ಶಿವಮೊಗ್ಗ: ಇಲ್ಲಿನ ಗಾಜನೂರು ಸಮೀಪದ ಸಕ್ರೇಬೈಲು ಆನೆ ಬಿಡಾರದ ಪುಂಡಾನೆಯೊಂದು ಮಾವುತ ಮತ್ತು ಕಾವಾಡಿಯ ಮೇಲೆ ದಾಳಿಗೆ ಯತ್ತಿಸಿದ ಘಟನೆ ರವಿವಾರ ನಡೆದಿದೆ.
ಬಿಡಾರದ ಮಣಿಕಂಠ ಎಂಬ ಪುಂಡಾನೆಯು ಸಿಬ್ಬಂದಿಯ ಮೇಲೆ ದಾಳಿಗೆ ಯತ್ನಿಸಿದೆ. ಆನೆ ದಾಳಿಗೆ ಯತ್ನಿಸಿದ ದೃಶ್ಯ ಸಮೀಪದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಮಣಿಕಂಠ ಆನೆಯ ಕಾವಾಡಿ ಇಮ್ರಾನ್ ಬಿಡಾರದಿಂದ ಕಾಡಿಗೆ ಕರೆದೊಯ್ಯುತ್ತಿದ್ದ. ಈ ವೇಳೆ ಜಂಗಲ್ ರೆಸಾರ್ಟ್ ಬಳಿ ಬಂದಾಗ ಹಿಂಬಾಲಿಸಿಕೊಂಡು ಸ್ಕೂಟಿಯಲ್ಲಿ ಬರುತ್ತಿದ್ದ ಮಾವುತ ಖಲೀಲ್ ಗಾಗಿ ಮಣಿಕಂಠ ಆನೆ ತಿರುಗಿ ನಿಂತಿದೆ. ಮಾವುತನ ಮೇಲಿನ ಸೇಡಿಗೆ ಅಕ್ರಮಣ ಮಾಡಲು ಯತ್ನಿಸಿದೆ.
ಆಕ್ರಮಣ ಸುಳಿವು ದೊರೆತ ಬೆನ್ನಲ್ಲೇ ಮಾವುತ ಖಲೀಲ್ ಸ್ಕೂಟಿ ಬಿಟ್ಟು ಓಡಿದೆ. ಈ ವೇಳೆ ಆನೆಯು ಅಲ್ಲಿದ್ದ ಕಾರಿನ ಬಳಿಯೇ ಕೋಪದಲ್ಲಿ ಬಂದಿದೆ. ಈ ವೇಳೆ ಖಲೀಲ್ ಮತ್ತೊಂದು ಕಡೆಯಿಂದ ಬಂದಿದ್ದಾನೆ. ಪುಂಡಾನೆ ಮಣಿಕಂಠ ಮಾವುತ ಖಲೀಲ್ ನನ್ನು ಮಾತ್ರ ಅಟ್ಟಾಡಿಸಿಕೊಂಡು ಹೋಗಿದೆ. ಹಿಗಾಗಿ ಕಾರಿನಲ್ಲಿದ್ದ ಮಹಿಳೆ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.
ಮಣಿಕಂಠ ಎರಡೆರಡು ಬಾರಿ ಮಾವುತನ ಮೇಲೆ ದಾಳಿಗೆ ಮುಂದಾಗಿದೆ. ಬಳಿಕ ಬಿಡಾರದ ಸಿಬ್ಬಂದಿ ಕುಮ್ಕಿ ಆನೆಗಳ ಸಹಾಯದಿಂದ ಮಣಿಕಂಠನನ್ನು ಕಟ್ಟಿಹಾಕಿದ್ದಾರೆ.
ಇದನ್ನೂ ಓದಿ:ಒಂದೇ ಟೈಟಲ್ ನಲ್ಲಿ ಎರಡು ಸಿನಿಮಾ: ಟಾಲಿವುಡ್ ನಲ್ಲಿ ವಿವಾದಕ್ಕೆ ಸಿಲುಕಿದ ಫಾಹದ್ ಫಾಸಿಲ್
ಈ ಹಿಂದೆ ಕೂಡ ಮಣಿಕಂಠ ಆನೆ ಹಲವು ಬಾರಿ ಬಿಡಾರದ ಸಿಬ್ಬಂದಿ ಮೇಲೆ ದಾಳಿ ಮಾಡಿದ್ದ. ತುಂಗಾನದಿಯಲ್ಲಿ ಸ್ನಾನ ಮಾಡಿಸುವಾಗ ಮಾವುತನ ಮೇಲೆ ದಾಳಿ ಮಾಡಿದ್ದ. ತನ್ನ ಆಕ್ರಮಣಕಾರಿ ಬುದ್ಧಿಯಿಂದ ಬಿಡಾರದಲ್ಲಿ ಪುಂಡಾನೆ ಎಂದೇ ಕುಖ್ಯಾತಿಯಾಗಿದ್ದಾನೆ.