Advertisement

ಎಲಿವೇಟ್‌- 2018: ಅನುದಾನಕ್ಕೆ 77 ಸ್ಟಾರ್ಟ್‌ ಅಪ್‌ ಆಯ್ಕೆ

06:00 AM Sep 12, 2018 | |

ಬೆಂಗಳೂರು: ಹೊಸ ಉದ್ಯೋಗ ಸೃಷ್ಟಿ ಹಾಗೂ ಆರ್ಥಿಕತೆ ಬೆಳವಣಿಗೆಗೆ ಸಹಕಾರಿ ಎನಿಸಿರುವ ನವೋದ್ಯಮ (ಸ್ಟಾರ್ಟ್‌ಅಪ್‌)ಗಳಿಗೆ ಉತ್ತೇಜನ ನೀಡುವ ಸಲುವಾಗಿ ರಾಜ್ಯ ಸರ್ಕಾರ ಆರಂಭಿಸಿರುವ “ಎಲಿವೇಟ್‌ 2018′ ಕಾರ್ಯಕ್ರಮದಡಿ 77 ಕ್ರಿಯಾಶೀಲ ಸ್ಟಾರ್ಟ್‌ಅಪ್‌ಗ್ಳು ಅನುದಾನಕ್ಕೆ ಆಯ್ಕೆಯಾಗಿವೆ.

Advertisement

ರಾಜ್ಯ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಯು ನಗರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ “ಎಲಿವೇಟ್‌- 2018’ರಡಿ ಅನುದಾನಕ್ಕಾಗಿ ಅರ್ಹ ಸ್ಟಾರ್ಟ್‌ಅಪ್‌ಗ್ಳ ಆಯ್ಕೆ ಪ್ರಕ್ರಿಯೆ ನಡೆಯಿತು. ಸರ್ಕಾರದಿಂದ ಅನುದಾನಕ್ಕಾಗಿ ಸುಮಾರು 600ಕ್ಕೂ ಹೆಚ್ಚು ಸ್ಟಾಟ್‌ ಅಪ್‌ಗ್ಳು ಅರ್ಜಿ ಸಲ್ಲಿಸಿದ್ದವು. ಪ್ರಾಥಮಿಕ ಹಂತದಲ್ಲಿ 500 ಸ್ಟಾರ್ಟ್‌ಅಪ್‌ಗ್ಳನ್ನು ಆಯ್ಕೆ ಮಾಡಲಾಯಿತು. ನಂತರ 250 ಸ್ಟಾರ್ಟ್‌ಅಪ್‌ಗ್ಳನ್ನು ಅಂತಿಮ ಸುತ್ತಿಗೆ ಪರಿಗಣಿಸಲಾಗಿತ್ತು. ಇದರಲ್ಲಿ 246 ಸ್ಟಾರ್ಟ್‌ಅಪ್‌ಗ್ಳ ತಮ್ಮ ಪರಿಕಲ್ಪನೆ, ಯೋಜನೆಗಳ ಪರಿಚಯ ಪಡೆಯಲಾಯಿತು. ಪ್ರತಿ ವಲಯದಲ್ಲಿ ಕನಿಷ್ಠ ಶೇ.20ರಷ್ಟು ಸ್ಟಾರ್ಟ್‌ಅಪ್‌ಗ್ಳನ್ನು ಪರಿಗಣಿಸುವ ಹಾಗೂ ಆಯ್ಕೆ ಸಮಿತಿ ಶಿಫಾರಸು ಮಾಡಿದ ಸ್ಟಾಟ್‌ ìಅಪ್‌ಗ್ಳನ್ನು ಪರಿಗಣಿಸಲು ನಿರ್ಧರಿಸಲಾಗಿತ್ತು. ಅದರಂತೆ ತಜ್ಞರನ್ನು ಒಳಗೊಂಡ ಆಯ್ಕೆ ಸಮಿತಿಯು ಅಂತಿಮವಾಗಿ 77 ಸ್ಟಾರ್ಟ್‌ಅಪ್‌ಗ್ಳನ್ನು ಅನುದಾನಕ್ಕೆ ಆಯ್ಕೆ ಮಾಡಿತು. ಇದರಲ್ಲಿ 74 ಸ್ಟಾಟ್‌ ìಅಪ್‌ಗ್ಳನ್ನು ಆಯ್ಕೆ ಸಮಿತಿ ಅಂತಿಮಗೊಳಿಸಿತ್ತು. ಮೂರು ಸ್ಟಾರ್ಟ್‌ಅಪ್‌ಗ್ಳು ಉತ್ತಮ ಅಂಕ ಗಳಿಸಿದ್ದರಿಂದ ಅವುಗಳನ್ನು ಅನುದಾನಕ್ಕೆ ಪರಿಗಣಿಸಲಾಗಿದೆ. 

ಕಾರ್ಯಕ್ರಮದಲ್ಲಿ ಅನುದಾನಕ್ಕೆ ಆಯ್ಕೆಯಾದ ಸ್ಟಾರ್ಟ್‌ ಅಪ್‌ಗ್ಳ ಹೆಸರು ಪ್ರಕಟಿಸಿದ ಐಟಿ, ಬಿಟಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಪ್ರಧಾನ ಕಾರ್ಯದರ್ಶಿ ಗೌರವ್‌ ಗುಪ್ತಾ, “ಹೊಸ ಪರಿಕಲ್ಪನೆಯಡಿ ಸ್ಟಾರ್ಟ್‌ಅಪ್‌ಗ್ಳು ರಚನೆ ಯಾಗುತ್ತಿವೆ. ಅವುಗಳನ್ನು ಗುರುತಿಸಿ ಪ್ರೋತ್ಸಾಹಿಸುವ
ಮೂಲಕ ಉದ್ಯಮಶೀಲತೆ, ಉದ್ಯೋಗಾವಕಾಶ ಹೆಚ್ಚಿಸಲು ಆದ್ಯತೆ ನೀಡಲಾಗಿದೆ. ಅದರಂತೆ ಅಂತಿಮ ಸುತ್ತಿನಲ್ಲಿ 77 ಸ್ಟಾರ್ಟ್‌ಅಪ್‌ಗ್ಳನ್ನು ಅನುದಾನಕ್ಕೆ ಆಯ್ಕೆ ಮಾಡಲಾಗಿದೆ. ಶೇ.90ರಷ್ಟು ಸ್ಟಾರ್ಟ್‌ಅಪ್‌ ಗಳಲ್ಲಿ ಮಹಿಳೆಯರೇ ಸಿಇಒಗಳಾಗಿರುವುದು ಮಹಿಳಾ ಸಬಲೀಕರಣದ ಪ್ರತೀಕದಂತಿದೆ’ ಎಂದು ಹೇಳಿದರು.

ಆಯ್ಕೆಯಾದ ಸ್ಟಾರ್ಟ್‌ಅಪ್‌ಗ್ಳಿಗೆ 50 ಲಕ್ಷ ರೂ. ವರೆಗೆ ಅನುದಾನ ನೀಡಲಾಗುವುದು. ಆದರೆ 50 ಲಕ್ಷ ರೂ.ವರೆಗೆ ಅನುದಾನ ಪಡೆದ ಸ್ಟಾರ್ಟ್‌ಅಪ್‌ಗ್ಳ ಸಂಖ್ಯೆ ಕಡಿಮೆ ಇದ್ದಂತಿವೆ. ಸ್ಟಾರ್ಟ್‌ಅಪ್‌ಗ್ಳು ಸಲ್ಲಿಸುವ ಯೋಜನಾ ವಿವರಕ್ಕೆ ಪೂರಕವಾಗಿ 2- 3 ಹಂತಗಳಲ್ಲಿ ಅನುದಾನ ನೀಡಲಾಗುತ್ತದೆ. ಇನ್ನಷ್ಟೇ ಅನುದಾನ ಪ್ರಮಾಣ ನಿಗದಿಪಡಿಸಬೇಕಿದೆ ಎಂದರು. ಅನುದಾನಕ್ಕೆ ಆಯ್ಕೆಯಾದ ಸ್ಟಾರ್ಟ್‌ಅಪ್‌ಗ್ಳಲ್ಲಿ ಬೆಂಗಳೂರಿನ ಸ್ಟಾರ್ಟ್‌ಅಪ್‌ಗ್ಳು ಸಿಂಹಪಾಲು ಪಡೆದಿವೆ. ಮೈಸೂರು, ಉಡುಪಿ, ಉತ್ತರ ಕನ್ನಡ, ಧಾರವಾಡದ ಸ್ಟಾರ್ಟ್‌ಅಪ್‌ಗ್ಳು ಆಯ್ಕೆಯಾಗಿವೆ. ಹೈದರಾಬಾದ್‌ ಕರ್ನಾಟಕ ಭಾಗದ ಸ್ಟಾರ್ಟ್‌ಅಪ್‌ ಗಳಿಗೆ ಉತ್ತೇಜಿಸಲು 2 ಕೋಟಿ ರೂ. ಅನುದಾನ ಕಾಯ್ದಿರಿಸಲಾಗಿದೆ. ಆದರೆ ಆ ಭಾಗದ ಯಾವುದೇ ಸ್ಟಾರ್ಟ್‌ಅಪ್‌ ಆಯ್ಕೆಯಾಗದ ಕಾರಣ ಅರ್ಜಿ ಸಲ್ಲಿಸಿದ್ದ ಸ್ಟಾರ್ಟ್‌ಅಪ್‌ಗ್ಳ ಪೈಕಿ ಸೂಕ್ತವಾದುದನ್ನು ಗುರುತಿಸಿ ಉತ್ತೇಜಿಸಲು ಪ್ರಯತ್ನಿಸಲಾಗುವುದು ಎಂದು ಹೇಳಿದರು. 

ಎರಡು ಬಾರಿ ಆಯ್ಕೆ: ಎಲಿವೇಟ್‌ ಕಾರ್ಯಕ್ರಮದಡಿ ವರ್ಷದಲ್ಲಿ 2 ಬಾರಿ ಸ್ಟಾರ್ಟ್‌ಅಪ್‌ ಗಳಿಗೆ ಅನುದಾನ ನೀಡಲಾಗುತ್ತಿದೆ. ಅದರಂತೆ ಜನವರಿ/ಫೆಬ್ರವರಿಯಲ್ಲಿ ಮತ್ತೆ ಅನುದಾನಕ್ಕೆ ಸ್ಟಾರ್ಟ್‌ ಅಪ್‌ಗ್ಳನ್ನು ಆಯ್ಕೆ ಮಾಡಲಾಗುವುದು ಎಂದು ತಿಳಿಸಿದರು.

Advertisement

ಜಿಲ್ಲಾವಾರು ಆಯ್ಕೆಯಾದ ಸ್ಟಾರ್ಟ್‌ ಅಪ್‌ ಸಂಖ್ಯೆ
ಬೆಂಗಳೂರು ನಗರ  63
ಬೆಂಗಳೂರು ಗ್ರಾ.   3
ಧಾರವಾಡ     5
ಮೈಸೂರು    3
ಉಡುಪಿ    2
ಉತ್ತರ ಕನ್ನಡ   1
ಒಟ್ಟು    77
ಬೆಂಗಳೂರು-  ಶೇ.82
ಇತರೆ- ಶೇ.  18

Advertisement

Udayavani is now on Telegram. Click here to join our channel and stay updated with the latest news.

Next