Advertisement

Elephant: ಕಾಡಾನೆ ದಾಳಿಗೆ ಕಾಫಿನಾಡಿನಲ್ಲಿ ಮತ್ತೊಂದು ಬಲಿ, ಕಾರ್ಮಿಕನ ಮೇಲೆರಗಿದ ಒಂಟಿ ಸಲಗ

04:31 PM Mar 22, 2024 | Team Udayavani |

ಚಿಕ್ಕಮಗಳೂರು: ಕಾಡಾನೆ ದಾಳಿಗೆ ಕಾಫಿನಾಡಿನಲ್ಲಿ ಮತ್ತೋರ್ವ ಕಾರ್ಮಿಕ ಬಲಿಯಾಗಿದ್ದಾನೆ, ಇತ್ತೀಚಿನ ದಿನದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಸುತ್ತ ಕಾಡಾನೆ ಹಾವಳಿ ಜಾಸ್ತಿಯಾಗಿದ್ದು ಜನರು ಮನೆಯಿಂದ ಹೊರಬರಲು ಆತಂಕ ಪಡುವ ವಾತಾವರಣ ನಿರ್ಮಾಣವಾಗಿದೆ.

Advertisement

ಇದಕ್ಕೆ ಪೂರಕವೆಂಬಂತೆ ತಾಲೂಕಿನ ಕೆಂಚೇನಹಳ್ಳಿಯಲ್ಲಿ ಕಾರ್ಮಿಕನ ಮೇಲೆ ಒಂಟಿ ಸಲಗ ದಾಳಿ ಮಾಡಿದೆ ಗಂಭೀರ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸುವ ವೇಳೆ ಮೃತಪಟ್ಟಿದ್ದಾರೆ.

ಮೃತ ವ್ಯಕ್ತಿಯನ್ನು ತಮಿಳುನಾಡು ಮೂಲದ ಶ್ರೀಧರ್ ಎನ್ನಲಾಗಿದೆ.

ತಮಿಳುನಾಡಿನಿಂದ ಕಾಫಿ ತೋಟದ ಕೆಲಸಕ್ಕೆ ಬಂದಿದ್ದ ಶ್ರೀಧರ್ ಕುಟುಂಬ ಇಂದು ಶ್ರೀಧರ್ ಅವರು ತೋಟದ ಕೆಲಸಕ್ಕೆ ತೆರಳುವ ವೇಳೆ ಕಾಡಾನೆ ಏಕಾಏಕಿ ದಾಳಿ ನಡೆಸಿದೆ.

Advertisement

ಕುಟುಂಬಸ್ಥರ ಆಕ್ರಂದನ:
ಶ್ರೀಧರ್ ಕುಟುಂಬ ಆಸ್ಪತ್ರೆ ಬಳಿ ಜಮಾಯಿಸಿದ್ದು ಆಕ್ರೋಶ ಮುಗಿಲುಮುಟ್ಟಿದೆ, ಅಲ್ಲದೆ ಅರಣ್ಯ ಇಲಾಖೆಯ ವಿರುದ್ಧ ಸ್ಥಳೀಯರು ಆಕ್ರೋಶ ಹೊರ ಹಾಕಿದ್ದಾರೆ.

ಕೆ.ಆರ್.ಪೇಟೆ, ಕೆಂಚೇನಹಳ್ಳಿ ಸುತ್ತಮುತ್ತ ಒಂಟಿ ಸಲಗ ಓಡಾಡುತ್ತಿದ್ದು ಕಳೆದ ಎರಡು ವರ್ಷದಲ್ಲಿ ಆನೆ ದಾಳಿಗೆ ಐದಕ್ಕೂ ಹೆಚ್ಚು ಜನ ಬಲಿಯಾಗಿದ್ದಾರೆ.

ಇದನ್ನೂ ಓದಿ: Vijayapura; ಫೇಸ್‌ಬುಕ್‌ ನಲ್ಲಿ ಧರ್ಮ-ಪಕ್ಷದ ವಿರುದ್ಧ ಪೋಸ್ಟ್: ಅತಿಥಿ ಶಿಕ್ಷಕನಿಗೆ ನೋಟಿಸ್

Advertisement

Udayavani is now on Telegram. Click here to join our channel and stay updated with the latest news.

Next