Advertisement

ಕಾಲೇಜಿನ ಖಾಸಗಿ ಫೋಟೋಗಳನ್ನು ಹರಾಜಿಗಿಟ್ಟ ಎಲಾನ್‌ ಮಸ್ಕ್‌ ಮಾಜಿ ಗೆಳತಿ

04:34 PM Sep 13, 2022 | Team Udayavani |

ನ್ಯೂಯಾರ್ಕ್:‌ ಸಂಬಂಧಗಳು ಮುರಿದ ಮೇಲೆ ನೋವಾಗುತ್ತದೆ. ಅಂದು ತಾನು ಪ್ರೀತಿಸುತ್ತಿದ್ದ ವ್ಯಕ್ತಿ ಇಂದು ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿ ಎಂದಾದರೆ ಮನಸ್ಸಿಗೆ ಇನ್ನಷ್ಟು ಬೇಸರ ಕಾಡುತ್ತದೆ. ಆದರೆ ಇಲ್ಲೊಬ್ಬಳು ಸಂಬಂಧ ಮುರಿದು ಬಿದ್ದರೂ ಅದರಿಂದಲೇ ಹಣಗಳಿಸಲು ಹೋಗಿದ್ದಾಳೆ.

Advertisement

ಜಗತ್ತಿನ ಶ್ರೀಮಂತ ಉದ್ಯಮಿ, ಟೆಸ್ಲಾ ಸಿಇಒ ಎಲಾನ್‌ ಮಸ್ಕ್‌ ಒಂದಲ್ಲ ಒಂದು ವಿಷಯದಲ್ಲಿ ಟ್ರೆಂಡ್‌ ನಲ್ಲಿರುತ್ತಾರೆ. ಅವರ ಕಾಲೇಜಿನ ಮಾಜಿ ಗೆಳತಿಯೊಬ್ಬರು ಎಲಾನ್‌ ಮಸ್ಕ್‌ ಬಗ್ಗೆ ಹಾಕಿರುವ ಫೋಸ್ಟ್‌ ಈಗ ಸದ್ದು ಮಾಡುತ್ತಿದೆ.

ಜೆನ್ನಿಫರ್ ಗ್ವಿನ್ನೆ ಹಾಗೂ ಎಲಾನ್‌ ಮಸ್ಕ್‌ 1994 ರಲ್ಲಿ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದಲ್ಲಿ ಕಲಿಯುತ್ತಿದ್ದರು. ಇಬ್ಬರೂ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು. ಆ ಸಮಯದಲ್ಲಿ ಎಲಾನ್‌ ಈಗಿನಷ್ಟು ಶ್ರೀಮಂತರಲ್ಲ. ಜೆನ್ನಿಫರ್ – ಎಲಾನ್‌ ಎಲ್ಲಾ ಜೋಡಿಗಳಂತೆ ಸುತ್ತಾಟ, ಮುದ್ದಾಟ, ಮೋಜು – ಮಸ್ತಿಯನ್ನು ನಡೆಸುತ್ತಿದ್ದರು. ಆ ಎಲ್ಲಾ ಕ್ಷಣಗಳನ್ನು ಜೆನ್ನಿಫರ್ ಫೋಟೋ ರೂಪದಲ್ಲಿ ಸಂಗ್ರಹಿಸಿಟ್ಟಿದ್ದರು.

ಎಲಾನ್‌ ನೊಂದಿಗೆ ತೆಗೆದುಕೊಂಡು ಫೋಟೋ, ಎಲಾನ್‌ ಕೊಟ್ಟ ಬರ್ತ್‌ ಡೇ ಗಿಫ್ಟ್‌ ಕಾರ್ಡ್‌, ನೆಕ್ಲೆಸ್‌ ನ್ನು ಮಾಜಿ ಗೆಳತಿಯಾದ ಜೆನ್ನಿಫರ್ ಇಂದು ಹರಾಜಿಗಿಟ್ಟಿದ್ದಾರೆ.!

ಇಂದು ಎಲಾನ್‌ ವಿಶ್ವದ ಶ್ರೀಮಂತ ಉದ್ಯಮಿಗಳಲ್ಲಿ ಒಬ್ಬರು. ಜೆನ್ನಿಫರ್ ಗ್ವಿನ್ನೆ ಅವರ ಜೊತೆಯಿಲ್ಲ. ಅವರು ಸ್ವತಂತ್ರವಾಗಿ ಇದ್ದಾರೆ. ಬೂಸ್ಟನ್‌ ಮೂಲದ ಆರ್.ಆರ್.‌ ಆಕ್ಷಾನ್‌ ಎಂಬ ವೈಬ್‌ ಸೈಟ್‌ ನಲ್ಲಿ ಜೆನ್ನಿಫರ್ ಗ್ವಿನ್ನೆ ಎಲಾನ್‌ ರೊಂದಿಗೆ ಇದ್ದ 18 ಫೋಟೋಗಳು, ಅವರು ಕೈ ಬರಹದಲ್ಲಿ ಬರೆದು ಕೊಟ್ಟ ಬರ್ತ್‌ ಡೇ ಗಿಫ್ಟ್‌ ಕಾರ್ಡ್‌,ಕಾಲೇಜಿನ ದಿನದಲ್ಲಿ ಎಲಾನ್‌ ಸ್ನೇಹಿತರೊಂದಿಗೆ ಇದ್ದ ಫೋಟೋ, ನೆಕ್ಲೆಸ್‌ ಇದರೊಂದಿಗೆ ಜೆನ್ನಿಫರ್ ಗ್ವಿನ್ನೆ – ಎಲಾನ್‌ ಅವರ ಕೆಲ ಖಾಸಗಿ ಫೋಟೋಗಳನ್ನು ಕೂಡ ಹರಾಜಿಗಿಟ್ಟಿದ್ದಾರೆ.

Advertisement

ಇದರಲ್ಲಿ ಎಲಾನ್‌ ಕೊಟ್ಟ ಬರ್ತ್‌ ಡೇ ಕಾರ್ಡ್‌ 7 ಲಕ್ಷಕ್ಕೂ ಅಧಿಕ ಬೆಲೆಗೆ ಮಾರಾಟವಾಗಿದೆ. ಜೆನ್ನಿಫರ್ ಗ್ವಿನ್ನೆ ಈ ಫೋಟೋಗಳನ್ನು ಹರಾಜಿಗೆ ಇಟ್ಟ ಕಾರಣ, ಅವರ ಮಲ ಮಗ (Step Son) ಅವರ ಕಲಿಕೆಗೆ ಹಣವನ್ನು ಹೊಂದಿಕೊಳ್ಳುವುದಕ್ಕಾಗಿ ಎಂದು ವರದಿ ತಿಳಿಸಿದೆ. ಆರ್.ಆರ್.‌ ಆಕ್ಷಾನ್ ಸೈಟ್‌ ಈ ಹಿಂದೆಯೂ ಶ್ರೀಮಂತ ಉದ್ಯಮಿಗಳ ವಸ್ತುಗಳನ್ನು,ಫೋಟೋಗಳನ್ನು ಹರಾಜಿಗಿಟ್ಟಿದೆ.

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next