ಡರ್ಬಾನ್: ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿ ಮತ್ತು ಐಪಿಎಲ್ ಕೂಟದ ನಡುವೆ ಯಾವುದನ್ನು ಆಯ್ಕೆ ಮಾಡುತ್ತೀರಿ ಎಂದು ಕೇಳಲಾದ ಪ್ರಶ್ನೆಗೆ ಐಪಿಎಲ್ ಎಂದೇ ದಕ್ಷಿಣ ಆಫ್ರಿಕಾದ ಎಲ್ಲ ಆಟಗಾರರು ಉತ್ತರಿಸಿದ್ದಾರೆ. ಇದಕ್ಕೆ ದಕ್ಷಿಣ ಆಫ್ರಿಕಾ ಟೆಸ್ಟ್ ನಾಯಕ ಡೀನ್ ಎಲ್ಗರ್ ಒಪ್ಪಿಗೆ ಸೂಚಿಸಿದ್ದಾರೆ.
ಆಟಗಾರರ ನಿರ್ಧಾರದಿಂದ ನಾನು ಆರಾಮಾಗಿದ್ದೇನೆ ಎಂದವರು ಹೇಳಿದ್ದಾರೆ.
ಐಪಿಎಲ್ ಬದಲಾಗಿ ಬಾಂಗ್ಲಾದೇಶ ವಿರುದ್ಧದ ಸರಣಿಯ ಹಿನ್ನೆಲೆಯಲ್ಲಿ ರಾಷ್ಟ್ರೀಯ ತಂಡದಲ್ಲಿ ಆಡಿ ಎಂದು ಎಲ್ಗರ್ ತನ್ನ ತಂಡದ ಸದಸ್ಯರನ್ನು ಆಗ್ರಹಿಸಿದ್ದರು. ಆದರೆ ಆಟಗಾರರು ಮಾತ್ರ ಐಪಿಎಲ್ ಅನ್ನೇ ಬಯಸಿದರು! ಒಟ್ಟಾರೆ ಸ್ಪಷ್ಟ ನಿರ್ಧಾರ ಬಂದ ಹಿನ್ನೆಲೆಯಲ್ಲಿ ತಾನೀಗ ನಿರಾಳವಾಗಿದ್ದೇನೆಂದು ಎಲ್ಗರ್ ಹೇಳಿದ್ದಾರೆ.
ಇದನ್ನೂ ಓದಿ:ವನಿತಾ ಏಕದಿನ ಶ್ರೇಯಾಂಕ: ಮಿಥಾಲಿ, ಜೂಲನ್ ಸ್ಥಾನ ಏರಿಕೆ
ಮಾನಸಿಕವಾಗಿ ಆಟಗಾರರು ಎಲ್ಲಿ ಆಡಬಹುದೆಂದು ತಿಳಿಯಲು ಎಲ್ಲರ ಜತೆ ಚರ್ಚೆ ನಡೆಸಿದ್ದೇವೆ. ಅವರೆಲ್ಲರೂ ನೀಡಿದ ಉತ್ತರದಿಂದ ನನಗೆ ಆರಾಮವಾಗಿದ್ದೇನೆ ಎಂದು ತಿಳಿಸಿದ ಎಲ್ಗರ್ ದಕ್ಷಿಣ ಆಫ್ರಿಕಾವು ಕಾಗಿಸೊ ರಬಾಡ, ಲುಂಗಿ ಎನ್‌ಗಿಡಿ ಮತ್ತು ಮಾರ್ಕೋ ಜಾನ್ಸೆನ್ ಅವರ ಸೇವೆಯಿಂದ ವಂಚಿತವಾಗಿದೆ ಎಂದರು. ಗಾಯದಿಂದ ಬಳಲುತ್ತಿರುವ ಆ್ಯನ್ರಿಚ್ ನೋರ್ಜೆ ಕೂಡ ತಂಡದಲ್ಲಿಲ್ಲ.