Advertisement
ಒಂದೆಡೆ ಅಕಾಲಿಕ ಮಳೆಯಿಂದ ರೈತರು ತತ್ತರಿಸಿದ್ದು, ಹಾಗೂ ಕೈಗೆ ಬಂದ ಬೆಳೆಯನ್ನು ಕಾಡಾನೆಗಳು ನಾಶ ಪಡಿರುವುದರಿಂದ ರೈತರ ಪರಿಸ್ಥಿತಿ ಚಿಂತಾಜನಕವಾಗಿದೆ. ಈ ಮೂವರ ಗದ್ದೆಯಲ್ಲದೆ ಇನ್ನು ಹಲವು ಕಾಫಿ ತೋಟಗಳಲ್ಲಿ ಕಾಡಾನೆಗಳು ದಾಂಧಲೆ ನಡೆಸಿದ ಪರಿಣಾಮ ಅಪಾರ ಪ್ರಮಾಣದ ನಷ್ಟ ಉಂಟಾಗಿದೆ.
Related Articles
Advertisement
ಕಾಡಾನೆ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿ ನೂರಾರು ಪ್ರತಿಭಟನೆ ಮಾಡಿದರು ಪ್ರಯೋಜನವಾಗಿಲ್ಲ. ಈ ಹಿನ್ನೆಲೆಯಲ್ಲಿ ನೂರಾರು ರೈತರೊಂದಿಗೆ ಶೀಘ್ರವಾಗಿ ದೊಡ್ಡ ಪ್ರಮಾಣದಲ್ಲಿ ಪ್ರತಿಭಟನೆ ಮಾಡಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಿ ಕಾಡಾನೆ ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಲಾಗುವುದು ಎಂದು ಕುಣಿಗನಹಳ್ಳಿ ಗ್ರಾಪಂ ಸದಸ್ಯ ಪ್ರಕಾಶ್ ತಿಳಿಸಿದರು.
ಪರಿಹಾರ ನೀಡದಿದ್ದರೆ ವಿಷ ಕುಡಿಯದೇ ವಿಧಿಯಿಲ್ಲ
ಆಲೂರು: ಆಲೂರು-ಸಕಲೇಶಪುರ ಗಡಿ ಭಾಗದ ಕೆಂಚಮ್ಮನ ಹೊಸಕೋಟೆ ಸಮೀಪವಿರುವ ಕುಣಿಗನಹಳ್ಳಿ ಗ್ರಾಮದಲ್ಲಿ ಕಾಡಾನೆಗಳ ಉಪಟಳ ಹೆಚ್ಚಾಗಿ ಗದ್ದೆಯಲ್ಲಿ ಕಟಾವಿಗೆ ಬಂದಿದ್ದ ಭತ್ತ, ಅಡಿಕೆ, ತೆಂಗು ಬೆಳೆಯನ್ನು ತುಳಿದು ನಾಶ ಮಾಡಿವೆ. ಅರಣ್ಯ ಇಲಾಖೆ ಅಧಿಕಾರಿಗಳು ಕೂಡಲೆ ಸ್ಥಳಕ್ಕೆ ಭೇಟಿ ನೀಡಿ ನಷ್ಟವಾಗಿರುವ ಬೆಳೆಗೆ ತಕ್ಕ ಪರಿಹಾರ ನೀಡಬೇಕು. ಇಲ್ಲದಿದ್ದರೆ ವಿಷ ಕುಡಿದು ಸಾಯುತ್ತೇನೆ ಎಂದು ರೈತ ಮಹಿಳೆ ರತ್ನಮ್ಮ ಎಚ್ಚರಿಸಿದ್ದಾರೆ.
ರತ್ನಮ್ಮ, ತನ್ನ ಮನೆಯಲ್ಲಿದ್ದ ಅಲ್ಪಸ್ವಲ್ಪ ಚಿನ್ನವನ್ನು ಅಡವಿಟ್ಟು ಹಣ ತಂದು, ಎರಡೂವರೆ ಎಕರೆ ಗದ್ದೆಯಲ್ಲಿ ಭತ್ತ, ಅಡಿಕೆ, ತೆಂಗು ಬೆಳೆದಿದ್ದರು. ಆನೆಗಳ ಗುಂಪು ಒಂದೆ ರಾತ್ರಿಯಲ್ಲಿ ಸಂಪೂರ್ಣ ತುಳಿದು ನಾಶ ಮಾಡಿವೆ. ಒಂದು ಪಾವು ಭತ್ತವೂ ಸಿಗುವುದಿಲ್ಲ.