Advertisement
“ನಿಮ್ಮ ಸಂಸ್ಥೆಯ ವಕೀಲರು ನನ್ನ ಆರ್ಥಿಕ ವ್ಯವಹಾರಗಳ ಬಗ್ಗೆ ತಲೆ ಹಾಕಿ, ಸಮಸ್ಯೆ ಉಂಟು ಮಾಡಲು ಯತ್ನಿಸುತ್ತಿದ್ದಾರೆ. ಇದು ಈಗಲೇ ನಿಲ್ಲಬೇಕು’ ಎಂದು ಮಸ್ಕ್ ಅವರು ಪರಾಗ್ ಮತ್ತು ಟ್ವಿಟರ್‌ನ ಸಿಎಫ್ಒ ನೆಡ್ ಸೆಗಲ್ ಅವರಿಗೆ ಜೂ.28ರಂದೇ ಎಚ್ಚರಿಕೆಯ ಸಂದೇಶ ಕಳುಹಿಸಿದ್ದಾರೆ. ಈ ವಿಚಾರವಾಗಿ ಟ್ವಿಟರ್ ದೂರನ್ನು ದಾಖಲಿಸಿದೆ ಕೂಡ.
ಎಲಾನ್ ಮಸ್ಕ್ ತಂದೆ ಎರೋಲ್ ಮಸ್ಕ್ ತಾವು ತಮ್ಮ ಮಲಮಗಳಾದ ಜಾನಾ ಬೆಝುಯಿಡೆನ್‌ಹೌಟ್ ಜತೆಗೆ ಎರಡನೇ ಮಗುವಿಗೆ ತಂದೆಯಾಗಿರುವ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ತಮಗೆ ಮತ್ತು ಅವರ ಮಲಮಗಳು ಜಾನಾ ಬೆಝುಯಿಡೆನ್‌ಹೌಟ್‌ಗೆ ಈಗಾಗಲೇ 5 ವರ್ಷದ ಮಗನಿದ್ದಾನೆ. 2019ರಲ್ಲಿ ಮತ್ತೂಂದು ಮಗು ಹುಟ್ಟಿದ್ದಾಗಿ ಎರೋಲ್ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿರುವುದು ಈಗ ವೈರಲ್ ಆಗಿದೆ. 1979ರಲ್ಲಿ ಜಾನಾ ಅವರ ತಾಯಿ ಹೈಡೆ ಅವರನ್ನು ವಿವಾಹವಾಗಿದ್ದ ಎರೋಲ್‌ಗೆ, ಹೈಡೆ ಜೊತೆಗೂ ಇಬ್ಬರು ಮಕ್ಕಳಿದ್ದಾರೆ.