Advertisement

Elephant Survey ನಾಗರಹೊಳೆ ಉದ್ಯಾನವನದಲ್ಲಿ 2ನೇ ದಿನದ ಆನೆ ಗಣತಿ ಯಶಸ್ವಿ

08:51 PM May 24, 2024 | Team Udayavani |

ಹುಣಸೂರು: ನಾಗರಹೊಳೆ ಉದ್ಯಾನವನದ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಎರಡನೇ ದಿನದ ಗಜ ಗಣತಿ ಕಾರ್ಯದಲ್ಲಿ ಲೈನ್ ಟ್ರಾನ್ಸೆಕ್ಟ್ ಮೂಲಕ ಆನೆಗಳ ಲದ್ದಿ, ಹೆಜ್ಜೆ ಗುರುತುಗಳನ್ನು ದಾಖಲಿಸಲಾಯಿತು.

Advertisement

ಉದ್ಯಾನದೊಳಗೆ ಗಣತಿ ಕಾರ್ಯಕ್ಕಾಗಿ ಎಲ್ಲ 8 ವಲಯಗಳಲ್ಲಿ ಮೊದಲೇ ನಿರ್ಮಿಸಿರುವ ಎರಡು ಕಿ.ಮೀ.ಟ್ರಾನ್ಸೆಕ್ಟ್ ಲೈನ್‌ನಲ್ಲಿ ಮುಂಜಾನೆ 6ರಿಂದ ತರಬೇತಿ ಗಣತಿದಾರರು ಎರಡು ಕಿ.ಮೀ.ದೂರದವರೆಗೆ ನಡಿಗೆಯಲ್ಲಿ ಗಣತಿದಾರರು ತೆರಳಿ ಎರಡೂ ಬದಿ ಕಾಣುವ ಆನೆಗಳ ಲದ್ದಿ, ಹೆಜ್ಜೆ ಗುರುತುಗಳನ್ನು ದಾಖಲಿಸಿಕೊಂಡರು.

ಡಿಸಿಎಫ್ ಹರ್ಷಕುಮಾರ್ ಚಿಕ್ಕನರಗುಂದರವರು ವಿವಿಧ ವಲಯದಲ್ಲಿ ನಡೆದ ಗಣತಿ ಕಾರ್ಯವನ್ನು ಖುದ್ದಾಗಿ ಪರಿಶೀಲಿಸಿ ಗಣತಿ ಸಿಬ್ಬಂದಿಗೆ ಮಾರ್ಗದರ್ಶನ ನೀಡಿದರು. ಎಸಿಎಫ್ ರಂಗಸ್ವಾಮಿ, ಆರ್‌ಎಫ್‌ಓ ಭರತ್ ಮತ್ತಿತರರಿದ್ದರು.

ಇಂದು ಕೆರೆಗಳ ಬಳಿ ಗಣತಿ: ಗಣತಿಯ ಕೊನೆ ದಿನವಾದ ಶನಿವಾರದಂದು ಉದ್ಯಾನದ ಕೆರೆಗಳ ಬಳಿ ಗಣತಿ ಸಿಬ್ಬಂದಿಗಳು ಮುಂಜಾನೆಯಿಂದ ಸಂಜೆವರೆಗೂ ಕುಳಿತು ನೀರು ಕುಡಿಯಲು ಕೆರೆಗಳಿಗೆ ಬರುವ ಆನೆಗಳ ಛಾಯಾಚಿತ್ರದೊಂದಿಗೆ ಮಾಹಿತಿ ದಾಖಲಿಸುವರು.

Advertisement
Advertisement

Udayavani is now on Telegram. Click here to join our channel and stay updated with the latest news.

Next