹುಮಹಡಿ ಕಟ್ಟಡಗಳನ್ನು ಹೊಂದಿದೆ. ರಿಯಲ್‌ ಎಸ್ಟೇಟ್‌ ಕುಸಿತದಿಂದಾಗಿ ದುಬಾೖ ಎಮರ್‌ ಪ್ರಾಪರ್ಟೀಸ್‌ ಈಗ ಈ ವೀಕ್ಷಣಾ ಜಗಲಿಯನ್ನು ಮಾರಾಟ ಮಾಡಿದೆ ಎನ್ನಲಾಗಿದೆ. ನವೆಂಬರ್‌ನಲ್ಲೇ ಮಾರಾಟ ಪ್ರಕ್ರಿಯೆ ಶುರುವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next