Advertisement

ಅಂತೂ ಇಂತೂ ಪೂರಮ್‌ಗೆ ಬಂದ ರಾಮಚಂದ್ರನ್‌

09:23 AM May 14, 2019 | Sriram |

ತಿರುವನಂತಪುರ: ಕೇರಳದ ತೃಶ್ಶೂರ್‌ನ ಅತ್ಯಂತ ಜನಪ್ರಿಯ ಪೂರಮ್‌ ಹಬ್ಬ ಈ ಬಾರಿಯೂ ಆನೆ ರಾಮಚಂದ್ರನ್‌ನೊಂದಿಗೆ ಸುಸೂತ್ರವಾಗಿ ನಡೆಯಿತು. ಇಡೀ ಹಬ್ಬದ ಪ್ರಮುಖ ಆಕರ್ಷಣೆಯಾಗಿದ್ದ 54 ವರ್ಷದ ಒಕ್ಕಣ್ಣ ಆನೆ ತೆಚ್ಚಿಕೊಟ್ಟುಕಾವು ರಾಮಚಂದ್ರನ್‌, ಬೆಳಗ್ಗೆ 10.30ಕ್ಕೆ ಸರಿಯಾಗಿ ವಡಕ್ಕುಮ್‌ನಾಥನ್‌ ದೇಗುಲದ ಬಾಗಿಲನ್ನು ತೆರೆದಾಗ ಅಲ್ಲಿ ಸೇರಿದ್ದ 10 ಸಾವಿರಕ್ಕೂ ಹೆಚ್ಚು ಜನರ ಸಂಭ್ರಮ ನೂರ್ಮಡಿಸಿತ್ತು.

Advertisement

ಆನೆ ಭಾಗವಹಿಸಲು ಆರಂಭದಲ್ಲಿ ಸ್ಥಳೀಯ ಆಡಳಿತ ಅನುಮತಿ ನೀಡದಿರುವುದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಅಲ್ಲಲ್ಲಿ ಪ್ರತಿಭಟನೆ‌ಗಳೂ ಆರಂಭವಾಗಿದ್ದವು. ಆದರೆ ವೈದ್ಯರು ಆನೆಯನ್ನು ಪರಿಶೀಲಿಸಿ ಅನುಮತಿ ನೀಡಿದ ಅನಂತರ, ಜಿಲ್ಲಾಡಳಿತವೂ ಅಸ್ತು ಎಂದಿತ್ತು. ಆದರೆ ಕೇವಲ ದೇವಸ್ಥಾನದ ಬಾಗಿಲನ್ನು ತೆರೆದ ಆನೆ ಹೆಚ್ಚು ಹೊತ್ತು ಅಲ್ಲಿ ನಿಲ್ಲದೇ ವಾಪಸಾಯಿತು. ಹಬ್ಬದ ಪೂರ್ಣ ಕಾರ್ಯಕ್ರಮದಲ್ಲಿ ಭಾಗಿಯಾಗದೇ ಸುಮಾರು ಒಂದು ಗಂಟೆಯಷ್ಟೇ ದೇಗುಲದ ಬಳಿ ಇತ್ತು. ಹೀಗಾಗಿ ಮೊದಲೇ ವಾಪಸಾಗಿದ್ದಕ್ಕೆ ಜನರು ಬೇಸರ ವ್ಯಕ್ತಪಡಿಸಿದ್ದು ಕಂಡುಬಂತು. ಆನೆ ಸಹಜವಾಗಿಯೇ ವರ್ತಿಸುತ್ತಿತ್ತು. ಸ್ಥಳೀಯಾಡಳಿತವು ಎಲ್ಲ ವಿಧಿವಿಧಾನಗಳನ್ನೂ ಆನೆ ಪೂರೈಸುವುದಕ್ಕೆ ಅವಕಾಶ ನೀಡಬೇಕಿತ್ತು ಎಂದು ಜನರು ಅಭಿಪ್ರಾಯಪಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next