ವಾಷಿಂಗ್ಟನ್: ಟ್ವಿಟರ್ ಅನ್ನು ಖರೀದಿಸಿರುವ ಉದ್ಯಮಿ ಎಲಾನ್ ಮಸ್ಕ್ ಅವರು ಸ್ಮಾರ್ಟ್‌ಫೋನ್‌ಗಳನ್ನು ಉತ್ಪಾದಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡುವ ಯೋಚನೆಯಲ್ಲಿ ಇದ್ದಾರಂತೆ.
ಆ್ಯಪಲ್ ಮತ್ತು ಆ್ಯಂಡ್ರಾಯ್ಡ ಡಿವೈಸ್‌ಗಳಿಂದ ಟ್ವಿಟರ್ ಹೊರಹಾಕಲ್ಪಟ್ಟರೆ ಇಂಥ ಒಂದು ಹೊಸ ಸಾಹಸಕ್ಕೆ ಇಳಿಯಲಿದ್ದಾರೆ.
ಒಂದು ವೇಳೆ ಆ್ಯಪಲ್ ಮತ್ತು ಆ್ಯಂಡ್ರಾಯ್ಡ ಡಿವೈಸ್‌ಗಳಲ್ಲಿ ಬಳಕೆಗೆ ತಡೆಯೊಡ್ಡುವಂಥ ಪರಿಸ್ಥಿತಿ ನಿರ್ಮಾಣಗೊಂಡರೆ ಬದಲಿ ವ್ಯವಸ್ಥೆ ಏನಿದೆ ಎಂದು ಬಳಕೆದಾರರೊಬ್ಬರು ಪ್ರಶ್ನಿಸಿದ್ದರು.
ಅದಕ್ಕೆ ಉತ್ತರವಾಗಿ ಎಲಾನ್ ಮಸ್ಕ್ ಅವರು ಟ್ವಿಟರ್ ಬಳಕೆ ಮಾಡಲು ಅವಕಾಶ ಇರುವ ಸ್ಮಾರ್ಟ್‌ಫೋನ್‌ಗಳನ್ನು ಉತ್ಪಾದಿಸಿ, ಮಾರುಕಟ್ಟೆಗೆ ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿದ್ದಾರೆ.