Advertisement

ಹುಣಸೂರು : ಗ್ರಾಮಕ್ಕೆ ನುಗ್ಗಿದ ಒಂಟಿ ಸಲಗ, ಹಸುವಿನ ಮೇಲೆ ದಾಳಿ, ಹಸು ಸ್ಥಳದಲ್ಲೇ ಸಾವು

02:41 PM May 02, 2021 | Team Udayavani |

ಹುಣಸೂರು : ತಾಲೂಕಿನ ನೇರಳ ಕುಪ್ಪೆ ಗ್ರಾಮದ ತಿಮ್ಮಶೆಟ್ಟಿ ಎಂಬುವವರ ಕೊಟ್ಟಿಗೆಗೆ ನುಗ್ಗಿದ ಒಂಟಿ ಸಲಗವೊಂದು ಅಲ್ಲಿದ್ದ ಹಸುವಿನ ಮೇಲೆ ದಾಳಿ ಮಾಡಿದೆ. ಈ ಹಿನ್ನೆಲೆಯಲ್ಲಿ ಹಸು ಸ್ಥಳದಲ್ಲೇ ಸಾವನ್ನಪ್ಪಿದೆ.

Advertisement

ಇನ್ನು ಅದೇ ಗ್ರಾಮದ ಲೋಕೇಶ್, ಗುರುರಾಜ್, ಸಹದೇವ, ಬಸವರಾಜ್ ತುಂಬಾ ಶೆಟ್ಟಿಗೆ ಸೇರಿದ ಬಾಳೆ ಮಾವು ಹಲಸು ಸೇರಿದಂತೆ ಇನ್ನಿತರ ಬೆಳೆಗಳನ್ನು ತಿಂದು ಹಾಳು ಮಾಡಿದೆ. ಆನೆಯ ದಾಳಿಯ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಆಗ್ರಹ : ಒಂದೆಡೆ ಹುಲಿ, ಚಿರತೆ ಮತ್ತೊಂದೆಡೆ ಕಾಡಾನೆಗಳ ದಾಳಿ ಯಿಂದ ಈ ಭಾಗದ ರೈತರು ಜೀವಭಯದಿಂದ ಬದುಕು ಸಾಗಿಸುವ ಸಂಕಷ್ಟದ ಪರಿಸ್ಥಿತಿ ಬಂದಿದೆ. ಈ ಕೂಡಲೇ ಅರಣ್ಯ ಇಲಾಖೆಯವರು ವನ್ಯಮೃಗಗಳು ಗ್ರಾಮದೊಳಗೆ ನುಗ್ಗದಂತೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಕಳೆದ ಸಾಲಿನಲ್ಲಿ ಇದೇ ಸಮಯದಲ್ಲಿ ಕಾಡಾನೆಗಳು ಸಾಕಷ್ಟು ಬೆಳೆಹಾನಿ ಮಾಡಿದ್ದು ಎಚ್.ಆರ್. ಗುರುರಾಜ್, ಶ್ರೀನಿವಾಸ್, ಸದಾಶಿವ, ಸಣ್ಣತಮ್ಮೇಗೌಡ, ಕಮಲಮ್ಮ ರವರಿಗೆ ಇನ್ನೂ ಸಹ ಪರಿಹಾರ ಸಿಕ್ಕಿಲ್ಲ. ಇದೀಗ ಮತ್ತೆ ವನ್ಯವ್ರಾಣಿಗಳು ಹೊರಬಂದು ಸಾಕುಪ್ರಾಣಿಗಳನ್ನು ಕೊಂದು ಹಾಕುತ್ತಿವೆ ಮತ್ತೊಂದೆಡೆ ಬೆಳೆ ನಾಶಪಡಿಸುತ್ತಿವೆ. ಇನ್ನಾದರೂ ಜನಪ್ರತಿನಿಧಿಗಳು, ಅರಣ್ಯಾಧಿಕಾರಿಗಳು ಶೀಘ್ರ ಪರಿಹಾರದ ಹಣವನ್ನು ಕೊಡಿಸಬೇಕೆಂದು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next