ಮುಂಬಯಿ : ಮಾವೋ ನಂಟು ಹೊಂದಿರುವುದಕ್ಕಾಗಿ ಪುಣೆ ಪೊಲೀಸರು ಇಂದು ಏಲ್ಗರ್ ಪರಿಷತ್ ಕೇಸಿಗೆ ಸಂಬಂಧಿಸಿ ದಲಿತ ವಿದ್ವಾಂಸ ಆನಂದ ತೇಲ್‌ತುಂಬ್‌ಡೇ ಅವರನ್ನು ಮುಂಬಯಿಯಲ್ಲಿ ಬಂಧಿಸಿದರು.
ಗೋವಾ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ನಲ್ಲಿ ಪ್ರೊಫೆಸರ್ ಆಗಿರುವ ತೇಲ್‌ತುಂಬ್‌ಡೇ ಅವರನ್ನು ಪೊಲೀಸರು ಮುಂಬಯಿ ವಿಮಾನ ನಿಲ್ದಾಣದಲ್ಲಿ, ಅವರು ಕೇರಳದಿಂದ ಬಂದಿಳಿದೊಡನೆಯೇ ವಶಕ್ಕೆ ತೆಗೆದುಕೊಂಡರು.
ತಾವು ವಶಕ್ಕೆ ಪಡೆದ ತೇಲ್‌ತುಂಬ್‌ಡೇ ಅವರನ್ನು ಮುಂಬಯಿ ಪೊಲೀಸರು ಅನಂತರ ಪುಣೆ ಪೊಲೀಸರ ವಶಕ್ಕೆ ಒಪ್ಪಿಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪುಣೆಯಲ್ಲಿನ ವಿಶೇಷ ನ್ಯಾಯಾಲಯವು ತೇಲ್‌ತುಂಬ್‌ಡೇ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ಮರುದಿನವೇ ಅವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.