ಕಾರ್ಕಳ: ತಾಲೂಕಿನ ಎಳ್ಳಾರೆ ಗ್ರಾಮದ ವೈ.ವಿಟ್ಠಲ ಪ್ರಭು (85) ಅವರು ಬುಧವಾರ ಸಂಜೆ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಅವರು ಪತ್ನಿ , ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
Advertisement
ಅವರ ಹಿರಿಯ ಪುತ್ರ ಕೃಷ್ಣಮೂರ್ತಿ ಪ್ರಭು ಆದಾಯ ತೆರಿಗೆ ಇಲಾಖೆಯ ನಿವೃತ್ತ ಅಧಿಕಾರಿಯಾಗಿದ್ದು,ದ್ವಿತೀಯ ಪುತ್ರ ಬಿ.ಸದಾಶಿವ ಪ್ರಭು ಐಎಎಸ್ ಅಧಿಕಾರಿಯಾಗಿದ್ದು, ವಿಜಯನಗರ ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಅವರ ಅಂತ್ಯಕ್ರಿಯೆಯು ಎಳ್ಳಾರೆಯ ಬೆಂಬರಬೈಲಿನ ಸ್ವಗೃಹದಲ್ಲಿ ಗುರುವಾರ ಬೆಳಗ್ಗೆ 10 ಗಂಟೆಗೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.