ಕುಂದಾಪುರ: ಟಾರ್ಪೆಡೋಸ್ ನ್ಪೋರ್ಟ್ಸ್ ಕ್ಲಬ್ ಆಶ್ರಯದಲ್ಲಿ ಕುಂದಾಪುರದ ಗಾಂಧಿ ಮೈದಾನದಲ್ಲಿ ನಡೆದ ಟಿಪಿಎಲ್ 2017 ಅಂತಾರಾಷ್ಟ್ರಿಯ ಕ್ರಿಕೆಟ್ ಕೂಟದ ಫೈನಲ್‌ನಲ್ಲಿ ಇಲೆವೆನ್ ವಾರಿಯರ್ ದುಬೈ ತಂಡವು ಉಡುಪಿ ಬಾಯ್ಸ ತಂಡವನ್ನು ಎಂಟು ವಿಕೆಟ್‌ಗಳಿಂದ ಸೋಲಿಸಿ ಟಿಪಿಎಲ್-2017 ಟ್ರೋಫಿ ಮತ್ತು ರೂ. 10 ಲಕ್ಷ ನಗದು ಬಹುಮಾನವನ್ನು ತನ್ನದಾಗಿಸಿಕೊಂಡಿತು. ರನ್ನರ್ ಅಪ್ ಪಡೆದ ಉಡುಪಿ ಬಾಯ್ಸ ತಂಡ ಟ್ರೋಫಿ ಮತ್ತು 5 ಲಕ್ಷ ರೂ. ನಗದು ಪಡೆಯಿತು.
ಮೊದಲು ಬ್ಯಾಟಿಂಗ್ ನಡೆಸಿದ ಉಡುಪಿ ತಂಡ ಹತ್ತು ಓವರ್‌ಗಳಲ್ಲಿ 59 ರನ್ ಗಳಿಸಲಷ್ಟೇ ಯಶಸ್ವಿಯಾಯಿತು. 60 ರನ್ ಗುರಿಯನ್ನು ಬೆನ್ನತ್ತಿದ ದುಬೈ ತಂಡ ಅರ್ಜುನ್ ಅವರ 33 ರನ್ ಗಳಿಕೆಯ ನೆರವಿನೊಂದಿಗೆ ಕೇವಲ ಎರಡು ವಿಕೆಟ್ ನಷ್ಟದಲ್ಲಿ ಗುರಿ ತಲುಪಿತು.
ಜೆಫ್ ಮಾಡೆಲ್ ಗೋವಾ ತಂಡದ ಬಂಟಿ ಪಾಟೀಲ್ ಸರಣಿ ಶ್ರೇಷ್ಠ ಪ್ರಶಸ್ತಿಗಾಗಿ ನೀಡಲಾಗುವ ಬೈಕ್‌ನ್ನು ತನ್ನದಾಗಿಸಿಕೊಂಡರು. ದುಬೈ ತಂಡದ ಸಂದೀಪ್ ಉತ್ತಮ ಬ್ಯಾಟ್ಸ್‌ಮನ್ ಮತ್ತು ದುಬೈ ತಂಡದ ಅಮರಸಿಂಗ್ ಉತ್ತಮ ಬೌಲರ್ ಪ್ರಶಸ್ತಿ ಪಡೆದರು.
ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್‌ಅವರು ಮಾತನಾಡಿ, ಕುಂದಾಪುರದಲ್ಲಿ ಅಭೂತಪೂರ್ವವಾಗಿ ಆಯೋಜಿಸಿದ ಅಂತಾರಾಷ್ಟ್ರಿಯ ಕ್ರಿಕೆಟ್ ಪಂದ್ಯದ ಬಗ್ಗೆ ಮೆಚ್ಚುಗೆ ಸೂಚಿಸಿದರು.
ಮಾಜಿ ಸಂಸದ ಕೆ.ಜಯಪ್ರಕಾಶ್ ಹೆಗ್ಡೆ , ಯಶಪಾಲ್ ಸುವರ್ಣ, ಡಾ|ಕೃಷ್ಣ ಪ್ರಸಾದ್, ಮಂಗಳೂರು ಮಹಾನಗರಪಾಲಿಕೆ ಸದಸ್ಯೆ ಪ್ರತಿಭಾ ಕುಳಾಯಿ, ಹಿರಿಯ ನ್ಯಾಯವಾದಿ ರವಿಕಿರಣ್ ಮುಡೇìಶ್ವರ, ಉದ್ಯಮಿಗಳಾದ ಗಣೇಶ ಕಿಣಿ ಬೆಳ್ವೆ, ಸದಾನಂದ ನಾವುಡ, ಹಿರಿಯ ಸಲಹೆಗಾರ ಕೆ.ಶ್ರೀನಿವಾಸ ಪ್ರಭು, ಮಂಗಳೂರಿನ ಚಾರ್ಟ್‌ರ್ಡ್ ಅಕೌಂಟೆಂಟ್ ಎಸ್.ಎಸ್. ನಾಯಕ್, ಪತ್ರಕರ್ತ ರಾಜೇಶ್ ಕೆ.ಸಿ, ಟಾರ್ಪೆಡೋಸ್ ಸಂಸ್ಥೆಯ ಅಧ್ಯಕ್ಷ ಗೌತಮ್ ಶೆಟ್ಟಿ, ನಿರ್ದೇಶಕರುಗಳಾದ ಸಬ್ಲಾಡಿ ಜಯರಾಮ್ ಶೆಟ್ಟಿ, ರಮೇಶ್ ಶೆಟ್ಟಿ, ಉದ್ಯಮಿ ಗಣೇಶ್ ಕಾಮತ್, ಮುನಿಯಾಲ್ ಉದಯ ಶೆಟ್ಟಿ, ಸುಜೇತ್ ಪೈ ಮೊದಲಾದವರು ಉಪಸ್ಥಿತರಿದ್ದರು.
ಟಾರ್ಪೆಡೋಸ್ ಸಂಸ್ಥೆಯ ಗೌರವಾಧ್ಯಕ್ಷ ವಿಜಯನಾಥ್ ಹೆಗ್ಡೆ ಸ್ವಾಗತಿಸಿದರು, ವಿಲಾಸ್ ಹೆಗ್ಡೆ ಬೆಂಗಳೂರು ನಿರೂಪಿಸಿದರು. ನಾರಾಯಣ ಶೆಟ್ಟಿ ಮಾರ್ಕೋಡು ವಂದಿಸಿದರು.