Advertisement
ಅರಣ್ಯ ಇಲಾಖಾ ಸಿಬ್ಬಂದಿಗಳು ಹಾಗು ಗ್ರಾಮಸ್ಥರು ವಾರದಲ್ಲಿ ಎರಡು ದಿನ ಪಟಾಕಿ ಸಿಡಿಸಿ, ಗ್ರಾಮದ ಸುತ್ತಮುತ್ತಲಿನಿಂದ ಕಾಡಾನೆಗಳನ್ನು ದೂರದ ಅರಣ್ಯ ಪ್ರದೇಶಕ್ಕೆ ಅಟ್ಟುವ ಪ್ರಯತ್ನ ನಡೆಯುತ್ತಿದೆ. ಆದರೆ ಗಜಪಡೆ ಗ್ರಾಮವನ್ನು ತೊರೆಯುತ್ತಿಲ್ಲ. ನಾಟಿಯಾದ ಭತ್ತದ ಪೈರು ಬೇರು ಹಿಡಿದು ಹಸಿರು ತಿರುಗುತ್ತಿದ್ದು, ಅದನ್ನೆ ಕಾಡಾನೆಗಳು ತಿನ್ನುತ್ತಿವೆ. ತೆಂಗಿನ ಗಿಡಗಳು ಹಾಗು ಉತ್ತಮ ತಳಿಯ ಬಾಳೆಗಿಡಗಳು ಕಾಡಾನೆಗಳಿಗೆ ಆಹಾರವಾಗುತ್ತಿರುವುದರಿಂದ ಕೃಷಿಕರು ಕಂಗಾಲಾಗಿದ್ದಾರೆ.ಕೃಷಿ ಭೂಮಿಯ ಸಮೀಪ ಮರದ ಮೇಲೆ ಅಟ್ಟಣಿಕೆ ಮಾಡಿಕೊಂಡು, ರಾತ್ರಿಯಿಡಿ ಪಟಾಕಿ ಸಿಡಿಸಿ ಕಾಡಾನೆಗಳನ್ನು ಬೆದರಿಸುವ ಪ್ರಯತ್ನವನ್ನು ಮಾಡಲಾಗುತ್ತಿದೆ. ಆದರೆ ಶಬ್ದಕ್ಕೂ ಕಾಡಾನೆಗಳು ಭಯಪಡುತ್ತಿಲ್ಲ ಎಂದು ಕೃಷಿಕ ಸಿ.ಎಲ್.ಮಂಜುನಾಥ್ ಹೇಳಿದರು.