Advertisement

Video: ದೇವಸ್ಥಾನದ ಉತ್ಸವದ ವೇಳೆ ದೇವರನ್ನು ಹೊತ್ತ ಆನೆಯ ರಂಪಾಟ… ಹಲವು ಮಂದಿಗೆ ಗಾಯ

08:58 AM Mar 24, 2024 | Team Udayavani |

ತಿರುವನಂತಪುರಂ: ದೇವಸ್ಥಾನದ ಉತ್ಸವದ ಮೆರವಣಿಗೆ ನಡೆಯುತ್ತಿರುವ ವೇಳೆ ದೇವರನ್ನು ಹೊತ್ತ ಆನೆಯೊಂದು ಯೂಚಿಗೆದ್ದು ಜೊತೆಗಿದ್ದ ಇನ್ನೊಂದು ಆನೆಯ ಮೇಲೆ ದಾಳಿ ನಡೆಸಿದ ಘಟನೆ ಶುಕ್ರವಾರ ನಡೆದಿದೆ.

Advertisement

ಶುಕ್ರವಾರ ತ್ರಿಶೂರ್‌ನ ತರಕ್ಕಲ್ ದೇವಸ್ಥಾನದ ಉತ್ಸವದ ನಡೆಯುತ್ತಿದ್ದ ವೇಳೆ, ‘ಅಮ್ಮತಿರುವಾಡಿ’ ದೇವರ ಮೆರವಣಿಗೆಯಲ್ಲಿ ಗುರುವಾಯೂರ್ ರವಿಕೃಷ್ಣನ್ ಎಂಬ ಆನೆ ಇನ್ನೊಂದು ಆನೆ ಪುತ್ತುಪ್ಪಲ್ಲಿ ಅರ್ಜುನನ್ ನಡುವೆ ಕಾದಾಟ ನಡೆದಿದೆ. ಈ ವೇಳೆ ಆನೆಯ ಮಾವುತ ಶ್ರೀಕುಮಾರ್ (53) ಮೂರು ಬಾರಿ ದಾಳಿಯಿಂದ ಪಾರಾಗಿದ್ದರೂ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಕೂಡಲೇ ಅವರನ್ನು ಕೂರ್ಕೆಂಚೇರಿಯ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಯಿತು ಎಂದು ಹೇಳಲಾಗಿದೆ. ಅಷ್ಟುಮಾತ್ರವಲ್ಲದೆ. ಮೆರವಣಿಗೆ ಮೊದಲು ನೆರೆದಿದ್ದ ಜನರು ಭಯದಿಂದ ಓಡುವ ಭರದಲ್ಲಿ ಬಿದ್ದು ಗಾಯಗೊಂಡಿದ್ದಾರೆ.

ಕಾದಾಟ ನಡೆಸುತ್ತಿದ್ದ ಆನೆಗಳನ್ನು ಶಾಂತಗೊಳಿಸಲು ಸುಮಾರು ಒಂದುಗಂಟೆಗಳ ಕಾಲ ಹರಸಾಹಸ ಪಡಬೇಕಾಯಿತು ಎಂದು ಹೇಳಲಾಗಿದೆ.

ಸುರಕ್ಷತಾ ಕ್ರಮ:
ಆನೆಗಳ ದಾಳಿಯ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ದೇವಳದ ಉತ್ಸವ ಕಾರ್ಯಕ್ರಮ ನಡೆಸುವ ವೇಳೆ ಆನೆಗಳನ್ನು ಬಳಸುವುದಾದರೆ ಹೆಚ್ಚಿನ ಸುರಕ್ಷಿತ ಕ್ರಮ ಕೈಗೊಳ್ಳಬೇಕೆಂದು ದೇವಳದ ಆಡಳಿತ ಮಂಡಳಿ ನಿರ್ಧರಿಸಿದೆ, ಅಲ್ಲದೆ ಭಕ್ತರ ಹಿತದೃಷ್ಟಿಯಿಂದ ಮುಂಜಾಗ್ರತಾ ವಹಿಸುವುದು ಸೂಕ್ತ ಎಂದು ಆಡಳಿತ ಮಂಡಳಿ ನಿರ್ಧಾರಕ್ಕೆ ಬಂದಿದೆ.

 

Advertisement

Advertisement

Udayavani is now on Telegram. Click here to join our channel and stay updated with the latest news.

Next