Advertisement

Elephant; ಮನುಷ್ಯರಂತೆಯೇ ಅಳುವ, ಅಂತ್ಯಕ್ರಿಯೆ ನಡೆಸುವ ಆನೆ!

09:13 AM Mar 02, 2024 | Team Udayavani |

ನವದೆಹಲಿ: ಮನುಷ್ಯನಷ್ಟೇ ಅಲ್ಲದೇ ಪ್ರಾಣಿಗಳು ಸಹ ತಮ್ಮ ಮರಿ ಗಳನ್ನು ಕಳೆದುಕೊಂಡಾಗ ಜೋರಾಗಿ ಅಳುತ್ತವೆ ಮತ್ತು ಮಣ್ಣಿನಲ್ಲಿ ಹೂಳುವ ಮೂಲಕ ಅವುಗಳ ಅಂತ್ಯಸಂಸ್ಕಾರ ಮಾಡುತ್ತವೆ ಎಂಬುದನ್ನು ಭಾರತೀಯ ವಿಜ್ಞಾನಿಗಳ ತಂಡವೊಂದು ಪತ್ತೆಹಚ್ಚಿದೆ.

Advertisement

ಈ ಬಗ್ಗೆ ತ್ರೆಟಂಡ್‌ ಟಾಕ್ಸಾ ಪತ್ರಿಕೆ ಯಲ್ಲಿ ವಿಜ್ಞಾನಿಗಳ ತಂಡ ಲೇಖನ ಪ್ರಕಟಿಸಿದೆ. ಆ ಪ್ರಕಾರ ಸತ್ತ ಮರಿಯ ಅಂತ್ಯಸಂಸ್ಕಾರ ಮಾಡಲು ಹಿಂಡಿನಲ್ಲಿ ಆನೆಗಳು ತೆರಳುವುದಲ್ಲದೇ, ಅವುಗ ಳನ್ನು ಸಮಾಧಿ ಮಾಡುತ್ತವೆ ಎಂದು ಉಲ್ಲೇಖೀಸಲಾಗಿದೆ. ಉತ್ತರ ಭಾರತದ ಬಂಗಾಳ ಪ್ರಾಂತ್ಯದಲ್ಲಿ 5 ಆನೆಮರಿ ಗಳನ್ನು ಹೂಳಿರುವುದನ್ನು ಪತ್ತೆಹಚ್ಚ ಲಾಗಿದ್ದು, ಪ್ರತಿಯೊಂದರಲ್ಲೂ ಸತ್ತ ಮರಿಯನ್ನು ಆನೆಗಳ ಹಿಂಡು ತಮ್ಮ ಸೊಂಡಿಲು ಮತ್ತು ಕಾಲುಗಳ ಸಹಾಯ ದಿಂದ ಗುಳಿಯವರೆಗೂ ಕೊಂಡೊಯ್ದೆ ಕಾಲು ಮೇಲಿರುವಂತೆ ಮಾಡಿ ಮಣ್ಣು ಮುಚ್ಚಿವೆ.

ಎಲ್ಲಾ ಪ್ರಕರಣಗಳನ್ನು ಡಿಜಿಟಲ್‌ ಫೋಟೋ ಗ್ರಫಿ ಮತ್ತು ಶವ ಪರೀಕ್ಷೆಯಿಂದ ಸ್ಪಷ್ಟಪಡಿಸಿ ಕೊಳ್ಳಲಾಗಿದೆ. ಆಫ್ರಿಕಾ , ಏಷ್ಯಾದಲ್ಲಿನ ಆನೆಯ ಪ್ರಬೇಧಗಳು ಮರಿಗಳನ್ನು ಮಣ್ಣು ಮಾಡಿದ ಬಳಿಕ ಸಮಾಧಿಗೆ ಭೇಟಿ ನೀಡಿ, ಅಲ್ಲಿ ಕೆಲ ಸಮಯವನ್ನು ಕಳೆಯುತ್ತವೆ ಎಂದು ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next