Advertisement

ಭೂಮಿತಾಯಿಗೆ ನಮಿಸಿ ಹಬ್ಬ ಎಳ್ಳು ಅಮವಾಸ್ಯೆ

06:05 PM Jan 02, 2022 | Team Udayavani |

ಗಂಗಾವತಿ: ಭೂಮಿತಾಯಿಗೆ ನಮಿಸಿ ಹಬ್ಬ ಎಳ್ಳು ಅಮವಾಸ್ಯೆ ಆಗಿದೆ.ಪ್ರತಿ ವರ್ಷದ ಎಳ್ಳುಅಮವಾಸ್ಯೆಯಂದು ಕೃಷಿಕರು ಬೆಳಿಗ್ಗಿನ ಜಾವ ಬೇಗ ಎದ್ದು ಸ್ನಾನ ಪೂಜಾದಿಗಳನ್ನು ಮಾಡಿಕೊಂಡು ರೊಟ್ಟಿ ಸೇರಿದಂತೆ ವಿವಿಧ ಭಕ್ಷ್ಯಗಳನ್ನು ತಯಾರು ಮಾಡಿಕೊಂಡು ತಮ್ಮ ಹೊಲಗದ್ದೆಗಳಿಗೆ ತೆರಳಿ ಅಲ್ಲಿ ಭೂಮಿ ತಾಯಿಗೆ ಪೂಜೆ ಮಾಡಿ ತಾವು ತೆಗೆದುಕೊಂಡು ಹೋದ ಆಹಾರವನ್ನು ಇಡೀ ಹೊಲದ ತುಂಬೆಲ್ಲ ಚೆಲ್ಲುತ್ತಾರೆ ಇದರಿಂದ ಭೂಮಿತಾಯಿ ಸಂತೃಪ್ತಳಾಗುತ್ತಾಳೆ ಎಂಬ ಭಾವನೆ ಕೃಷಿಕರ ಮಕ್ಕಳದ್ದು .ರವಿವಾರ ಎಳ್ಳು ಅಮಾವಾಸ್ಯೆ ಪ್ರಯುಕ್ತ ತಾಲ್ಲೂಕಿನ ಎಲ್ಲಾ ಗ್ರಾಮಗಳಲ್ಲಿ ಕೃಷಿಕರು ಮತ್ತು ಅವರ ಕುಟುಂಬದವರು ತಮ್ಮ ಹೊಲಗಳಿಗೆ ತೆರಳಿ ತಾವು ತಯಾರಿಸಿದ ಆಹಾರದ ನೈವೇದ್ಯವನ್ನು  ಇಟ್ಟು ಪೂಜೆ ಮಾಡಿ ಆಹಾರವನ್ನು ಇಡೀ ಹೊಲದ ತುಂಬೆಲ್ಲ ಚೆಲ್ಲುತ್ತಾರೆ .

Advertisement

ಕೃಷಿ ವಿಜ್ಞಾನಿಗಳ ಪ್ರಕಾರ ಪ್ರತಿವರ್ಷ ಮನೆಯಲ್ಲಿ ತಯಾರಿಸಿದ ಆಹಾರ ಪದಾರ್ಥವನ್ನು ಚರಗದ ರೂಪದಲ್ಲಿ ಹೊಲಗದ್ದೆಗಳಿಗೆ ಚೆಲ್ಲುವುದರಿಂದ ರೈತಮಿತ್ರ ಹಕ್ಕಿಗಳು ತಮ್ಮ ಹೊಲಗಳಲ್ಲಿ ಬೀಡು ಬಿಟ್ಟು ರೈತ ಬೆಳೆದ ಬೆಳೆಯನ್ನು ನಾಶ ಮಾಡುವ ಕ್ರಿಮಿ ಕೀಟಗಳನ್ನು ತಿನ್ನಲು ಅನುಕೂಲವಾಗುತ್ತದೆ ಆದ್ದರಿಂದ ಈ ಚರಗ ಚಲ್ಲುವ ಪದ್ಧತಿ ಪುರಾತನ ಕಾಲ ವಾದರೂ ವೈಜ್ಞಾನಿಕವಾಗಿ ಸರಿಯಾಗಿದೆ ಎಂದು ಗಂಗಾವತಿ ಕೃಷಿ ಸಂಶೋಧನಾ ಕೇಂದ್ರದ ಕೃಷಿ ವಿಜ್ಞಾನಿ ಡಾಕ್ಟರ್ ಮಹಾಂತ ಶಿವಯೋಗಿಗಳ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ .ಪುರಾತನ ಕಾಲದಿಂದ ಗ್ರಾಮೀಣ ಜನರು ಕೃಷಿಗೆ ಸಂಬಂಧಿಸಿದಂತೆ ಆಚರಿಸಿಕೊಂಡು ಬಂದಿರುವ ಹಬ್ಬಹರಿದಿನಗಳು ಅತ್ಯಂತ ವೈಜ್ಞಾನಿಕವಾಗಿದೆ ಅವುಗಳನ್ನು ಮುಂದುವರಿಸಿಕೊಂಡು ಹೋಗಬೇಕಾದ ಅಗತ್ಯವೂ ಇದೆ .

ಗಂಗಾವತಿ ತಾಲ್ಲೂಕಿನ ಎಲ್ಲಾ ಗ್ರಾಮಗಳಲ್ಲಿ ರವಿವಾರ ಎಳ್ಳು ಅಮವಾಸ್ಯೆಯ ಚರಗವನ್ನು ತಮ್ಮ ಹೊಲಗದ್ದೆಗಳಿಗೆ ಚೆಲ್ಲಿ ಕೃಷಿಕರು ಸಂತೋಷಪಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next