Advertisement
ಕಳೆದ 5 ವರ್ಷಗಳಿಂದ ಎಲ್ಲೂರು ಸಬ್ ಸ್ಟೇಷನ್ ನಿರ್ಮಾಣ ಕಾಮಗಾರಿ ಆರಂಭಗೊಂಡಿದ್ದರೂ ಈ ವರೆಗೆ ಅದು ಪೂರ್ತಿಯಾಗಿಲ್ಲ. ಅರಣ್ಯ ಹಾಗೂ ಮೆಸ್ಕಾಂ ಇಲಾಖೆಗಳ ನಡುವಿನ ತಾಂತ್ರಿಕ ಸಮಸ್ಯೆ ನಿಭಾಯಿಸುವಲ್ಲಿ 2 ಇಲಾಖೆಗಳು ಒಡಂಬಡಿಕೆಗೆ ಬಾರದಿರುವುದು ಇನ್ನಷ್ಟು ಜಟಿಲವಾಗಿ ಉಳಿದಿದೆ.
ಬೈಂದೂರು ಮೆಸ್ಕಾಂ ಇಲಾಖೆಯ ಅ ಧಿಕಾರಿಗಳು 3 ಬಾರಿ ಅರಣ್ಯ ಇಲಾಖೆಗೆ ಮನವಿ ಸಲ್ಲಿಸಿ ವಿದ್ಯುತ್ ಕಂಬಗಳ ಜೋಡಣೆ ಹಾಗೂ ವಿದ್ಯುತ್ ತಂತಿಗಳ ಅಳವಡಿಕೆಗೆ ಅನುಮತಿ ನೀಡುವಂತೆ ವಿನಂತಿಸಿದ್ದರು. ಆದರೆ ಅರಣ್ಯ ಇಲಾಖೆ ಕೇಳಿರುವ ಜಿಪಿಎಸ್ ಮ್ಯಾಪ್ ಸ್ಟ್ರಕ್ಚರ್ ಹಾಗೂ ಇನ್ನಿತರ ವಿಚಾರಗಳಿಗೆ ಅನು ಮತಿ ದೊರೆಯದಿರುವುದು ಮತ್ತಷ್ಟು ವಿಳಂಬಕ್ಕೆ ಕಾರಣವಾಗಿದೆ. ಡಿ.ಎಫ್.ಒ. ಹಾಗೂ ಮೆಸ್ಕಾಂ ಅ ಧಿಕಾರಿಗಳು ಇದೀಗ ಜಂಟಿ ಸರ್ವೆ ಮಾಡಿದ್ದು ಅಭಯಾರಣ್ಯ ಕಡಿಮೆ ಇರುವ ಕಂಬದಕೋಣೆಯ ಮಾರ್ಗವಾಗಿ ಕಾಲ್ತೋಡು ಮೂಲಕ ವಿದ್ಯುತ್ ತಂತಿ ಸಂಪರ್ಕ ವ್ಯವಸ್ಥೆಗೆ ಅನುಮತಿ ದೊರಕಿದ್ದು ಕಾಮಗಾರಿ ಆರಂಭಗೊಂಡಿದೆ.
Related Articles
ಬೈಂದೂರು ಹಾಗೂ ಕಂಬದಕೋಣೆ ಮಾರ್ಗವಾಗಿ ಕೊಲ್ಲೂರಿಗೆ ಸಾಗುವ ಮುಖ್ಯ ರಸ್ತೆಯ ಬಹುತೇಕ ಭೂಮಿ ಅರಣ್ಯ ಇಲಾಖೆಯ ಸ್ವಾಮ್ಯದಲ್ಲಿದೆ. ಅರಣ್ಯ ಇಲಾಖೆಯ ಕಟ್ಟು ನಿಟ್ಟಾದ ಕಾನೂನು ಮೆಸ್ಕಾಂ ಇಲಾಖೆಗೆ ನುಂಗಲಾರದ ತುತ್ತಾಗಿದೆ. ಯೋಜನೆ ಅನುಷ್ಠಾನಗೊಳಿಸಲು ತಾಂತ್ರಿಕ ಕಾರಣಗಳು ತಡೆಯಾಗಿದ್ದರೂ ಕಂಬದ ಕೋಣೆಯ ಮಾರ್ಗವಾಗಿ ಎಲ್ಲೂರು ಸಬ್ ಸ್ಟೇಷನ್ ಕಾಮಗಾರಿ ಪೂರ್ಣಗೊಳಿಸಿ ಕಾರ್ಯಾರಂಭಗೊಳಿಸಲು ಇಲಾಖೆಯ ಪ್ರಯತ್ನ ನಡೆಯುತ್ತಿದೆ.
Advertisement
10 ಕೋ.ರೂ. ವೆಚ್ಚದ ಯೋಜನೆ2017ರಲ್ಲಿ ಆರಂಭಗೊಂಡ ಎಲ್ಲೂರು ಸಬ್ ಸ್ಟೇಷನ್ ನಿರ್ಮಾಣ ಕಾಮಗಾರಿ ಆಮೆನಡಿಗೆ ಯಲ್ಲಿ ಸಾಗುತ್ತಿರುವುದು ಈ ಭಾಗದ ನಿವಾಸಿಗಳಿಗೆ ನಿರಾಶೆ ಉಂಟುಮಾಡಿದೆ. ಗುತ್ತಿಗೆದಾರರು ಕಾಮಗಾರಿಯನ್ನು ಪೂರ್ಣಗೊಳಿಸಲು ವಿಳಂಬ ನೀತಿ ಅನುಸರಿಸುತ್ತಿದ್ದಾರೆಯೇ ಎಂಬ ಶಂಕೆ ಮೂಡಿಬರುತ್ತಿದೆ. ಹಾಲ್ಕಲ್‌ನಲ್ಲಿ ಸಬ್ ಸ್ಟೇಷನ್ ಆರಂಭಗೊಂಡಲ್ಲಿ 3 ಫೀಡರ್ ಗಳ ಬಳಕೆ ಮೂಲಕ ಕೊಲ್ಲೂರು, ಹಾಲ್ಕಲ್, ಜಡ್ಕಲ್, ಮುದೂರು, ಮೈಕಳ, ತಗ್ಗರ್ಸೆ ಹಾಗೂ ಎಲ್ಲೂರು ಭಾಗದ ಗ್ರಾಮಸ್ಥರಿಗೆ ಪೂರ್ಣ ಪ್ರಮಾಣದ ವಿದ್ಯುತ್ ಒದಗಿಸಿದಂತಾಗುವುದು. ಅಧಿಕಾರಿಗಳಿಗೆ ಸೂಚನೆ
ಎಲ್ಲೂರು ಸಬ್ ಸ್ಟೇಷನ್ ನಿರ್ಮಾಣ ಕಾಮಗಾರಿ ತ್ವರಿತಗತಿಯಲ್ಲಿ ನಡೆಸಿ ಪೂರ್ಣಗೊಳಿಸಿ ಕೊಲ್ಲೂರು, ಗೋಳಿಹೊಳೆ, ಜಡ್ಕಲ್, ಮುದೂರು ಮುಂತಾದ ಭಾಗದ ನಿವಾಸಿಗಳಿಗೆ ಹಗಲಿರುಳು ಪೂರ್ಣ ಪ್ರಮಾಣದ ವಿದ್ಯುತ್ ಸರಬರಾಜು ಒದಗಿಸುವಂತೆ ಅಧಿ ಕಾರಿಗಳಿಗೆ ಸೂಚನೆ ನೀಡಿದ್ದೇನೆ, ಅನುಷ್ಠಾನಗೊಳಿಸಲು ವಿಳಂಬವಾದಲ್ಲಿ ಸರಕಾರದ ಗಮನ ಸೆಳೆಯಲಾಗುವುದು.
-ಬಿ.ಎಂ. ಸುಕುಮಾರ್ ಶೆಟ್ಟಿ, ಶಾಸಕರು ಬೈಂದೂರು 8 ತಿಂಗಳಲ್ಲಿ ಕಾರ್ಯಾರಂಭ
ಆರಣ್ಯ ಇಲಾಖೆಗೆ 3 ಬಾರಿ ಮನವಿ ಸಲ್ಲಿಸಿ ಅಗತ್ಯದ ದಾಖಲೆಗಳನ್ನು ನೀಡಲಾಗಿದೆ. ಇದೀಗ ಕಂಬದಕೋಣೆ ಮಾರ್ಗವಾಗಿ ಕಾಲ್ತೋಡು ಮೂಲಕ ರಾಜ್ಯ ಹೆದ್ದಾರಿಯಲ್ಲಿ ಸಂಪರ್ಕ ತಂತಿಗಳ ಜೋಡಣೆ ಕಾಮಗಾರಿ ನಡೆಯುತ್ತಿದೆ. ಮುಂದಿನ 8 ತಿಂಗಳಲ್ಲಿ ಎಲ್ಲೂರು ಸಬ್ ಸ್ಟೇಷನ್ ಕಾರ್ಯಾರಂಭಗೊಳ್ಳುವುದು.
-ರಾಕೇಶ್, ಕಾರ್ಯನಿರ್ವಾಹಕ, ಎಂಜಿನಿಯರ್ ಮೆಸ್ಕಾಂ ಡಾ| ಸುಧಾಕರ ನಂಬಿಯಾರ್