Advertisement

ಉಪನ್ಯಾಸಕರ ವೇತನ ತಾರತಮ್ಯ ನಿವಾರಿಸಿ

04:18 PM Nov 29, 2019 | Team Udayavani |

ಮಂಡ್ಯ: ಪದವಿ ಪೂರ್ವ ಕಾಲೇಜು ಉಪನ್ಯಾಸಕರ ವೇತನ ತಾರತಮ್ಯ, ಬಡ್ತಿ, ಹೆಚ್ಚುವರಿ ವೇತನ ಬಡ್ತಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ಪದವಿ  ಪೂರ್ವ ಕಾಲೇಜು ಉಪನ್ಯಾಸಕರು ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಗುರುವಾರ ಧರಣಿ ಸತ್ಯಾಗ್ರಹ ನಡೆಸಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಧರಣಿ ನಡೆಸಿದ ಉಪನ್ಯಾಸಕರು, ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

Advertisement

ಸಮಿತಿ ರಚಿಸಿ: ಪದವಿ ಕಾಲೇಜು ಉಪನ್ಯಾಸಕರಿಗೆ ವೇತನ ತಾರತಮ್ಯ ಸರಿಪಡಿಸುವ ಸಂಬಂಧ ಸರ್ಕಾರದ ಲಿಖೀತ ಭರವಸೆಯಂತೆ ಎರಡನೇ ಹೆಚ್ಚುವರಿ ವೇತನ ಬಡ್ತಿ ಮಂಜೂರು ಮಾಡುವುದು.ಪದವಿಪೂರ್ವ ಶಿಕ್ಷಣ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಉಪನ್ಯಾಸಕರ ಕಾರ್ಯ ಭಾರ ಕುರಿತು ಉನ್ನತ ಮಟ್ಟದ ಪರಿ ಷತ್‌ ಸಮಿತಿ ರಚಿಸಬೇಕು. ಅಲ್ಲಿಯವರೆಗೆ ಪ್ರತಿ ಉಪನ್ಯಾಸಕರಿಗೆ ವಾರ ದಲ್ಲಿ 16 ಗಂಟೆ ಗಳ ಬೋಧನಾ ಅವಧಿ ಮುಂದುವರಿಸುವಂತೆ ಒತ್ತಾಯಿಸಿದರು. 2018ರ ಆಗಸ್ಟ್‌ 1ರ ನಂತರ ನೇಮಕಗೊಂಡ  ಉಪನ್ಯಾಸಕರಿಗೆ 500 ರೂ. ಎಕ್ಸ್‌ಗ್ರೇಷಿಯಾವನ್ನು ಕೂಡಲೇ ಮೂಲ ವೇತನಕ್ಕೆ ವಿಲೀನಗೊಳಿಸುವುದು, ಈಗಾಗಲೇ ನೀಡಿರುವ ಎಕ್ಸ್‌ಗ್ರೇಷಿಯಾ ವನ್ನು ಮರುಪಾವತಿ ಮಾಡಲು ಆದೇಶಿಸರುವುದನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

ಕಾಲ ಮಿತಿ ವೇತನ: ಪ್ರೌಢಶಾಲೆಯಿಂದ ಪದೋನ್ನತಿ ಹೊಂದಿ ಪದವಿ ಪೂರ್ವ ಕಾಲೇಜುಗಳಲ್ಲಿ ಉಪನ್ಯಾಸಕ ರಾಗಿ ಸೇವೆ ಸಲ್ಲಿಸುತ್ತಿ ರುವ ಉಪನ್ಯಾಸಕರಿಗೆ 10, 15, 20, 25 ವರ್ಷಗಳ ಕಾಲಮಿತಿ ಬಡ್ತಿಯನ್ನು ಕೂಡಲೇ ಮಂಜೂರು ಮಾಡಿ ಆದೇಶಿಸುವುದು. ಪದವಿ ಪೂರ್ವ ಕಾಲೇ ಜು ಗ ಳಲ್ಲಿ ಎನ್‌ಸಿ ಇ ಆರ್‌ಟಿಸಿ ನಿಯಮಾವಳಿಯಂತೆ ಪ್ರತಿ ತರಗತಿಗೆ ವಿದ್ಯಾರ್ಥಿಗಳ ಗರಿಷ್ಠ ಸಂಖ್ಯೆಯನ್ನು 8ರಿಂದ 40ಕ್ಕೆ ನಿಗದಿಪಡಿಸಿ ಆದೇಶ ಹೊರಡಿಸಬೇಕು. ಪದವಿ ಪೂರ್ವ ಕಾಲೇಜುಜಿಲ್ಲಾ ಉಪ ನಿರ್ದೇಶಕರ ಹಂತದಲ್ಲಿ ಉಪನ್ಯಾಸಕರ 10, 15, 20, 25 ವರ್ಷಗಳ ಕಾಲ ಮಿತಿ ವೇತನ ಬಡ್ತಿಯನ್ನು ಮಂಜೂರು ಮಾಡುವಂತೆ ಆಗ್ರಹಿಸಿದರು.

ಪೂರ್ವ ಸೇವಾವಧಿ: ಅನುದಾನಿತ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಕಾಲ್ಪನಿಕ ವೇತನ ಸಮಸ್ಯೆ ಬಗೆ ಹರಿಸಿ ವೃತ್ತಿ ಶಿಕ್ಷಣ ಇಲಾಖೆಯಿಂದ ವಿಲೀನವಾಗಿರುವ ಉಪನ್ಯಾಸಕರಿಗೆ ಬಿಇಡಿ ಪದ ವಿಯಿಂದ ವಿನಾ ಯಿತಿ ನೀಡಿ ಅವರ ಖಾಯಂ ಪೂರ್ವ ಸೇವಾವಧಿಯನ್ನು ಘೋಷಣೆ ಮಾಡ ಬೇಕು. ರಾಜ್ಯದ ಸುಮಾರು 600 ಪದ ವಿ ಪೂರ್ವ ಕಾಲೇಜುಗಳಲ್ಲಿ ಖಾಯಂ ಪ್ರಾಂಶುಪಾಲರು ಇಲ್ಲದಿರುವುದರಿಂದ ಆಡಳಿತಾತ್ಮಕ ಸಮಸ್ಯೆಯಾಗಿದ್ದು, ಕೂಡಲೇ ಉಪನ್ಯಾಸಕರಿಗೆ ಪ್ರಾಂಶುಪಾಲರಾಗಿ ಪದೋನ್ನತಿ ನೀಡುವಂತೆ ಒತ್ತಾಯಿಸಿದರು.

ನೂತನ ಪಿಂಚಣಿ ಯೋಜನೆ: ಅನುದಾನಿತ ಪದವಿಪೂರ್ವ ಕಾಲೇಜು ಉಪನ್ಯಾಸಕರಿಗೆ ನೂತನ ಪಿಂಚಣಿ ಯೋಜನೆ ಜಾರಿಗೊಳಿಸುವುದು. ದ್ವಿತೀಯ ಪಿಯುಸಿ ಮೌಲ್ಯಮಾಪನ ಸಂಭಾವನೆಯನ್ನು ಕೆ2ನಿಂದ ವಿನಾಯಿತಿ ನೀಡಿ ಚೆಕ್‌ ಮೂಲಕ ವಿತರಿಸಬೇಕು. 2019-20ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಸಂಭಾವನೆಯನ್ನು ಶೇ.30ರಷ್ಟು ಪರಿಷ್ಕರಿಸುವುದು, ಗುತ್ತಿಗೆ ಆಧಾ ದ ಉಪನ್ಯಾಸಕರ 6 ವಾರ್ಷಿಕ ವೇತನ ಬಡ್ತಿಗಳನ್ನು ಕಟಾಯಿಸುವುದನ್ನು ರದ್ದುಪಡಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.

Advertisement

ಪ್ರತಿಭಟನೆಯಲ್ಲಿ ವಿಧಾನ ಪರಿಷತ್‌ ಸದಸ್ಯರಾದ ಕೆ.ಟಿ. ಶ್ರೀಕಂಠೇ ಗೌಡ, ಮರಿತಿಬ್ಬೇಗೌಡ ಉಪನ್ಯಾಸಕರ ಪ್ರತಿಭಟನೆಗೆ ಬೆಂಬಲ ನೀಡಿದ್ದು, ಉಪ ನ್ಯಾಸಕರಸಂಘದ ಅಧ್ಯಕ್ಷ ಹನುಮಂತಯ್ಯ, ಕಾರ್ಯಾ ಧ್ಯಕ್ಷ ಜಿ.ಎನ್‌. ನಾಗೇಶ್‌, ಪ್ರಧಾನ ಕಾರ್ ದರ್ಶಿ ಎಂ. ಮಂಜೇಶ್‌ಕುಮಾರ್‌, ಖಜಾಂಚಿ ಕೆ. ಶಿವ ಲಿಂಗಯ್ಯ, ಮುಖಂಡ ರಾದ ಅಂಕೇ ಗೌಡ, ಚನ್ನ ಕೃಷ್ಣ, ರಂಗ ರಾಜ್‌ ಸೇರಿದಂತೆ ಹಲವರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next