Advertisement

ಸಿಡ್ನಿ ಸಿಕ್ಸರ್ ನಾಯಕಿಯಾಗಿ ಮುಂದುವರಿದ ಎಲ್ಲಿಸ್‌ ಪೆರ್ರಿ

11:08 PM Aug 16, 2022 | Team Udayavani |

ಸಿಡ್ನಿ: ಆಸ್ಟ್ರೇಲಿಯದ ಆಲ್‌ರೌಂಡರ್‌ ಎಲ್ಲಿಸ್‌ ಪೆರ್ರಿ ವನಿತಾ ಬಿಗ್‌ಬಾಶ್‌ ಕ್ರಿಕೆಟ್‌ ಲೀಗ್‌ನಲ್ಲಿ ಇನ್ನೂ ಒಂದು ಋತುವಿಗೆ ಸಿಡ್ನಿ ಸಿಕ್ಸರ್ ತಂಡದಲ್ಲಿ ಮುಂದುವರಿಯಲಿದ್ದಾರೆ.

Advertisement

ಜತೆಗೆ ತಂಡದ ನಾಯಕತ್ವವನ್ನೂ ವಹಿಸಲಿದ್ದಾರೆ.ಹಿಂದಿನ 3 ವರ್ಷಗಳ ಬಿಗ್‌ಬಾಶ್‌ ಲೀಗ್‌ನಲ್ಲಿ ಸಿಡ್ನಿ ಸಿಕ್ಸರ್ ತಂಡದ ಸಾಧನೆಯೇನೂ ಗಮನಾರ್ಹ ಮಟ್ಟದಲ್ಲಿಲ್ಲ.

ಕಳೆದ ಸಲ ಅಂತಿಮ ಸ್ಥಾನಕ್ಕೆ ಕುಸಿದಿತ್ತು. ಇದಕ್ಕೂ ಹಿಂದಿನ ಎರಡು ಆವೃತ್ತಿಗಳಲ್ಲಿ 5ನೇ ಸ್ಥಾನಿಯಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next