Advertisement

ನಿತ್ರಾಣಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಆನೆ ಸಾವು

12:55 PM Jun 16, 2017 | Team Udayavani |

ಹುಣಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಮತ್ತಿಗೋಡುವಲಯದಲ್ಲಿ ವಾರದಿಂದ ನಿತ್ರಾಣ ಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದ, ಸುಮಾರು 65 ವರ್ಷದ ವರ್ಷದ ಹೆಣ್ಣಾನೆ ಚಿಕಿತ್ಸೆ ಫ‌ಲಕಾರಿಯಾಗದೆ ಮೃತಪಟ್ಟಿದೆ.

Advertisement

ಉದ್ಯಾನವನದ ಕಲ್ಲಳ್ಳ ವಲಯದಿಂದ ಹೊರಬಂದ ಹೆಣ್ಣಾನೆಯು ಮತ್ತಿಗೂಡು ವಲಯದ ಅಡಗುಂಡಿ ಹಾಡಿಯ ಬಳಿಯಲ್ಲಿ ಸಾವನ್ನಪ್ಪಿದೆ, ಹೆಣ್ಣಾನೆಕಾಲಿಗೆ ಗಾಯವಾಗಿದ್ದರಿಂದಾಗಿ ನಿತ್ರಾಣಗೊಂಡು ಲಕ್ಷಂತೀರ್ಥ ನದಿ ನೀರಿನಲ್ಲೇ ಬೀಡು ಬಿಟ್ಟಿತ್ತು. ವಿಷಯ ತಿಳಿದ ಅರಣ್ಯ ಇಲಾಖೆ ಅಧಿಕಾರಿಗಳು ಸಾಕಾನೆಗಳ ಮೂಲಕ ಮೇಲೆತ್ತಿ ಚಿಕಿತ್ಸೆ ಕೊಡಿಸುತ್ತಿದ್ದರಾದರೂ ಫ‌ಲಕಾರಿಯಾಗದೆ ಮೃತಪಟ್ಟಿದೆ.

ಆನೆಯ ಎಡಗಾಲು, ಮರ್ಮಾಂಗ, ತೊಡೆ, ಎಡಗಣ್ಣಿನ ಭಾಗಕ್ಕೂ ಗಾಯವಾಗಿತ್ತು, ಕಣ್ಣಿನ ದೃಷ್ಟಿ ಸಹ ಮಂದವಾಗಿತ್ತು. ಚಿಕಿತ್ಸೆ ಸಂದರ್ಭದಲ್ಲಿ ಆನೆಯನ್ನು ಮೇಲೆತ್ತಲು ಮತ್ತಿಗೋಡು ಸಾಕಾನೆ ಕ್ಯಾಂಪಿನಲ್ಲಿರುವ  ಸಾಕಾನೆಗಳಾದ ಅಭಿಮನ್ಯು, ಭೀಮ, ಕೃಷ್ಣ, ಗೋಪಾಲ ಹಾಗೂ ದ್ರೋಣ ಹರಸಾಹಸ ಪಟ್ಟಿದ್ದಲ್ಲದೆ, ವೆದ್ಯ ಡಾ.ಉಮಾಶಂಕರ್‌ ಸತತ ಚಿಕಿತ್ಸೆ ನೀಡುತ್ತಿದ್ದರಾದರೂ ಫ‌ಲಕಾರಿಯಾಗದೆ ಆನೆ ಕೊನೆಯುಸಿರೆಳೆಯಿತು.

ಸ್ಥಳಕ್ಕೆ ಎಸಿಎಫ್ ಪ್ರಸನ್ನಕುಮಾರ್‌, ಹುಣಸೂರು ವಲಯದ ಅರಣ್ಯಾಧಿಕಾರಿ ದೇಚಮ್ಮ ಭೇಟಿ ನೀಡಿ ಪರಿಶೀಲಿಸಿದರು. ಆನೆ ಶವವನ್ನು ಮರಣೋತ್ತರ ಪರೀಕ್ಷೆ ನಂತರ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಮೃತ ಆನೆಯು ಮಿಲನ ಸಂದರ್ಭದಲ್ಲಿ ಸ್ಪಂದಿಸದ ಕಾರಣ ಗಂಡಾನೆ ದಂತದಿಂದ ತಿವಿದು ಮರ್ಮಾಂಗಕ್ಕೆ ಘಾಸಿಯಾಗಿರಬಹುದೆಂದು ವೈದ್ಯರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next