Advertisement
ಇನ್ನೊಂದೆಡೆ, ನೋಟ್ ಪ್ಯಾಡ್ ಸ್ಕ್ರೀನ್‌ಶಾಟ್‌ಗಳ ಅಸಂಬದ್ಧತೆಯನ್ನು ಕೊನೆಗೊಳಿಸಲಾಗುವುದು ಎಂದು ಟ್ವೀಟ್ ಮೂಲಕ ಮಸ್ಕ್ ತಿಳಿಸಿದ್ದಾರೆ.
ಟ್ವಿಟರ್ ಕಂಪನಿ ತನ್ನ ಶೇ.50ರಷ್ಟು ಉದ್ಯೋಗಿಗಳನ್ನು ವಜಾಗೊಳಿಸಿದೆ. ಇದರಿಂದ ಅಮೆರಿಕದಲ್ಲಿ ಎಚ್-1ಬಿ ವೀಸಾ ಹೊಂದಿರುವ ಟ್ವಿಟರ್‌ನ ವಜಾಗೊಂಡ ಉದ್ಯೋಗಿಗಳಿಗೆ ಸಂಕಷ್ಟ ಎದುರಾಗಿದೆ. ಅಮೆರಿಕದ ಕಾನೂನಿನ ಪ್ರಕಾರ, ಅವರಿಗೆ 60 ದಿನಗಳ ಗಡುವು ಇದೆ. ಇಷ್ಟರಲ್ಲಿ ಅವರು ಹೊಸ ಉದ್ಯೋಗ ಪಡೆಯಬೇಕಾಗುತ್ತದೆ. ತಪ್ಪಿದ್ದಲ್ಲಿ ಅವರ ಎಚ್-1ಬಿ ವೀಸಾ ರದ್ದಾಗಲಿದೆ. ನಿಯಮ ಪಾಲನೆ ಅಗತ್ಯ:
ಟ್ವಿಟರ್ ಖಾತೆಗಳಿಗೆ ಬ್ಲೂಟಿಕ್ ಹೊಂದುವುದಕ್ಕೆ ಮೊದಲು ನಿಮ್ಮ ಖಾತೆ ದೃಢಪಡಿಸಲು ಪಾಸ್‌ಪೋರ್ಟ್, ಆಧಾರ್ ಸೇರಿದಂತೆ ಯಾವುದಾದರೂ ಒಂದು ಪೋಟೋ ಇರುವ ಗುರುತಿನ ಚೀಟಿ ಸಲ್ಲಿಸಬೇಕಾಗುತ್ತದೆ. ಆಗ ನೀವು ಸ್ಪ್ಯಾಮ್ ಅಥವಾ ಸ್ಕ್ಯಾಮ್‌ನಲ್ಲಿ ಒಳಗೊಂಡಿಲ್ಲ ಎಂಬುದನ್ನು ಪರಿಶೀಲಿಸಲಾಗುತ್ತದೆ. ಜತೆಗೆ ಆ ಖಾತೆ ನಿಮ್ಮದೇ ಎಂಬುದನ್ನು ದೃಢಪಡಿಸಬೇಕುತ್ತದೆ.
Related Articles
ದೃಢಪಡಿಸಿದ ಖಾತೆಗಳಿಗೆ ಬ್ಲೂಟಿಕ್ ಹೊಂದುವ ಸೌಲಭ್ಯ ಭಾರತದಲ್ಲಿ ನವೆಂಬರ್ ಅಂತ್ಯದಿಂದ ದೊರೆಯಲಿದೆ ಎಂದು ಮಸ್ಕ್ ಖಚಿತಪಡಿಸಿದ್ದಾರೆ. ಭಾರತದಲ್ಲಿ ಈ ಸೌಲಭ್ಯಕ್ಕೆ ತಿಂಗಳಿಗೆ 200 ರೂ. ಪಾವತಿಸಬೇಕಾಗಬಹುದು. ಜತೆಗೆ ವಾರ್ಷಿಕ ಶುಲ್ಕದ ಆಯ್ಕೆ ಕೂಡ ಇರಲಿದೆ ಎನ್ನಲಾಗಿದೆ.
Advertisement