Advertisement
2.50 ಕಿ.ಮೀ. ದೂರಇದು ಕುಳ, ಇಡ್ಕಿದು ಮತ್ತು ವಿಟ್ಲಮುಟ್ನೂರು ಗ್ರಾಮಗಳನ್ನು ಸಂಪರ್ಕಿಸ ಬೇಕಾದ ರಸ್ತೆ. 2.50 ಕಿ.ಮೀ. ದೂರ ವಿದೆ. ಕಾಲು ದಾರಿ ಮತ್ತು ಒಂದು ತೋಡನ್ನು ದಾಟಲು ಕಾಲುಸಂಕವಿದೆ. ಇದನ್ನು ರಸ್ತೆಯಾಗಿಸಬೇಕು, ಸೇತುವೆ ನಿರ್ಮಾಣ ಮಾಡಬೇಕೆಂದು ಸ್ಥಳೀಯರ ಆಗ್ರಹವಿತ್ತು. ಸ್ಥಳೀಯವಾಗಿ 300ರಿಂದ 400 ಕುಟುಂಬಕ್ಕೆ ಅವಶ್ಯವಾಗಿರುವ ಈ ರಸ್ತೆ ಪುತ್ತೂರು ಮತ್ತು ಬಂಟ್ವಾಳ ತಾಲೂಕನ್ನು ಸಂಪರ್ಕಿಸುತ್ತದೆ.
2008ರಲ್ಲಿ ಖಂಡಿಗ ರಾಮಚಂದ್ರ ಭಟ್ ಸಂಬಂಧಪಟ್ಟ ಇಲಾಖೆಗೆ ಪತ್ರ ಬರೆದರು. ಗ್ರಾ.ಪಂ., ತಾ.ಪಂ., ಜಿ.ಪಂ.ಗೆ, ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರು. ಇಡ್ಕಿದು ಗ್ರಾ.ಪಂ.ನಲ್ಲಿ 2010ರ ಅ. 4ರಂದು ನಿರ್ಣಯ ಕೈಗೊಳ್ಳಲಾಯಿತು. ಬಂಟ್ವಾಳ ತಹಶೀಲ್ದಾರ್ ಮೂಲಕ ನಕ್ಷೆ ರಚಿಸಲಾ ಯಿತು. ಅ. 26ರಂದು ಪಂ. ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿತು. ಅ. 28ರಂದು ಜಿ.ಪಂ.ಗೆ ಮನವಿ ಸಲ್ಲಿಸಲಾಯಿತು. ಜನಸಂಪರ್ಕ ಸಭೆಯಲ್ಲಿಯೂ ಮನವಿ ಸಲ್ಲಿಸಲಾಯಿತು. ಕಾಲುದಾರಿ ರಸ್ತೆಯಾಯಿತು
ಇಡ್ಕಿದು ಗ್ರಾ.ಪಂ. ವತಿ ಯಿಂದ ಸ್ಥಳೀ ಯರ ಮನವೊಲಿಸಿ, ಕಾಲುದಾರಿಯನ್ನು 20 ಅಡಿ ಅಗಲದ ರಸ್ತೆ ಯನ್ನಾಗಿ ಪರಿವರ್ತಿಸಲಾಯಿತು. ಒಂದು ಮೋರಿಯನ್ನು ನಿರ್ಮಿಸಲಾಯಿತು. ಆದರೆ ತೋಡನ್ನು ದಾಟುವ ಸೇತುವೆಗೆ ಪಂ. ಅನುದಾನ ಸಾಲುವುದಿಲ್ಲ. ಈ ರಸ್ತೆಯ ಅಭಿವೃದ್ಧಿಗೆ ಕನಿಷ್ಠ ಒಂದು ಕೋಟಿ ರೂ.ಗಳ ಆವಶ್ಯಕತೆಯಿದೆ.
Related Articles
Advertisement
6 ಲಕ್ಷ ರೂ. ಅನುದಾನಕಾಲುದಾರಿಯನ್ನು ರಸ್ತೆಯಾಗಿಸಲು ಗ್ರಾ.ಪಂ. ಅನೇಕರ ಮನವೊಲಿಸಿದೆ. ಸೇತುವೆಗೆ ಅನುದಾನ ಸಾಲದು. ಆದುದರಿಂದ ಗುತ್ತಿಗೆದಾರರ ಮನವೊಲಿಸಿ ಮುಳುಗು ಸೇತುವೆ ಕಾಮಗಾರಿ ಮಾಡಲಾಗಿದೆ. 6 ಲಕ್ಷ ರೂ. ಅನುದಾನ ಬಳಸಲಾಗಿದೆ. ರಸ್ತೆ ° ನಿರ್ಮಿಸಲು ಬಹಳ ಪ್ರಯತ್ನಿಸಿ, ಅದು ಯಶಸ್ವಿಯಾಗಿದೆ. 1 ಕೋಟಿ ರೂ.ಗೂ ಮಿಕ್ಕಿದ ಅನುದಾನ ಬಿಡುಗಡೆಯಾದಲ್ಲಿ ಕಾಮಗಾರಿ ಪೂರ್ತಿಯಾಗಬಹುದು. ನಾಗರಿಕರಿಗೆ ಉಪಯುಕ್ತವಾಗಬಹುದು.
– ಗೋಕುಲ್‌ದಾಸ್ ಭಕ್ತ
ಪಿಡಿಒ, ಇಡ್ಕಿದು ಗ್ರಾಮ ಪಂಚಾಯತ್ ಮೋದಿ ಸ್ಪಂದನೆ
2008ರಿಂದ ಮನವಿ ಸಲ್ಲಿಸುವ ಕಾರ್ಯ ಮಾಡಲಾಗಿದೆ. ಸ್ಥಳೀಯ ಪಂ. ಹೊರತುಪಡಿಸಿ ಇನ್ನಾರೂ ಸ್ಪಂದಿಸ ಲಿಲ್ಲ. ಇವೆಲ್ಲವನ್ನು ಪ್ರಧಾನಿ ಮೋದಿ ಗಮನಕ್ಕೆ 2017ರಲ್ಲಿ ಪತ್ರಮುಖೇನ ತಂದಿದ್ದೇನೆ. ಆಮೇಲೆ ಅವರು ಜಿ.ಪಂ.ಗೆ ಕ್ರಮ ಕೈಗೊಳ್ಳಲು ಸೂಚಿಸಿರಬೇಕು. ಯಾವ ಇಲಾಖೆ ಯಿಂದ ಅನುದಾನ ಬಿಡುಗಡೆಯಾಯಿತೆಂದು ಗೊತ್ತಿಲ್ಲ. ಮುಳುಗು ಸೇತುವೆ ನಿರ್ಮಾಣವಾಗಿದೆ. ರಸ್ತೆ ಸಂಪರ್ಕವಾಗಿದೆ. ಮೋದಿ ಸ್ಪಂದನೆಯಿಂದಲೇ ಇದಾಗಿದೆ.
– ಖಂಡಿಗ ರಾಮಚಂದ್ರ ಭಟ್ , ಹೋರಾಟದ ರೂವಾರಿ - ಉದಯಶಂಕರ್ ನೀರ್ಪಾಜೆ