Advertisement
ಹಾಗೆಯೇ ಅವುಗಳು ಛಾಯಾಚಿತ್ರ ಕ್ಷೇತ್ರದಲ್ಲೂ ಬೇಡಿಕೆ ಪಡೆದುಕೊಂಡಿವೆ. ನಡೆದುಕೊಂಡು ಹೋಗುವಾಗ ಮುದ್ದಾದ ನಾಯಿ ಮರಿಯೊಂದು ಎದುರಿಗೆ ಓಡಿಬಂದರೆ ಅದರ ಛಾಯಾಚಿತ್ರ ಸೆರೆಹಿಡಿಯಲು ಯಾರು ತಾನೆ ಮುಂದಾಗುವುದಿಲ್ಲ ಹೇಳಿ. ಹೀಗೆ ಶ್ವಾನಗಳ ವಿಭಿನ್ನ ಸುಂದರ ಮತ್ತು ವಿನೋದಮಯ ಛಾಯಚಿತ್ರಗಳನ್ನು ಸೆರೆಹಿಡಿದು ಜನಪ್ರೀಯತೆ ಪಡೆದಿರುವ ಮಹಿಳೆಯ ಬಗ್ಗೆ ನಾವಿಲ್ಲಿ ಹೇಳಲಿದ್ದೇವೆ.
ಛಾಯಾಚಿತ್ರಗಾರ್ತಿ ಎಲ್ಕೆ ವೋಗೆಲ್ಸಾಂಗ್ ಅವರಲ್ಲಿನ ಶ್ವಾನಗಳ ಬಗೆಗಿನ ವ್ಯಾಮೋಹ, ಪ್ರೀತಿ ಮತ್ತು ಜೀವನದಲ್ಲಿ ಎದುರಾದ ಕಷ್ಟಗಳು ಇಂದು ಅವರನ್ನು ಅತ್ಯುತ್ತಮ ಛಾಯಾಚಿತ್ರಗಾರ್ತಿಯನ್ನಾಗಿ ಮಾಡಿವೆ. ಅಲ್ಲದೇ ಪ್ರಸಿದ್ಧ ಪೆಟ್ ಕಂಪೆನಿಗಳಾದ ಪೆಡಿಗ್ರಿ ಮತ್ತು ಫ್ಲಫ್ ಆ್ಯಂಡ್ ಟಫ್ ಕಂಪೆನಿಗಳ್ಳೋಂದಿಗೆ ಸೇರಿ ಕಾರ್ಯನಿರ್ವಹಿಸುತ್ತದ್ದಾರೆ. ಇನ್ಸ್ಟಾಗ್ರಾಮ್ ಖಾತೆಯಲ್ಲಿ ಇವರಿಗೆ 1.5 ಲಕ್ಷ ಹಿಂಬಾಲಕರಿದ್ದಾರೆ. ಕಷ್ಟ ಕಾಲದಲ್ಲಿ ಮನೋಬಲ
ಮನೆಯಲ್ಲಿ ಅತ್ತೆ ಬುದ್ದಿಮಾಂದ್ಯ ಕಾಯಿಲೆಯಿಂದ ಬಳಲುತಿದ್ದರು. ಎರಡು ವರ್ಷಗಳ ಅನಂತರ ಪತಿ ಕೂಡ ಮಿದುಳಿನ ರಕ್ತಸ್ರಾವ (ಬ್ರೈನ್ ಹ್ಯಾಮರೇಜ್) ಕಾಯಿಲೆಗೆ ತುತ್ತಾಗಿ ಆಸ್ಪತ್ರೆ ಸೇರುತ್ತಾರೆ. ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ಆಕೆಯ ಮನೋಬಲ ಹೆಚ್ಚಿಸಿದ್ದು ಮನೆಯಲ್ಲಿದ ಮುದ್ದಾದ ಶ್ವಾನಗಳು. ಪತಿ ಪ್ರಜ್ಞಾಹೀನ ಸ್ಥಿತಿಯಲ್ಲಿರುವಾಗ ಮನೆಯಲ್ಲಿದ್ದ ಶ್ವಾನಗಳು ಛಾಯಾಚಿತ್ರಗಳಾಗಿ ಆಗಾಗ ನನ್ನ ಮೊಬೈಲ್‌ನಲ್ಲಿ ಸೆರೆಯಾಗುತ್ತಿದ್ದವು. ಆದರೆ ಪತಿ ಸಂಪೂರ್ಣವಾಗಿ ಗುಣಮುಖವಾದ ಅನಂತರ ಶ್ವಾನಗಳ ಛಾಯಾ ಚಿತ್ರಗ್ರಹಣವೇ ನನ್ನ ಧ್ಯೇಯವಾಯಿತು ಎನ್ನುತ್ತಾರೆ ವೋಗೆಲ್ಸಾಂಗ್.
Related Articles
Advertisement
ಶ್ವಾನಗಳ ಫೋಟೋ ತೆಗೆಯುವಾಗ ಉಂಟಾಗುವ ಯಾವುದೇ ರೀತಿಯ ಮುಜುಗರಗಳಿಗೂ ನಾನು ಅಂಜುವುದಿಲ್ಲ ಎನ್ನುತ್ತಾರೆ ವೋಗೆಲ್ಸಾಂಗ್. ಶ್ವಾನಗಳ ಉತ್ತಮ ಫೋಟೊ ಸೆರೆಹಿಡಿಯಬೇಕಾದರೆ ತಾಳ್ಮೆ, ನಂಬಿಕೆ, ಪುನರಾವರ್ತನೆ ಮತ್ತು ಆಹಾರ, ತಿಂಡಿಯ ರೂಪದಲ್ಲಿ ಅವುಗಳಿಗೆ ಲಂಚವನ್ನೂ ನೀಡಬೇಕಾಗುತ್ತದೆ. ಅಲ್ಲದೇ ಈಗಿನ ಕೋವಿಡ್-19 ಲಾಕ್‌ಡೌನ್ ಸಮಯದಲ್ಲಿ ನನ್ನ ಏಕಾಂಗಿತನ್ನವನ್ನು ದೂರ ಮಾಡಿದ್ದು, ನಾನು ಇಷ್ಟು ಖುಷಿಯಿಂದಿರಲು ನಮ್ಮ ಮನೆಲ್ಲಿರುವ ನಾಯಿಗಳೇ ಕಾರಣ ಎಂದು ಶ್ವಾನಗಳ ಕೆಲವೊಂದಿಷ್ಟು ಫೋಟೊಗಳನ್ನು ವೋಗೆಲ್ಸಾಂಗ್ ಇತ್ತೀಚೆಗೆ ಹಂಚಿಕೊಂಡಿದ್ದರು.
ಇದೆಲ್ಲದಕ್ಕೂ ಹೆಚ್ಚಾಗಿ ಶ್ವಾನಗಳಲ್ಲಿನ ತುಂಟತನ, ಚಾಕಚಕ್ಯತೆ ಮತ್ತು ಹಾಸ್ಯ ಪ್ರವೃತ್ತಿ ಎಂತಹ ಪರಿಸ್ಥಿತಿಯಲ್ಲೂ ನಿಮ್ಮ ಮುಖದಲ್ಲಿ ಮಂದಹಾಸ ಮೂಡಿಸುತ್ತವೆ. ಅಲ್ಲದೇ ಇವುಗಳು ಒಂದು ರೀತಿ ಸಹಜ ಹಾಸ್ಯಗಾರರಿದ್ದಂತೆ. ಹಾಗಾಗಿ ಶ್ವಾನಗಳು ಮನುಷ್ಯರ ಆಪ್ತ ಗೆಳೆಯನ ಸ್ಥಾನ ಪಡೆದುಕೊಂಡಿವೆ.
-ಶಿವಾನಂದ್ ಎಚ್.