Advertisement
ಎಲಿಕ್ಸರ್ ಮಿನರಲ್ ವಾಟರ್‌ನ ಶ್ರೇಷ್ಠ ಗುಣಮಟ್ಟವನ್ನು ಮೆಚ್ಚಿ ಪ್ರಶಂಸಿಸಿದ ಹೆಗ್ಗಡೆ ಅವರು ಇಂಥ ಘಟಕಗಳನ್ನು ತಮ್ಮ ಪ್ರತಿಷ್ಠಾನದ ಎಲ್ಲ ಶೈಕ್ಷಣಿಕ ಸಂಸ್ಥೆಗಳಲ್ಲಿ ಸ್ಥಾಪಿಸಲು ತಮ್ಮ ಅನುಮೋದನೆ ನೀಡಿದರು. ಭಾರತೀಯರಿಗೆ ಖನಿಜಯುಕ್ತ ಕುಡಿಯುವ ನೀರನ್ನು ಒದಗಿಸುವ ಎಸ್‌ಕೆಎಫ್ ಎಲಿಕ್ಸರ್ ಇಂಡಿಯಾದ ಅಭಿಯಾನಕ್ಕೆ ಶುಭ ಹಾರೈಸಿದ ಅವರು ಈ ಅಭಿಯಾನದೊಂದಿಗೆ ಕೈ ಜೋಡಿಸಲು ಸಮ್ಮತಿ ನೀಡಿದರು.
ಎಸ್‌ಕೆಎಫ್‌ನ ಆಡಳಿತ ನಿರ್ದೇಶಕ ಜಿ. ರಾಮಕೃಷ್ಣ ಆಚಾರ್ ಅವರು ಎಲಿಕ್ಸರ್ ಬಗ್ಗೆ ಮಾಹಿತಿ ನೀಡಿದರು. ಎಲಿಕ್ಸರ್ ಆರ್/ಯುವಿ/ಯುಎಫ್/ಟಿಡಿಎಸ್ ಕಂಟ್ರೋಲ್ ತಂತ್ರಜ್ಞಾನವು ನೀರಿನಲ್ಲಿರುವ ಕಲ್ಮಶಗಳನ್ನೆಲ್ಲ ನಿವಾರಿಸಿ, ನೀರಿನ ಟಿಡಿಎಸ್, ಪಿಎಚ್ ಮಟ್ಟವನ್ನು ಸಹಜ ಖನಿಜಯುಕ್ತ ನೀರಿನ ಮಟ್ಟಕ್ಕೆ ತಂದು ನಿಲ್ಲಿಸುವುದು. ಅವರವರದೇ ಆದ ಜಲಮೂಲದಿಂದ ಶೇ. 100 ಪರಿಶುದ್ಧ, ಖನಿಜಯುಕ್ತ ರುಚಿಕರ ನೀರನ್ನು ಈ ಘಟಕದಿಂದ ಪಡೆಯಬಹುದು. ಪ್ಲಾಸ್ಟಿಕ್ ಬಾಟಲಿ ಗಳನ್ನು ನಿವಾರಿಸಿ, ಹಸಿರು ಪರಿಸರದೊಂದಿಗೆ “ಸ್ವತ್ಛ ಭಾರತ’ವನ್ನು ನಿರ್ಮಿಸಲೂ ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು. ದ.ಕ. ಜಿಲ್ಲೆಯ ಕಾಟಿಪಳ್ಳ, ಸುರತ್ಕಲ್, ಚಿಲಿಂಬಿ, ಬೋಂದೆಲ್, ಪಾಂಡೇಶ್ವರ ಮತ್ತು ಅಶೋಕ ನಗರ ಮೊದಲಾದೆಡೆಗಳಲ್ಲಿ ನಡೆಸಿದ ಪರೀಕ್ಷೆಗಳಿಂದ 10ರಲ್ಲಿ 9 ಸ್ಯಾಂಪಲ್‌ಗಳ ನೀರು ಗರಿಷ್ಠ ಮಟ್ಟದಲ್ಲಿ ಕೋಲಿ ಫಾರ್ಮ್
ಬ್ಯಾಕ್ಟೀರಿಯಾಗಳು ಕಂಡುಬಂದಿದ್ದು ಅವೆಲ್ಲವೂ ಕುಡಿ ಯಲು ಯೋಗ್ಯವಲ್ಲ ಎಂದು ಪ್ರಮಾಣಿಸಲ್ಪಟ್ಟಿವೆ. ಇಂಥ
ನೀರಿನಲ್ಲಿರುವ ಸೀಸ, ಫ್ಲೋರೈಡ್, ಆರ್ಸೆನಿಕ್, ಕೀಟನಾಶಕಗಳಿಂದ ಮಕ್ಕಳ ದೈಹಿಕ, ಮಾನಸಿಕ ಬೆಳವಣಿಗೆ ಕುಂಠಿತವಾಗು ವುದಲ್ಲದೆ, ರಕ್ತಹೀನತೆ ಚರ್ಮವ್ಯಾಧಿ, ಕ್ಯಾನ್ಸರ್, ಮೂಳೆ, ಸಂಧಿವೈಕಲ್ಯ ಕಾಡುವ ಫ್ಲೋರೋಸಿಸ್, ಮೂತ್ರಪಿಂಡಕ್ಕೆ ಹಾನಿ ಸಂಭವಿಸಬಹುದು. ಎಲಿಕ್ಸರ್ ಘಟಕದಿಂದ ಲಭಿಸುವ ಶುದ್ಧ ನೀರು ಸ್ವತ್ಛ ಭಾರತದೊಂದಿಗೆ ಆರೋಗ್ಯ ಪೂರ್ಣ ಭಾರತಕ್ಕೂ ಕೊಡುಗೆ ನೀಡಲಿದೆ ಎಂದರು.